ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸಿನಿಮಾ ಮುನ್ನೋಟ » ಸಾಯಿ 'ಶ್ರೀ ನಾಗಶಕ್ತಿ'ಗೆ ಕೊನೆಗೂ ಬಿಡುಗಡೆ ಭಾಗ್ಯ (Sri Naga Shakthi | Saiprakash | Ramkumar | Shruthi)
ಸಿನಿಮಾ ಮುನ್ನೋಟ
Bookmark and Share Feedback Print
 
ಶ್ರೀ ಸಾಯಿ ರಾಮೇಶ್ವರ ಫಿಲಂಸ್ ಅವರ ಓಂ ಸಾಯಿಪ್ರಕಾಶ್ ನಿರ್ದೇಶನದ 'ಶ್ರೀ ನಾಗಶಕ್ತಿ' ಬಿಡುಗಡೆಯಾಗುವ ದಿನ ಕೊನೆಗೂ ಬಂದಿದೆ. ಈ ಚಿತ್ರ ರಾಜ್ಯಾದ್ಯಂತ ಜನವರಿ 7ರಂದು ಬಿಡುಗಡೆಯಾಗುತ್ತಿದೆ.

ಸಾಮಾಜಿಕ ಹಾಗೂ ದೈವಿಕ ಶಕ್ತಿಯ ಸಮ್ಮಿಲನದ ಕಥೆಯುಳ್ಳ ಚಿತ್ರ ಇದಾಗಿದೆ. ನಟಿ ಶ್ರುತಿ ಅವರ ಮಟ್ಟಿಗೆ ಕನ್ನಡ ಚಿತ್ರರಂಗದಲ್ಲಿ ಮತ್ತೆ ಬ್ರೇಕ್ ನೀಡಬಹುದು ಎನ್ನುವ ನಿರೀಕ್ಷೆಯಿದೆ. ಬಹಳ ಕಾಲದಿಂದ ನೇಪಥ್ಯಕ್ಕೆ ಸರಿದಿದ್ದ ರಾಮ್‌ಕುಮಾರ್ ಈ ಚಿತ್ರದ ಮೂಲಕ ಮರಳಿದ್ದಾರೆ.

ಕೆ.ಜೆ. ಭಾರತಿ ಹೆಸರಿನಲ್ಲಿ ಚಿತ್ರಕ್ಕೆ ಹಣ ಹಾಕಿರುವುದು ನಟಿ ಚಂದ್ರಿಕಾ. ಈ ಚಿತ್ರದಲ್ಲೂ ಪ್ರಮುಖ ಪಾತ್ರವೊಂದರಲ್ಲಿ ಅವರು ನಟಿಸಿದ್ದಾರೆ. ಉಳಿದಂತೆ ರಮೇಶ್ ಭಟ್, ಟೆನ್ನಿಸ್ ಕೃಷ್ಣ, ಬುಲೆಟ್ ಪ್ರಕಾಶ್, ಗುರುದತ್, ಅಭಿಜಿತ್, ಬೇಬಿ ಕೃತಿ, ಶಿವಕುಮಾರ್ ಮುಂತಾದವರ ಭೂಮಿಕೆಯಿದೆ.

ಸಂಗೀತ ನೀಡಿರುವುದು ಶ್ರೀಗಣೇಶ್. ಛಾಯಾಗ್ರಹಣ ಸಿ. ನಾರಾಯಣ್ ಅವರದ್ದು. ಚಿತ್ರದ ಹಾಡುಗಳು ಮತ್ತು ಕಥೆ ಬರೆದವರು ಗೋಟೂರಿ.

ಧನುರ್ಮಾಸದಲ್ಲಿ ಪೂಜಾ ಕೈಂಕರ್ಯಗಳಲ್ಲಿ ಮುಳುಗಿರುವ ಮಹಿಳೆಯರನ್ನು ಈ ಚಿತ್ರ ಸೆಳೆಯಬಹುದೇ ಎಂದು ಕಾದು ನೋಡಬೇಕಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶ್ರೀ ನಾಗಶಕ್ತಿ, ಸಾಯಿಪ್ರಕಾಶ್, ರಾಮ್ಕುಮಾರ್, ಶ್ರುತಿ