ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸುದೀಪ್ 'ಕೆಂಪೇಗೌಡ' ರೆಡಿ; ಜ.21ಕ್ಕೆ ಆಡಿಯೋ ಬಿಡುಗಡೆ (Kempegowda | Kiccha Sudeep | Raagini | Shankare Gowda)
ಸುದ್ದಿ/ಗಾಸಿಪ್
Bookmark and Share Feedback Print
 
PR
ಗ್ಲಾಮರ್ ಐಕಾನ್ ರಾಗಿಣಿ ನಾಯಕಿಯಾಗಿರುವ, ಕಿಚ್ಚ ಸುದೀಪ್ ತಾನೇ ಪೊಲೀಸ್ ಪಾತ್ರದಲ್ಲಿ ನಟಿಸಿ, ನಿರ್ದೇಶಿಸಿರುವ 'ಕೆಂಪೇಗೌಡ' ಶೀಘ್ರದಲ್ಲೇ ಬೆಳ್ಳಿತೆರೆಗೆ ಅಪ್ಪಳಿಸಲಿದೆ. ಅದಕ್ಕೂ ಮೊದಲು ಜನವರಿ 21 ಅಥವಾ ಜನವರಿ 24ರಂದು ಚಿತ್ರದ ಆಡಿಯೋ ಬಿಡುಗಡೆಯಾಗಲಿದೆ.

ಇದು ಸೂರ್ಯ ನಟಿಸಿದ್ದ ತಮಿಳಿನ ಸೂಪರ್ ಹಿಟ್ 'ಸಿಂಗಂ' ರಿಮೇಕ್. ಅರ್ಜುನ್ ಸಂಗೀತ ನೀಡಿರುವ ಎಲ್ಲಾ ಐದು ಹಾಡುಗಳು ಉತ್ತಮವಾಗಿ ಮೂಡಿ ಬಂದಿವೆ ಎಂದು ನಿರ್ಮಾಪಕ ಶಂಕರೇ ಗೌಡ ಹೇಳಿಕೊಂಡಿದ್ದಾರೆ.

ಅದರಲ್ಲೂ ಯೋಗರಾಜ್ ಭಟ್ ಬರೆದಿರುವ 'ಹಳೆ ರೇಡಿಯೋಲಿ ಹಾಡು ಕೇಳಿ' ಎಂಬ ಹಾಡಂತೂ ಸಿಕ್ಕಾಪಟ್ಟೆ ಚೆನ್ನಾಗಿದೆಯಂತೆ. ಇನ್ನೊಂದು ಡುಯೆಟ್ ಹಾಡು ಕೂಡ ಅದೇ ಸಾಲಿನದ್ದು. ಇವೆರಡರಿಂದಾಗಿ ಹಲವು ಆಡಿಯೋ ಕಂಪನಿಗಳು ಹಕ್ಕುಗಳ ಖರೀದಿಗಾಗಿ ಭಾರೀ ಆಸಕ್ತಿ ತೋರಿಸಿದ್ದವು ಎನ್ನುವುದು ನಿರ್ಮಾಪಕರ ಹೆಮ್ಮೆಯ ಮಾತು.

ಈಗಲೂ ಚರ್ಚೆ ನಡೆಯುತ್ತಿದೆ. ಒಂದೆರಡು ದಿನದಲ್ಲಿ ಅಂತಿಮವಾಗಲಿದೆ. ನಾವಂತೂ ಆಡಿಯೋ ಮಾರಾಟದಿಂದ ದೊಡ್ಡ ಮೊತ್ತವನ್ನು ನಿರೀಕ್ಷಿಸುತ್ತಿದ್ದೇವೆ. ಇದಕ್ಕೆ ಒಪ್ಪಿದ ಆಡಿಯೋ ಕಂಪನಿಗೆ ಹಕ್ಕುಗಳು ಖಚಿತ ಎಂದರು.

'ಕೆಂಪೇಗೌಡ'ನ ಅಬ್ಬರ ಜೋರಾಗಿಯೇ ಇದ್ದಂತಿದೆ. ಆಡಿಯೋ ಬಿಡುಗಡೆಗೆ ಮೊದಲೇ ಚಿತ್ರದ ವಿತರಣೆ ಹಕ್ಕುಗಳಿಗಾಗಿ ಹಲವು ಮಂದಿ ಮುಗಿ ಬಿದ್ದಿದ್ದಾರೆ. ಭಾರೀ ಮೊತ್ತ ನೀಡುತ್ತೇವೆ ಎಂದು ಹಲವು ಮಂದಿ ಮುಂದೆ ಬಂದಿದ್ದಾರೆ ಎಂದು ಗೌಡರು ತಿಳಿಸಿದ್ದಾರೆ.

ನಿರ್ಮಾಪಕರ ಪ್ರಕಾರ ಸುದೀಪ್ ಅವರ ಈ ಹಿಂದಿನ ಯಾವುದೇ ಚಿತ್ರಗಳಿಗಿಂತ ಹೆಚ್ಚು ಬೇಡಿಕೆ ಈ ಚಿತ್ರಕ್ಕಿದೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು, ಕೆಲವೇ ಕೆಲವು ಏರಿಯಾಗಳನ್ನು ಬಿಟ್ಟುಕೊಟ್ಟು, ಬಿಕೆಟಿಸಿ ಏರಿಯಾವನ್ನು ಸ್ವತಃ ನೋಡಿಕೊಳ್ಳುವ ಇರಾದೆಯೂ ಇದೆ. ಇದಕ್ಕಿರುವ ಕಾರಣ ಇತ್ತೀಚಿನ ಕೆಲವು ಚಿತ್ರಗಳು ಇಲ್ಲಿ ಭಾರೀ ಯಶಸ್ಸು ಕಂಡಿರುವುದು.

'ಜಸ್ಟ್ ಮಾತ್ ಮಾತಲ್ಲಿ' ಬಾಕ್ಸಾಫೀಸಿನಲ್ಲಿ ಮುಗ್ಗಿರಿಸಿದ್ದರಿಂದ ಶಂಕರೇ ಗೌಡರು ಭಾರೀ ನಷ್ಟ ಅನುಭವಿಸಿದ್ದರು. ಅದನ್ನು ಈಗ 'ಕೆಂಪೇಗೌಡ'ದಲ್ಲಿ ವಾಪಸ್ ಪಡೆಯುವ ಯತ್ನದಲ್ಲಿದ್ದಾರೆ. ಅದರಲ್ಲಿ ಯಶಸ್ವಿಯಾಗುವ ಭರವಸೆಯೂ ಅವರಲ್ಲಿದೆ.
ಸಂಬಂಧಿತ ಮಾಹಿತಿ ಹುಡುಕಿ