ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮಾಸಾಂತ್ಯಕ್ಕೆ 2ಜಿ ತರಂಗಾಂತರ ದರ ನಿಗದಿ:ಟ್ರಾಯ್ (TRAI | 2G spectrum | Proposal | Pricing norms)
Bookmark and Share Feedback Print
 
ಮಾಸಾಂತ್ಯದ ವೇಳೆಗೆ 2ಜಿ ಸ್ಪೆಕ್ಟ್ರಂ ದರಗಳನ್ನು ನಿಗದಿಪಡಿಸಲಾಗುವುದು ಎಂದು ಟೆಲಿಕಾಂ ನಿಯಂತ್ರಕ ಸಂಸ್ಥೆ ಟ್ರಾಯ್ ಮೂಲಗಳು ತಿಳಿಸಿವೆ.

ಮಾಸಾಂತ್ಯದ ವೇಳೆಗೆ ದರವನ್ನು ನಿಗದಿಪಡಿಸಲು, ವೇಗವಾಗಿ ಪ್ರಕ್ರಿಯೆಗಳನ್ನು ಮುಕ್ತಾಯಗೊಳಿಸಲಾಗುತ್ತಿದೆ ಎಂದು ಟ್ರಾಯ್ ಮುಖ್ಯಸ್ಥ ಜೆಎಸ್.ಶರ್ಮಾ ಹೇಳಿದ್ದಾರೆ.

ಕಳೆದ ವರ್ಷ 2ಜಿ ಸ್ಪೆಕ್ಟ್ರ ತರಂಗಾಂತರಗಳ ಹಂಚಿಕೆಯಲ್ಲಿ ಭಾರಿ ಅವ್ಯವಹಾರ ಪ್ರಕರಣಗಳು ಬಹಿರಂಗವಾಗಿದ್ದರಿಂದ, ಇದೀಗ 2ಜಿ ತರಂಗಾಂತರ ಮತ್ತು 3ಜಿ ತರಂಗಾಂತರಗಳ ದರ ನಿಗದಿ ಮಾಸಾಂತ್ಯದೊಳಗೆ ನಿರ್ಧರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

2ಜಿ ಸ್ಪೆಕ್ಟ್ರಂ ತರಂಗಾಂತರಗಳ 6.2ಮೆಗಾ ಹರ್ಟ್ಜ್‌ಗಿಂತ ಹೆಚ್ಚಿನ ಸೌಲಭ್ಯ ಪಡೆದ ವಿತರಕರಿಗೆ ಟೆಲಿಕಾಂ ನಿಯಂತ್ರಕ ಸಂಸ್ಥೆ ಕೆಲ ನಿಯಮಗಳನ್ನು ಜಾರಿಗೆ ತರಲು ಶಿಫಾರಸ್ಸು ಮಾಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ