ಹಳ್ಳಿ ಹೈದನದ್ದು 'ಐಶ್ ಲವ್ಸ್ ರಾಜ್' ಅಲ್ಲ, 'ಜಂಗಲ್ ಜಾಕಿ'
PR
'ಹಳ್ಳಿ ಹೈದ ಪ್ಯಾಟೇಗ್ ಬಂದ' ರಿಯಾಲಿಟಿ ಶೋ ವಿಜೇತ ರಾಜೇಶ ಹಾಗೂ ಪ್ಯಾಟೆ ಹುಡ್ಗಿ ಐಶ್ವರ್ಯಾ ಹೀರೋ-ಹೀರೋಯಿನ್ ಆಗುತ್ತಿರುವುದು ನಿಮಗೂ ಗೊತ್ತು. 'ಐಶ್ ಲವ್ಸ್ ರಾಜ್' ಎಂದು ಹೆಸರಿಡಲಾಗಿದ್ದ ಚಿತ್ರವಿದು. ಅದೀಗ ಬದಲಾಗಿದೆ. ಸಿನಿಮಾಕ್ಕೆ 'ಜಂಗಲ್ ಜಾಕಿ' ಎಂದು ಮರು ನಾಮಕರಣ ಮಾಡಲಾಗಿದೆ.
ಇಂತಹ ನಿರ್ಧಾರಕ್ಕೆ ಬಂದಿರುವುದು ನಿರ್ಮಾಪಕರಾದ ಆಂಟೋನಿ ಕಿಶೋರ್ ಹಾಗೂ ಎ.ಎನ್. ಸಿಂಧೂರ್. ಚಿತ್ರದ ಕಥೆ ಕಾಡಿಗೆ ಸಂಬಂಧಪಟ್ಟದ್ದಾಗಿರುವ ಕಾರಣ ಇದೇ ಹೆಸರು ಸೂಕ್ತ ಎಂದು ಅವರು ಈ ಬದಲಾವಣೆಗೆ ಮುಂದಾಗಿದ್ದಾರೆ.
ಕಾಡಿನಿಂದ ನಾಡಿಗೆ ಬಂದ ಯುವಕ ಇಲ್ಲಿನ ಜನತೆ ಜೊತೆ ಹೇಗೆ ಬೇರೆಯುತ್ತಾನೆ. ಪ್ಯಾಟೆಯಲ್ಲಿ ಆತ ಪಡುವ ಕಷ್ಟ ಯಾವ ರೀತಿಯದ್ದು. ಅದನ್ನೆಲ್ಲಾ ಹೇಗೆ ನಿಭಾಯಿಸಿ ಮುಂದೆ ಬರುತ್ತಾನೆ ಎಂಬ ಕಥಾಹಂದರವನ್ನು ಚಿತ್ರ ಹೊಂದಿದೆ.
ರಿಯಾಲಿಟಿ ಶೋ ಅಂಶಗಳು ಕೂಡ ಇಲ್ಲಿ ಇರುತ್ತವೆ. ಸುಂದರ ಹುಡುಗಿ ಐಶೂ ಜೊತೆ ಪ್ರೀತಿಯ ಸುಳಿಯಲ್ಲಿ ಸಿಲುಕುವ ರಾಜೇಶನಿಗೆ ಆಕ್ಷನ್ ಸೀನುಗಳೂ ಇವೆಯಂತೆ. ಇದೊಂದು ಲವ್ ಕಮ್ ಆಕ್ಷನ್ ಚಿತ್ರ ಎಂದು ನಿರ್ಮಾಪಕರು ಹೇಳಿಕೊಂಡಿದ್ದಾರೆ.
ಇದರ ನಿರ್ದೇಶಕ ರವಿ. ವಿ. ಮನೋಹರ್ ಸಂಗೀತ, ಎಂ.ಆರ್. ಸೀನು ಛಾಯಾಗ್ರಹಣ ಚಿತ್ರಕ್ಕಿದೆ. ರಾಜು ತಾಳಿಕೋಟೆ, ಬುಲೆಟ್ ಪ್ರಕಾಶ್, ಕಡ್ಡಿ ವಿಶ್ವ ಬಿರಾದಾರ್ ಸೇರಿದಂತೆ ಇನ್ನೂ ಹಲವು ಕಾಮಿಡಿ ಕಲಾವಿದರು ಅಭಿನಯಿಸುತ್ತಿದ್ದಾರೆ.