ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಶೀಘ್ರದಲ್ಲಿ 2ಜಿ ತರಂಗಾಂತರ ದರ ನಿಗದಿಗೆ ಅಂತಿಮ ನಿರ್ಧಾರ (2G spectrum | Telecom Ministry | TRAI | Telecom Commission | DoT | Pricing)
ಶೀಘ್ರದಲ್ಲಿ 2ಜಿ ತರಂಗಾಂತರ ದರ ನಿಗದಿಗೆ ಅಂತಿಮ ನಿರ್ಧಾರ
ನವದೆಹಲಿ, ಸೋಮವಾರ, 28 ಮಾರ್ಚ್ 2011( 19:29 IST )
ಟೆಲಿಕಾಂ ಆಯೋಗದ ಅನುಮತಿ ಪಡೆಯುವದಕ್ಕಿಂತ ಮೊದಲು, 6.2 ಮೆಗಾಹರ್ಟ್ಜ್ ಮೂಲದ 2ಜಿ ತರಂಗಾಂತರಗಳ ದರವನ್ನು ನಿಗದಿಪಡಿಸುವ ಕುರಿತಂತೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಟೆಲಿಕಾಂ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಟೆಲಿಕಾಂ ಇಲಾಖೆಯ ಅಂತರಿಕ ಸಮಿತಿ 2ಜಿ ತರಂಗಾಂತರಗಳ ದರ ನಿಗದಿ ಬಗ್ಗೆ ಮೂರು ತಿಂಗಳೊಳಗಾಗಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ದರ ನಿಗದಿ ವರದಿ ಬಂದ ಕೂಡಲೇ ಟೆಲಿಕಾಂ ಆಯೋಗಕ್ಕೆ ರವಾನಿಸಲಾಗುವುದು ಎಂದು ಟೆಲಿಕಾಂ ಸಚಿವಾಲಯದ ಕಾರ್ಯದರ್ಶಿ ಆರ್.ಚಂದ್ರಶೇಖರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕಳೆದ ತಿಂಗಳು ಟೆಲಿಕಾಂ ನಿಯಂತ್ರಕ ಸಂಸ್ಥೆ ಟ್ರಾಯ್, 6.2 ಮೆಗಾಹರ್ಟ್ಜ್‌ನ 2ಜಿ ತರಂಗಾಂತರಗಳ ದರವನ್ನು ಪ್ರಸ್ತುತವಿರುವ 1,658 ಕೋಟಿ ರೂಪಾಯಿಗಳ ಬದಲಾಗಿ, ದರವನ್ನು ಆರು ಪಟ್ಟು ಹೆಚ್ಚಿಸಿ 10,972.45 ಕೋಟಿ ರೂಪಾಯಿಗಳಿಗೆ ನಿಗದಿಪಡಿಸುವಂತೆ ಶಿಫಾರಸ್ಸು ಮಾಡಿತ್ತು.
ಟೆಲಿಕಾಂ ನಿಯಂತ್ರಕ ಸಂಸ್ಥೆ, 6.2 ಮೆಗಾಹರ್ಟ್ಜ್ 2ಜಿ ತರಂಗಾಂತರಗಳಿಗೆ ಒಂದು ದರ ಮತ್ತು ಹೆಚ್ಚುವರಿ ತರಂಗಾಂತರಗಳಿಗಾಗಿ ಹೆಚ್ಚುವರಿ ದರವನ್ನು ನಿಗದಿಪಡಿಸಿ ಎರಡು ವಿಭಾಗಗಳಲ್ಲಿ ವಿಂಗಡಿಸಿದೆ.