ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ರಮ್ಯಾ ಇನ್ನು ಸಿಂಗಲ್ ಅಲ್ಲ, ಹಾಗಾದ್ರೆ ಅವನು ಯಾರು? (Ramya | Divya Spandana | Kannada actress | Not single)
ಸುದ್ದಿ/ಗಾಸಿಪ್
Bookmark and Share Feedback Print
 
WD
ನೀವು ರಮ್ಯಾರ ಹುಚ್ಚು ಅಭಿಮಾನಿಯಾ? ಆಕೆಯ ಎಲ್ಲಾ ಚಿತ್ರಗಳನ್ನು ಬಿಟ್ಟೂ ಬಿಡದೆ ನೋಡಿದವರಾ? ಹಾಗಾದರೆ ಕೇಳಿ, ರಮ್ಯಾ ಮೇಲಿನ ಆಸೆಯನ್ನು ಬಿಟ್ಟು ಬಿಡಿ. ಆಕೆ ತನ್ನ ರಾಜಕುಮಾರನನ್ನು ಹುಡುಕಿಕೊಂಡಿದ್ದಾರೆ. ನಿಮ್ಮ ಹೃದಯಕ್ಕೆ ನೇರವಾಗಿ ಚೂಪಾದ ಚೂರಿಯನ್ನು ಚುಚ್ಚಿದ್ದಾರೆ!

ಹೌದು, ಇದು ತಮಾಷೆ ಸಂಗತಿಯಲ್ಲ. ನಿಜಕ್ಕೂ ರಮ್ಯಾ ಆಲಿಯಾಸ್ ದಿವ್ಯ ಸ್ಪಂದನ ಈಗ ಸಿಂಗಲ್ ಅಲ್ಲ. ಇದನ್ನು ಸ್ವತಃ ಅವರೇ ಒಪ್ಪಿಕೊಂಡಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್ ತೇಜಾ ಜತೆ ಕುಚ್ ಕುಚ್ ನಡೆಸುತ್ತಿದ್ದಾಕೆ, ನನಗೊಬ್ಬ ರಾಜಕುಮಾರ ಸಿಕ್ಕಿರುವುದು ಹೌದು ಎಂದು ಹೇಳಿಕೊಂಡಿದ್ದಾರೆ. ಆತ ಯಾರೆಂದು ಮಾತ್ರ ಬಹಿರಂಗಪಡಿಸಿಲ್ಲ.

ಇದು ಮೊದಲ ಬಾರಿ ಬಹಿರಂಗವಾಗಿರುವುದು ಸಾಮಾಜಿಕ ಸಂಪರ್ಕತಾಣ 'ಫೇಸ್‌ಬುಕ್' ಮೂಲಕ. ಆಕೆ ತನ್ನ ರಿಲೇಷನ್‌ಶಿಪ್ ಸ್ಟೇಟಸ್‌ನಲ್ಲಿ 'ಇನ್ ಎ ರಿಲೇಷನ್‌ಶಿಪ್' (ಸಂಬಂಧವೊಂದರಲ್ಲಿ ಇದ್ದೇನೆ) ಎಂದು ಆಯ್ಕೆ ಮಾಡಿಕೊಂಡಿದ್ದಾರೆ. ಈ ಮೊದಲು ಇದು 'ಸಿಂಗಲ್' (ಅವಿವಾಹಿತೆ) ಎಂದಿತ್ತು.

ಹಾಗಾದರೆ ಈ 'ಲಕ್ಕಿ ಹುಡುಗಿ'ಯ ಸಿಂಗಲ್ ಸ್ಟೇಟಸ್ ಅಪಹರಿಸಿದ ಸುಂದರಾಂಗ ಯಾರು ಎಂದು ಸ್ವತಃ ಆಕೆಯಲ್ಲೇ ಪ್ರಶ್ನಿಸಿದರೆ, 'ಅದನ್ನು ಈಗಲೇ ಬಹಿರಂಗಪಡಿಸಲು ನಾನು ಬಯಸುವುದಿಲ್ಲ' ಎಂದು ನಿರಾಸೆ ಹುಟ್ಟಿಸಿದ್ದಾರೆ.

ಆದರೆ ಸಂಬಂಧ ಇರುವುದನ್ನು ಒಪ್ಪಿಕೊಂಡಿದ್ದಾರೆ. 'ಹೌದು, ನಾನಿನ್ನೂ ಸಿಂಗಲ್ ಆಗಿ ಉಳಿದಿಲ್ಲ. ನನ್ನ ಜೀವನದಲ್ಲಿ ಎಂದೂ ಸಿಗದ ಬೆಲೆ ಕಟ್ಟಲಾಗದವನು ಆತ. ನನ್ನಲ್ಲಿ ಸಂತಸವನ್ನು ಹುಟ್ಟಿದವನು' ಎಂದು ಹೇಳುತ್ತಾ ನೀವೇನು ಬೇಕಾದರೂ ಅಂದುಕೊಳ್ಳಿ ಎಂದು ಊಹೆಗೆ ಬಿಟ್ಟಿದ್ದಾರೆ.

ದುರ್ವಾಸ ಮುನಿಗಳ ವಂಶಸ್ಥಳಂತೆ ಕಾಣುವ ಈಕೆಯನ್ನು ಮೆಚ್ಚಿ, ಕೈ ಹಿಡಿದಿರುವ ಆ ನಿಗೂಢ ಮಹಾನುಭಾವ ಯಾರೆಂದು ನಿಮಗೇನಾದರೂ ಗೊತ್ತಾ?
ಸಂಬಂಧಿತ ಮಾಹಿತಿ ಹುಡುಕಿ