ಕೋಪವನ್ನು ಮುಚ್ಚಿಟ್ಟುಕೊಳ್ಳುವ ಅಭ್ಯಾಸ ತಮಗಿಲ್ಲ ಎಂಬುದನ್ನು ನಟ ದರ್ಶನ್ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಬಿಡುಗಡೆಗೆ ಸಿದ್ಧವಾಗಿರುವ 'ಪೊರ್ಕಿ' ಚಿತ್ರಕ್ಕೆ ವಿಶೇಷ ಪ್ರಚಾರ ನೀಡದಿರುವುದು ದರ್ಶನ್ ಅವರಿಗೆ ತೀವ್ರ ಅಸಮಾಧಾನ ಉಂಟುಮಾಡಿದೆಯಂತೆ. ಅಲ್ಲದೆ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾದ ರಮೇಶ್ ಬಾಬು ಅವರ ಕಾರ್ಯವೈಖರಿಯ ಬಗ್ಗೆಯೂ ಅವರಿಗೆ ಸಿಕ್ಕಾಪಟ್ಟೆ ಸಿಟ್ಟಿದೆಯಂತೆ.
ಏನಾದರೂ 'ಪೊರ್ಕಿ' ಚಿತ್ರ ಗೋತಾ ಹೊಡೆದರೆ ಅದಕ್ಕೆ ರಮೇಶ್ ಬಾಬು ಅವರೇ ಜವಾಬ್ದಾರರು ಎಂದು ದರ್ಶನ್ ಗುಟುರು ಹಾಕಿದ್ದಾರಂತೆ.
ಗುಂಟೂರು ಶೈಲಿಯ ಐಡಿಯಾ ಕೊಟ್ಟವರು ಅವರೇ. ಪೊರ್ಕಿಗೆ ಸರಿಯಾದ ಯೋಜನೆ ರೂಪಿಸಿಲ್ಲ ಎಂದು ದರ್ಶನ್ ಆಕ್ಷೇಪ ವ್ಯಕ್ತಪಡಿಸಿದ್ದಾರಂತೆ. ಅಲ್ಲದೇ ಈ ಚಿತ್ರಕ್ಕೆ 7 ಕೋಟಿ ಖರ್ಚು ಮಾಡಿರುವುದಾಗಿ ರಮೇಶ್ ಬಾಬು ಹೇಳಿಕೊಂಡು ಓಡಾಡುತ್ತಿದ್ದಾರೆ. ಆದರೆ ಅಷ್ಟೇನೂ ಖರ್ಚಾಗಿಲ್ಲ ಎನ್ನುತ್ತಿದ್ದಾರಂತೆ ದರ್ಶನ್.