ನೆನಪಿರಲಿ ಚಿತ್ರದಲ್ಲಿ ನಟಿಸುವ ಮೂಲಕ ಸದಾ ನೆನಪಿನಲ್ಲಿ ಉಳಿಯುವ ನಟ ಪ್ರೇಮ್, ತಮ್ಮ ಮುದ್ದಾದ ಮಂದಹಾಸದಿಂದಲೇ ತಮ್ಮ ಅಭಿಮಾನಿಗಳ ಮನಸೆಳೆಯುತ್ತಾರೆ.
ಯಾವುದೇ ಹಬ್ಬ ಸಡಗರಗಳಿರಲಿ ಅವರು ತಮ್ಮ ಸಂಪರ್ಕದಲ್ಲಿರುವವರಿಗೆ ಮೊದಲು ಶುಭ ಸಂದೇಶ ಕಳುಹಿಸಿ ತಮ್ಮ ಸ್ನೇಹಪರತೆ ಮೆರೆಯುತ್ತಾರೆ. ಹಾಗಾಗಿಯೇ ಅವರಿಗೆ ಅಪಾರ ಅಭಿಮಾನಿಗಳ ಸಮೂಹವಿದೆ.
ಅಂದ ಹಾಗೆ ಪ್ರೇಮ್ ಅವರ ವೆಬ್ ಸೈಟ್ ಶುರುವಾಗಿದೆ. ಅದರಲ್ಲಿ ಅವರ ಕನಸುಗಳು, ಇಷ್ಟಗಳು, ಸಿನಿಮಾ ಪುರಾಣಗಳು ಸೇರಿದಂತೆ ಅವರೊಂದಿಗೆ ಮಾತನ್ನೂ ಆಡಬಹುದು. ಹಿರಿಯ ನಟ ಅಂಬರೀಶ್ ಉದ್ಘಾಟಿಸಿದ ಈ ವೆಬ್ಸೈಟ್ www.lovelystarprem.com. ನೆನಪಿರಲಿ!