ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಲೇಡಿ ಡಾನ್ ಪರಂಪರೆಗೆ ಶಿಲ್ಪಾ ಮುನ್ನುಡಿ
ಸುದ್ದಿ/ಗಾಸಿಪ್
Feedback Print Bookmark and Share
 
IFMIFM
ಫರಾನ್ ಅಕ್ತರ್ ಅವರ ಚಿತ್ರದ ಡಾನ್ ಪಾತ್ರದಲ್ಲಿ ಶಾರೂಕ್ ಖಾನ್ ಅಭಿನಯ ನಿರೀಕ್ಷಿಸಿದ ಮಟ್ಟದಲ್ಲಿಲ್ಲ ಎಂದು ನೀವು ಭಾವಿಸಿದ್ದರೆ, ನಿಮಗಾಗಿ ಒಂದು ಸುದ್ದಿ ಕಾದಿದೆ. ಡಾನ್ ಪರಂಪರೆ ಮುಂದುವರಿಸುವ ಜವಾಬ್ದಾರಿಯನ್ನು ತುಳುನಾಡಿನ ಯುವತಿ ಶಿಲ್ಪಾ ಶೆಟ್ಟಿ ಹೊತ್ತಿದ್ದಾಳೆ.

"ಶಿಲ್ಪಾ ದಿ ಬಿಗ್ ಡಾನ್‌"ನಲ್ಲಿ ಅವಳದ್ದು ಲೇಡಿ ಡಾನ್ ಪಾತ್ರ. ಶಿಲ್ಪಾಗೆ ಹಾಲಿವುಡ್ ಚಿತ್ರ "ಪಿಂಕ್ ಪ್ಯಾಂಥರ್ 2"ನಲ್ಲಿ ನಟಿಸುವ ಆಫರ್ ಇತ್ತು. ಆದರೆ ಶಿಲ್ಪಾ ಅದನ್ನು ನಿರಾಕರಿಸಿದಳೆಂಬ ಗುಸು ಗುಸು ಬಾಲಿವುಡ್‍‌ನಲ್ಲಿ ಹರಡಿದೆ.

"ಬಿಗ್ ಬ್ರದರ್"ಶೋನಲ್ಲಿ ಬಿಗ್ ಪ್ರಚಾರ ಪಡೆದ ಶಿಲ್ಪಾ ಮೇಲ್ತರದ ಪಾತ್ರಗಳ ಆಯ್ಕೆ ಮಾಡುತ್ತಾಳೆಂದು ನಿರೀಕ್ಷಿಸಲಾಗಿತ್ತು. ಆದರೆ ಆಗಿದ್ದೇ ಬೇರೆ. ಟೈಟ್ ಜೀನ್ಸ್, ಹೊಕ್ಕುಳು ಕಾಣುವ ಟಾಪ್ಸ್ ಮತ್ತು ಕುತ್ತಿಗೆಯಿಂದ ಬೆಲ್ಟ್‌ಗೆ ಬಿಗಿದಿರುವ ನಾಯಿ ಪಟ್ಟಿ ತರದ ಜಂಕ್ ಆಭರಣ ಶಿಲ್ಪಾ ಬಗ್ಗೆ ಕ್ಲಾಸಿ ಇಮೇಜ್ ಚಿತ್ರಿಸುವುದಿಲ್ಲ.

ಆದರೆ "ಕ್ಲಾಸಿ" ಪದಕ್ಕೆ ಶಿಲ್ಪಾಳ ನಿಘಂಟಿನಲ್ಲಿ ಬೇರೆಯೇ ಅರ್ಥವಿರಬಹುದು. "ಕ್ವಿಕ್, ಸ್ಲಿಪ್ ಮಿ ಎ ಬ್ರೈಡ್" ಟೈಟಲ್‌ನ ಬ್ರಿಟಿಷ್ ಚಿತ್ರದ ನಟನೆಗೆ ಶಿಲ್ಪಾ 350,000 ಪೌಂಡ್ ಕೇಳಿದಳೆಂದು ದಿನಪತ್ರಿಕೆಯೊಂದು ವರದಿ ಮಾಡಿದೆ.

ನಿರ್ಮಾಪಕರಿಗೆ ಮತ್ತೊಬ್ಬ ನಟಿಯನ್ನು ಸಂಪರ್ಕಿಸದೇ ಬೇರೆ ದಾರಿಯೇ ಇರಲಿಲ್ಲ. ಆದರೆ ಆಕ್ಷನ್ ಪಾತ್ರದಲ್ಲಿ ಶಿಲ್ಪಾ ನಟಿಸುವುದರ ಜತೆಗೆ ಚಿತ್ರದ ಉತ್ಪಾದನಾ ಮೌಲ್ಯವನ್ನು ಗಮನಿಸಿದರೆ ಲೇಡಿ ಡಾನ್ ಪಾತ್ರಕ್ಕೆ ಶಿಲ್ಪಾ ಪಡೆದ ಸಂಭಾವನೆ ಎಷ್ಟಿರಬಹುದೆಂಬ ಕುತೂಹಲ ಮೂಡಿದೆ.