ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಅಕ್ಷನ್ ಚಿತ್ರಕ್ಕೆ ತನುಶ್ರೀ ರೆಡಿ
ಸುದ್ದಿ/ಗಾಸಿಪ್
Feedback Print Bookmark and Share
 
ಗ್ಲಾಮರಸ್ ಪಾತ್ರಗಳಿಗೆ ಹೆಸರಾದ ತನುಶ್ರೀ ದತ್ತಾ ಈಗ ಆಕ್ಷನ್ ಚಿತ್ರಕ್ಕೆ ರೆಡಿಯಾಗುತ್ತಿದ್ದಾರೆ. ಚಿತ್ರಕ್ಕೆ ಇನ್ನೂ ಟೈಟಲ್ ಕೊಟ್ಟಿಲ್ಲ ಮತ್ತು ಹಾಡಿ ಅಬ್ರಾರ್ ನಿರ್ದೇಶಿಸುತ್ತಿದ್ದಾರೆ. "ಇದು ಮುಖ್ಯವಾಹಿನಿ ಸಿನೆಮಾದ ಭಾಗವಲ್ಲ.

ಮಕ್ಕಳನ್ನು ಕೇಂದ್ರವಸ್ತುವಾಗಿಸಿಕೊಂಡು ನಿರ್ಮಿಸಲಾಗಿದೆ. ವಿಶೇಷ ಪರಿಣಾಮಗಳು ಮತ್ತು ಫ್ಯಾಂಟಸಿಗಳಿಂದ ಕೂಡಿದ ಮಕ್ಕಳ ಚಿತ್ರ" ಎಂದು ತನುಶ್ರೀ ವಿವರಿಸುತ್ತಾಳೆ. ಸದಾ ಗ್ಲಾಮರಸ್ ಪಾತ್ರಗಳಲ್ಲಿ ನಟಿಸಿ ತನುಶ್ರೀಗೆ ಬೋರಾಗಿದೆಯಂತೆ.

ಅದಕ್ಕಾಗಿ ಆಕ್ಷನ್ ಪ್ಯಾಕೆಡ್ ಚಿತ್ರಗಳಲ್ಲಿ ನಟಿಸಬೇಕೆಂಬ ಹಂಬಲ. ಆಕ್ಷನ್ ಚಿತ್ರ ರೋಮಾಂಚನ ಮೂಡಿಸುತ್ತದೆ ಎನ್ನುತ್ತಾಳೆ. ಇದು ಮಕ್ಕಳ ಚಿತ್ರವಾದ್ದರಿಂದ ಅದರಲ್ಲಿ ಬಿಂಬಿಸುವ ಆಕ್ಷನ್ ಸೀಮಿತವಾಗಿಯೇ ಇರುತ್ತದೆ.

ಆದರೆ ಏಕದಂ ಆಕ್ಷನ್‌ ಸ್ವೀಕನ್ಸ್‌ಗೆ ಇಳಿದು ಕೈಕಾಲು ಮುರಿದುಕೊಳ್ಳುವುದು ಆಕೆಗೆ ಇಷ್ಟವಿಲ್ಲವಂತೆ. ಅದಕ್ಕಾಗಿ ತನುಶ್ರೀ ಸ್ವತಃ ತರಬೇತಿ ಕೈಗೊಳ್ಳಲು ಸಮರ ಕಲೆ ಕಲಿಯುತ್ತಿದ್ದಾಳೆ.