ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಶರ್ಮಿಳಾ ಮಾಂಡ್ರೆ, ಆರ್ಯ ನಡುವೆ ಲವ್ವಂತೆ! (Sharmila Mandre | Arya | Tamil | Karichirathe)
ಸುದ್ದಿ/ಗಾಸಿಪ್
Bookmark and Share Feedback Print
 
Sharmila Mandre
MOKSHA
ತಮಿಳು ನಟ ಆರ್ಯ ಮತ್ತು ನಮ್ಮ ಕನ್ನಡದ ಚೆಲುವೆ ಶರ್ಮಿಳಾ ಮಾಂಡ್ರೆ ನಡುವೆ ಸಿಕ್ಕಾಪಟ್ಟೆ ಲವ್ ಶುರುವಾಗಿಬಿಟ್ಟಿದೆ ಅಂತ ಇಡೀ ಗಾಂಧಿನಗರದ ತುಂಬಾ ಗುಲ್ಲೋ ಗುಲ್ಲು.

ಮೊನ್ನೆ ಮೈಸೂರಿನಲ್ಲಿ ಶರ್ಮಿಳಾ ನಟಿಸುತ್ತಿರುವ ಕರಿಚಿರತೆ ಶೂಟಿಂಗ್ ವೇಳೆ ಆರ್ಯನ ತಮಿಳು ಚಿತ್ರವೊಂದು ಅದೇ ಲೊಕೇಶನ್‌ನಲ್ಲಿ ಚಿತ್ರೀಕರಣ ನಡೆಸುತ್ತಿತ್ತು. ಆಗ ಶರ್ಮಿ ಮತ್ತು ಆರ್ಯ ಒಟ್ಟಿಗೆ ಕುಳಿತು ಊಟ ಮಾಡಿದರಂತೆ. ಈ ಬೆಳವಣಿಕೆ ಕೂಡಾ ಈ ಗುಲ್ಲಿಗೆ ಕುಮ್ಮಕ್ಕು. ಅದೇನೇ ಇರಲಿ ಈ ಬಗ್ಗೆ ಶರ್ಮಿಳಾ ಬಳಿ ಕೇಳಿದ್ರೆ ಆಕೆ, ನಾವಿಬ್ಬರೇ ಊಟ ಮಾಡಿಲ್ಲ. ನಮ್ಮ ಜೊತೆಗೆ ನಟಿ ಶ್ರೀಯಾ ಶರಣ್, ನಟ ವಿಜಯ್, ಬಾಲಿವುಡ್ ನಟಿ ಅಮೃತಾ ರಾವ್ ತಂಗಿ ಪ್ರೀತಿಕಾ ಎಲ್ಲರೂ ಇದ್ದರು ಎಂದು ಹೇಳಿ ನುಣಿಚಿಕೊಳ್ಳುತ್ತಾರೆ ಶರ್ಮಿಳಾ.
WD


ಹಾಗಾದರೆ ಇತ್ತೀಚೆಗೆ ಹೈದರಾಬಾದಿನಲ್ಲಿ ನಡೆದ ಸಿನಿಮಾ ಪ್ರಶಸ್ತಿ ಸಮಾರಂಭವೊಂದರಲ್ಲಿ ಶರ್ಮಿಳಾ ಮತ್ತು ಆರ್ಯ ಮೈ ಕೈ ತಾಗಿಸಿಕೊಂಡು ಕುಳಿತಿದ್ದರಲ್ಲ, ಅದಕ್ಕೇನು ಹೇಳ್ತೀರಿ ಅಂತ ಗಾಸಿಪ್ಪಿಗರು ಶರ್ಮಿಳಾ ಬೆನ್ನು ಬಿದ್ದಿದ್ದಾರೆ. ಆಗಲೂ ಅಷ್ಟೆ ಶರ್ಮಿಳಾ ಮತ್ತೊಂದು ಸಬೂಬು ಹೇಳುತ್ತಾರೆ. ಅಯ್ಯೋ, ಆಗ ನಾವಿಬ್ಬರೇ ಕುಳಿತಿರಲಿಲ್ಲ. ಜೆನಿಲಿಯಾ, ಮಾಧವನ್, ಶ್ರುತಿ ಹಾಸನ್, ಜೆನ್ನಿಫರ್ ಕೊತ್ವಾಲ್ ಸಹ ನಮ್ಮೊಂದಿಗಿದ್ದರು ಎನ್ನುತ್ತಾರೆ.

ಆರ್ಯ ಹಾಗೂ ನಾನು ಫ್ರೆಂಡ್ಸೇ ಅಲ್ಲ, ಜಸ್ಟ್ ಪರಿಚಯ ಅಷ್ಟೆ. ನಮ್ಮ ನಡುವೆ ಅಂಥಾ ದೊಡ್ಡ ಗೆಳೆತನವೇ ಇಲ್ಲ ಅಂದ ಮೇಲೆ ಲವ್ ಇನ್ನೆಲ್ಲಿಂದ ಎಂದು ಮರು ಪ್ರಶ್ನಿಸುತ್ತಾರೆ ತುಂಟಿ ಶರ್ಮಿಳಾ. ಹೀಗೆ ಸುದ್ದಿ ಹರಡಿದ್ದನ್ನು ಸ್ವತಃ ಆರ್ಯ ಅವರಿಗೂ ಈ ಶರ್ಮಿ ಸುದ್ದಿ ಮುಟ್ಟಿಸಿದ್ದಾಳಂತೆ. ಆರ್ಯ ಅವರೂ ಸುದ್ದಿ ಕೇಳಿ ಬಿದ್ದು ಬಿದ್ದು ನಕ್ಕರು ಎಂದು ಇದೇ ಶರ್ಮಿಳಾ ಮತ್ತೆ ಹೇಳುತ್ತಾಳೆ. ಏನೋಪ್ಪಾ ಯಾರಿಗ್ಗೊತ್ತು?!
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶರ್ಮಿಳಾ ಮಾಂಡ್ರೆ, ಆರ್ಯ, ತಮಿಳು, ಕರಿಚಿರತೆ