ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ತಾರಾ ಪರಿಚಯ » ಮರೆಯಾದ ಖಳನಾಯಕ ರಘುವರನ್
ತಾರಾ ಪರಿಚಯ
Feedback Print Bookmark and Share
 
WD
ನೀಳಕಾಯ, ಸೂಕ್ಷ್ಮವಾದ ಕಣ್ಣುಗಳು, ಆ ಕಣ್ಣಿನಲ್ಲಿ ವ್ಯಕ್ತವಾಗುವ ಭಾವನೆಗಳಿಂದಲೇ ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡ ಚಿತ್ರರಂಗದಲ್ಲಿ ಅದ್ಬುತ ಖಳನಾಯಕರಾಗಿ ಮಿಂಚಿ ಇತ್ತೀಚೆಗೆ ಇಹಲೋಕ ತ್ಯಜಿಸಿದವರು.

ತಮ್ಮ ಅದ್ಭುತ ಭಾವ ಭಂಗಿಯಿಂದಲೇ ಇವರು ಎಲ್ಲ ಭಾಷೆಗಳ ಚಿತ್ರರಂಗದಲ್ಲೂ ಸ್ಥಾನ ಗಿಟ್ಟಿಸಿಕೊಂಡರು. ಮೂಲತ: ಕೇರಳದ ಪಾಲ್ಘಾಟ್ನವರಾದ ರಘುವರನ್ 1982 ರಲ್ಲಿ 'ಏಳಾವುದು ಮನಿದನ್' ಎಂಬ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ನಾಯಕನಿಗಿಂತ ಹೆಚ್ಚಿಗೆ ಬೇಡಿಕೆ ಪಡೆದುಕೊಂಡ ಖಳನಟರಲ್ಲಿ ರಘುವರನ್ ಕೂಡಾ ಒಬ್ಬರು.

ಇವರ ಪ್ರತಿಭೆಗೆ ಅಮಿತಾಬ್ ಬಚ್ಚನ್ ಜೊತೆ 'ಲಾಲ್ ಬಾದಶಾ' ಚಿತ್ರದಲ್ಲಿ ನಟಿಸಿದ್ದೇ ಸಾಕ್ಷಿ. ಕನ್ನಡದ ಸಾಕಷ್ಟು ಚಿತ್ರಗಳಲ್ಲೂ ಇವರು ಅಭಿನಯಿಸಿ ಮೆಚ್ಚುಗೆ ಪಡೆದಿದ್ದಾರೆ. ಆಯುಧ, ದುರ್ಗಿ, ಸಾರಿ, ಸರ್ಕಲ್ ಇನ್ಸ್ಪೆಕ್ಟರ್, ಸಮರ, ಅಸುರ, ಪ್ರತ್ಯರ್ಥ, ಜೈಹಿಂದ್ ಹೀಗೆ ನಾನಾ ಚಿತ್ರಗಳಲ್ಲಿ ಕನ್ನಡದಲ್ಲಿ ನಟಿಸಿದ್ದಾರೆ. ದುರ್ಗಿ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ಚಿತ್ರ ಇವರಿಗೆ ಉತ್ತಮ ಹೆಸರು ತಂದುಕೊಟ್ಟಿತ್ತು.

ಇವರು ರೋಹಿಣಿ ಎಂಬಾಕೆಯನ್ನು ಮದುವೆಯಾಗಿ ರಿಶಿ ಎಂಬ ಮಗನನ್ನು ಪಡೆದಿದ್ದರು. ಆದರೆ ಇವರ ವೈವಾಹಿಕ ಜೀವನ ಅಷ್ಟೇನೂ ಸುಖಕರವಾಗಿರಲಿಲ್ಲ. ತಮ್ಮ ಕೊನೆಯ ದಿನಗಳಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅಳಿಯ ಧನುಶ್ ಅಭಿನಯದ 'ಯಾರಡೀ ನೀ ಮೋಹಿನಿ' ಚಿತ್ರದಲ್ಲಿ ನಟಿಸುತ್ತಿದ್ದರು.

ಡ್ರಗ್ ಹಾಗೂ ಕುಡಿತದ ಚಟಗಳು ಇವರನ್ನು 48 ವರ್ಷಕ್ಕೆ ಬಲಿ ತೆಗೆದುಕೊಂಡವು. ಚಿತ್ರರಂಗದಲ್ಲಿ ಕ್ರೂರವಾಗಿ ವರ್ತಿಸುತ್ತಿದ್ದ ಇವರು ಖಾಸಗಿಯಾಗಿ ಉತ್ತಮ ವ್ಯಕ್ತಿಯಾಗಿದ್ದರು.