ಅಂತೂ ನಟ ವಿಜಯ್ ತಾವು ಅಂದುಕೊಂಡಿದ್ದನ್ನು ಸಾಧಿಸಿಬಿಟ್ಟಿದ್ದಾರೆ. ಶಂಕರ್ ಐಪಿಎಸ್ ಚಿತ್ರದಲ್ಲಿ ವಿಜಿ ಅವರನ್ನು ನೋಡಿಬಿಟ್ಟರೆ ಥೇಟ್ ಹಾಲಿವುಡ್ ನಟ ಅರ್ನಾಲ್ಡ್ ಅವರನ್ನು ಕಂಡಂತಾಗುತ್ತದಂತೆ. ಅಷ್ಟರ ಮಟ್ಟಿಗೆ ವಿಜಿ ತಮ್ಮ ದೇಹವನ್ನು ದಂಡಿಸಿ ಬಿಲ್ಡ್ ಮಾಡಿದ್ದಾರೆ.
ಎಂಥವರನ್ನೂ ಬೆರಗುಗೊಳಿಸುವ ಅವರ ಸ್ಟೀಲ್ ದೇಹದ ಹಿಂದೆ ಅತಿಯಾದ ಕಸರತ್ತೇ ಅಡಗಿದೆ. ಕಳೆದ ಮೂರು ತಿಂಗಳಿಂದ ವಿಜಿ ಪ್ರತಿದಿನ 40 ಮೊಟ್ಟೆಗಳನ್ನು ತಿನ್ನುತ್ತಿದ್ದಾರೆ. ಸತತ ಮೂರೂವರೆ ಗಂಟೆಗಳ ಕಾಲ ಜಿಮ್ನಲ್ಲಿ ತಾಲೀಮು ನಡೆಸುತ್ತಿದ್ದಾರಂತೆ.
ಶಂಕರ್ ಐಪಿಎಸ್ ಚಿತ್ರದಲ್ಲಿ ವಿಜಿ ಅವರದ್ದು ಪೊಲೀಸ್ ಅಧಿಕಾರಿಯ ಪಾತ್ರ. ಒಬ್ಬ ಪೊಲೀಸ್ ಅಧಿಕಾರಿ ತನ್ನ ವೃತ್ತಿ ಜೀವನದಲ್ಲಿ ಹೇಗಿರಬೇಕು ಎಂಬುದನ್ನು ನನ್ನ ದೇಹ ಮತ್ತು ನಟನೆಯಿಂದ ತಿಳಿದುಕೊಂಡರೆ ಅಷ್ಟೇ ಸಾಕು ಎನ್ನುತ್ತಾರೆ ವಿಜಿ.