ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮರಾಠರ ಮೇಳದ ಹಿಂದೆ ರಾಜಕೀಯ ಪಿತೂರಿ: ಚಂದ್ರು (Marathi | Belagavi | Yeddyurappa | Kannada vedike | Mukya manthri chandru)
Feedback Print Bookmark and Share
 
ಅಕ್ಟೋಬರ್ 26ರಂದು ಬೆಳಗಾವಿಯಲ್ಲಿ ನಡೆಸಲು ಉದ್ದೇಶಿಸಿರುವ ಮರಾಠಿ ಮಹಾಮೇಳದ ಹಿಂದೆ ರಾಜಕೀಯ ಪಿತೂರಿ ಅಡಗಿದೆ. ಇದನ್ನು ನಡೆಸುವುದು ಅಷ್ಟು ಸೂಕ್ತವಲ್ಲ ಎಂದು ಕನ್ನಡ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅಭಿಪ್ರಾಯಪಟ್ಟಿದ್ದಾರೆ.

ವಾಮಲಾಂಬ ಪಬ್ಲಿಕೇಷನ್ಸ್ ಹಾಗೂ ಬೆಂಗಳೂರು ವಕೀಲರ ಸಾಹಿತ್ಯಕೂಟದ ಆಶ್ರಯದಲ್ಲಿ ಆಯೋಜಿಸಲಾಗಿದ್ದ, ಹಿರಿಯ ವಕೀಲ ಎಂ.ಸಿ.ಫಾಲನೇತ್ರ ಬರೆದಿರುವ 'ಕರ್ನಾಟಕ ಸಹಕಾರ ಸಂಘದ ಕಾಯ್ದೆ 1959 ಮತ್ತು ನಿಯಮಗಳು 1960' ಎಂಬ ಗ್ರಂಥದ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿಯಿಂದ ಅಪಾರ ಸಾವು-ನೋವುಗಳು ಸಂಭವಿಸಿ ಇಡೀ ರಾಜ್ಯವೇ ಸಂಕಷ್ಟದಲ್ಲಿರುವಾಗ ಹಾಗೂ ರಾಜ್ಯ-ರಾಜ್ಯಗಳ ನಡುವಿನ ಗಡಿ ವಿಷಯಗಳು ವಿವಾದಿತ ಹಂತದಲ್ಲಿರುವಾಗ, ಮರಾಠಿ ಮೇಳವನ್ನು ರಾಜ್ಯದಲ್ಲಿ ನಡೆಸುವುದು ಅದೆಷ್ಟು ಸಮಂಜಸ? ಇದನ್ನು ಮುಂದೂಡುವುದೇ ಸೂಕ್ತ ಎಂದರು.

ಹಾಗಂತ ಮಹಾಮೇಳವನ್ನು ವಿರೋಧಿಸುವ ನೆಪದಲ್ಲಿ ಹಾಗೂ ಪ್ರತಿಭಟನಾತ್ಮಕ ಹೋರಾಟ ನಡೆಸುವಾಗ ಸಾರ್ವಜನಿಕ ಆಸ್ತಿಪಾಸ್ತಿಯನ್ನು ಯಾವುದೇ ಸಂಘಟನೆಗಳು ಹಾಳುಮಾಡಬಾರದು. ಹಾಗೆ ಮಾಡಿದ್ದೇ ಆದಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ತಮ್ಮ ಅಸ್ತಿತ್ವವನ್ನು ಒತ್ತೆಯಿಟ್ಟಂತಾಗುತ್ತದೆ ಎಂದು ನುಡಿದ ಚಂದ್ರು, ತ್ರಿಭಾಷಾ ಸೂತ್ರವನ್ನು ಅಳವಡಿಸಿಕೊಳ್ಳಬೇಕೆಂಬ ಸಲಹೆಯನ್ನು ಇದೇ ಸಂದರ್ಭದಲ್ಲಿ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ