ನಗರದ ತುರ್ಕಮನ್ ಗೇಟ್ ಬಳಿ ವಾಸಿಸುತ್ತಿರುವ 34 ವರ್ಷದ ಮಹಿಳೆಯ ಹೆಸರಿನಲ್ಲಿ 117 ಮೊಬೈಲ್ ಸಂಪರ್ಕಗಳಿರುವುದು ಪತ್ತೆಯಾಗಿದೆ. ಆದರೆ, ವಿಚಿತ್ರವೆಂದರೆ ಅವಳು ಒಂದು ಬಾರಿಯೂ ಮೊಬೈಲ್ ಸಂಪರ್ಕ ನೀಡುವಂತೆ ಅರ್ಜಿ ಸಲ್ಲಿಸಿಲ್ಲ. ಇದರಲ್ಲಿ ಯಾವುದೇ ಮೊಬೈಲ್ ಸಂಖ್ಯೆಯು ಅವಳಿಗೆ ಸಂಬಂಧಿಸಿದ್ದಲ್ಲ.
ಪೊಲೀಸ್ ಮೂಲಗಳ ಪ್ರಕಾರ ಮತದಾನದ ಚೀಟಿಯನ್ನು ಕೆಲುವು ಬಾರಿ ಜಿರಾಕ್ಸ್ ಮಾಡಿರಬಹುದು. ಅದೇ ಮತದಾರ ಚೀಟಿಯನ್ನು ಹಲವರು ಗುರುತಿನ ಚೀಟಿಯನ್ನಾಗಿ ಉಪಯೋಗಿಸಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಟೆಲಿಕಾಂ ಇಲಾಖೆ, ಒಬ್ಬಳ ಹೆಸರಿನಲ್ಲಿ ಹಲವು ಮೊಬೈಲ್ ಸಂಪರ್ಕಗಳಿರುವುದರಿಂದ ತನಿಖೆಗೆ ಆದೇಶಿಸಿದಾಗ ಸತ್ಯಾಂಶ ಹೊರಬಂದಿದೆ. ಕೆಲವು ಆಪರೇಟರ್‌ಗಳು ಕೂಡಾ ನಕಲಿ ದಾಖಲೆಗಳ ಮೂಲಕ, ಗ್ರಾಹಕರ ಸಂಖ್ಯೆಯನ್ನು ವಿಸ್ತರಿಸಲು ಬಳಸುತ್ತಿರುವುದು ಆತಂಕದ ವಿಷಯವಾಗಿದೆ ಎಂದು ಹೇಳಿಕೆ ನೀಡಿದೆ.
ತುರ್ಕಮನ್ ಗೇಟ್ ಬಳಿಯಿರುವ ಮಹಿಳೆ ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದವಳಾಗಿದ್ದು, ಪತಿಯಂದ ದೂರವಾಗಿ ಸಹೋದರನೊಂದಿಗೆ ವಾಸಿಸುತ್ತಿದ್ದಾಳೆ. ಪೊಲೀಸರು ಮೊಬೈಲ್ ಸಂಪರ್ಕಗಳ ಕುರಿತಂತೆ ವಿಚಾರಣೆ ನಡೆಸಿದಾಗ, ತನಗೆ ಇಂತಹ ಯಾವುದೇ ಮಾಹಿತಿಯಲ್ಲವೆಂದು ಸ್ಪಷ್ಟಪಡಿಸಿದ್ದಾಳೆ.
ಮಹಿಳೆ ಹೆಚ್ಚಿನ ಸಂಪರ್ಕ ಹೊಂದಿರುವ ಬಗ್ಗೆ ಸ್ಥಳೀಯ ಪೊಲೀಸರು ಭಧ್ರತಾ ಏಜೆನ್ಸಿಗಳಿಗೆ ಮಾಹಿತಿಯನ್ನು ರವಾನಿಸಿದ್ದಾರೆ. ಆದರೆ, ತನಿಖೆಯ ಪ್ರಗತಿಯ ಬಗ್ಗೆ ಹೆಚ್ಚಿನ ವಿವರ ನೀಡಲು ನಿರಾಕರಿಸಿದ್ದಾರೆ.