ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸುದೀಪ್-ಸೋನಿಯಾ ಅಗರ್ವಾಲ್ ನಡುವೆ ಕುಚ್ ಕುಚ್? (Sonia Agarwal | Sudeep | CCL | Kempe Gowda)
PR
'ಚಂದು' ಚಿತ್ರದ ಜೋಡಿ ಕಿಚ್ಚ ಸುದೀಪ್ ಮತ್ತು ಸೋನಿಯಾ ಅಗರ್ವಾಲ್ ನಡುವೆ ಏನೋ ನಡೀತಿದೆ ಎಂಬ ಸುದ್ದಿಗೆ ಮತ್ತೆ ಜೀವ ಬಂದಿದೆ. ಇತ್ತೀಚೆಗಷ್ಟೇ ನಡೆದ ಕ್ರಿಕೆಟ್ ಪಂದ್ಯವೊಂದರಲ್ಲಿ ಅವರಿಬ್ಬರ ನಡುವಿನ ಒಡನಾಟದ ಕುರಿತು ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ.

ಆದರೆ ಸ್ವತಃ ಸೋನಿಯಾ ಅಗರ್ವಾಲ್ ಇದನ್ನು ತಳ್ಳಿ ಹಾಕಿದ್ದಾರೆ. ನಮ್ಮಿಬ್ಬರ ನಡುವೆ ಉತ್ತಮ ಗೆಳೆತನವಿದೆ, ಅಷ್ಟೆ, ಇದೆಲ್ಲ ಮಾಧ್ಯಮಗಳ ಸೃಷ್ಟಿ ಎಂದಿದ್ದಾರೆ.

ತಮಿಳು ಚಿತ್ರ 'ವಾನಮ್' ಚಿತ್ರೀಕರಣಕ್ಕೆ ಬಂದಿದ್ದೆ, 'ಚಂದು' ಚಿತ್ರದಲ್ಲಿ ಒಟ್ಟಿಗೆ ನಟಿಸುವಾಗ ನಮ್ಮ ನಡುವೆ ಗೆಳೆತನ ಹುಟ್ಟಿತ್ತು. ಈಗಲೂ ನಮ್ಮ ನಡುವೆ ಒಳ್ಳೆಯ ಗೆಳೆತನವಿದೆ, ಫೋನ್ ಮಾಡಿ ಮಾತನಾಡಿಕೊಳ್ಳುತ್ತೇವೆ. ಈಗ ಎಲ್ಲರೆದುರು ಮಾತನಾಡಿದ್ದು ಈ ರೀತಿ ಊಹಾಪೋಹಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ ಸೋನಿಯಾ.

ಮಾರ್ಚ್ ಐದರಂದು ಬಾಲಿವುಡ್ ಮತ್ತು ದಕ್ಷಿಣದ ನಟರ ನಡುವೆ ನಡೆದ ಟ್ವೆಂಟಿ-20 ಕ್ರಿಕೆಟ್ ವೇಳೆ ಸುದೀಪ್ ಮತ್ತು ಸೋನಿಯಾ ಅಗರ್ವಾಲ್ ಒಟ್ಟಿಗೆ ಕಾಣಿಸಿಕೊಂಡಿದ್ದೇ ಇಷ್ಟೆಲ್ಲಾ ಊಹಾಪೋಹಕ್ಕೆ ಕಾರಣ.

ಈ ಊಹಾಪೋಹಕ್ಕೆ ಇನ್ನಷ್ಟು ಪುಷ್ಟಿ ಕೊಡುವ ಅಂಶವೆಂದರೆ ಸೋನಿಯಾ ದಾಂಪತ್ಯ ವಿರಸ. ತಮಿಳಿನ 'ಕಾದಲ್ ಕೊಂಡೇನ್' ಚಿತ್ರದಲ್ಲಿ ನಟಿಸಿದ್ದ ಸೋನಿಯಾ ಮತ್ತು ನಿರ್ದೇಶಕ ಸೆಲ್ವರಾಘವನ್ ಪ್ರೀತಿಸಿ ಮದುವೆಯಾಗಿದ್ದರು.

ನಟ ಧನುಷ್‌ (ರಜನಿಕಾಂತ್ ಅಳಿಯ) ಅಣ್ಣನಾಗಿರುವ ಸೆಲ್ವರಾಘವನ್ ಮತ್ತು ಸೋನಿಯಾ ಇವರ ದಾಂಪತ್ಯ 2009ರಲ್ಲಿ ಮುರಿದು ಬಿದ್ದಿತ್ತು. ಇತ್ತೀಚೆಗಷ್ಟೆ ಸೆಲ್ವರಾಘವನ್ ಅವರು ಗೀತಾಂಜಲಿ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದರು.

ಸುದೀಪ್ ಕೂಡ ವಿವಾಹಿತ. ಆದರೆ ಅವರು ಮದುವೆಯಾದ ನಂತರವೂ ಹಲವು ನಟಿಯರ ಜತೆ ತನ್ನ ಹೆಸರನ್ನು ಥಳಕು ಹಾಕಿಸಿಕೊಂಡವರು. ಹಿರಿಯ ನಟಿ ಮೀನಾ ಜತೆಗಿನ ಸಂಬಂಧ ಇದರಲ್ಲಿ ಪ್ರಮುಖವಾದದ್ದು. ರಮ್ಯಾ ಹೆಸರು ಕೂಡ ಜತೆಗೆ ಕೇಳಿ ಬಂದಿತ್ತು.

ಹಾಗಾಗಿ ಈಗ ಸೋನಿಯಾ ಹೆಸರು ಸೇರಿಕೊಂಡಿರುವುದರ ಹಿಂದೆ ಅಚ್ಚರಿಯೇನಿಲ್ಲ ಎಂದು ಗಾಂಧಿನಗರದ ಮಂದಿ ಹೇಳುತ್ತಿದ್ದಾರಾದರೂ, ಕೆಲವರ ಪ್ರಕಾರ ಇವೆಲ್ಲ ಸುದೀಪ್ ಗಿಮಿಕ್. ತನ್ನ 'ಕೆಂಪೇಗೌಡ' ಚಿತ್ರದ ಪ್ರಚಾರಕ್ಕಾಗಿ ಹೀಗೆಲ್ಲ ಮಾಡುತ್ತಿದ್ದಾರೆ.
ಇವನ್ನೂ ಓದಿ