ಮಳೆಯಲಿ ಜೊತೆಯಲಿ ಚಿತ್ರದ ಯಶಸ್ಸಿನಿಂದ ಗಣೇಶ್ ಮತ್ತು ಅವರ ಪತ್ನಿ ಶಿಲ್ಪಾ ತುಂಬಾ ಖುಷಿಯಾಗಿದ್ದಾರಂತೆ. ಇದೇ ಖುಷಿಯಲ್ಲಿ ಅವರ ಗೋಲ್ಡನ್ ಮೂವೀಸ್ ಬ್ಯಾನರ್ನಲ್ಲಿ ಮತ್ತೊಂದು ಚಿತ್ರ ಮಾಡುವ ಸಿದ್ಧತೆಯಲ್ಲಿದ್ದಾರಂತೆ ದಂಪತಿಗಳು.
ಮುಂಬರುವ ಈ ಚಿತ್ರಕ್ಕೆ ಅದಾಗಲೇ ಸ್ಕ್ತ್ರಿಪ್ಟ್ ಕೆಲಸ ಕೈಗೆತ್ತಿಕೊಳ್ಳಲಾಗಿದೆಯಂತೆ. ಮಾತುಗಳಿಲ್ಲದ ಗಣೇಶ್ ಚಿತ್ರವನ್ನು ಅವರ ಅಭಿಮಾನಿಗಳು ಇಷ್ಟಪಡುವುದಿಲ್ಲ ಎಂಬ ಕಾರಣಕ್ಕಾಗಿ ಈ ಚಿತ್ರದಲ್ಲೂ ಮಾತುಗಳಿಗೆ ಬರವಿಲ್ಲವಂತೆ.
ಮುಂಗಾರು ಮಳೆ, ಮಳೆಯಲಿ ಜೊತೆಯಲಿ ಚಿತ್ರಗಳಲ್ಲಿ ಮಳೆಯ ದೃಶ್ಯಗಳದ್ದೇ ಕಾರುಬಾರು. ಆದರೆ ಈ ಬಾರಿ ಗಣೇಶ್, ತಮ್ಮ ಹೊಸ ಚಿತ್ರದಲ್ಲಿ ಮಳೆಯನ್ನು ಕೈ ಬಿಡಲು ತೀರ್ಮಾನಿಸಿದ್ದಾರಂತೆ.
ಎಲ್ಲವೂ ಅಂದುಕೊಂಡಂತೆ ಆದರೆ ಜೂನ್ ಅಥವಾ ಜುಲೈನಲ್ಲಿ ಅವರ ಹೊಸ ಚಿತ್ರ ಸೆಟ್ಟೇರಲಿದೆಯಂತೆ. ಅಂದಹಾಗೆ ಮಳೆಯಲಿ ಜೊತೆಯಲಿ ಚಿತ್ರವೂ ಕೂಡ ಇದೇ ವೇಳೆಗೆ ಸೆಟ್ಟೇರಿತ್ತು.