ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮರಳಿ ಯತ್ನದೆಡೆಗೆ ಪ್ರಭಾಕರನ್ (Prabhakaran | Taxi No 1 | Shrinivas Kaushik)
ಸುದ್ದಿ/ಗಾಸಿಪ್
Feedback Print Bookmark and Share
 
Prabhakaran
MOKSHENDRA
ಕೆಲ ದಿನಗಳ ಹಿಂದೆ ಬಿಡುಗಡೆಯಾದ ಟ್ಯಾಕ್ಸಿ ನಂ.1 ಚಿತ್ರ ಎಲ್ಲರಿಗೂ ಗೊತ್ತಿರಬೇಕು. ಗೊತ್ತಿಲ್ಲದೆ ಇದ್ದರೂ ಅದು ನಿಮ್ಮ ತಪ್ಪಲ್ಲ ಬಿಡಿ. ಯಾಕಂದ್ರೆ ಇದೊಂದು ಫ್ಲಾಪ್ ಚಿತ್ರ. ಆ ಚಿತ್ರದಲ್ಲಿ ನಾಯಕನಾಗಿ ಪ್ರಭಾಕರನ್ ಅಭಿನಯಿಸಿದರು. ಇವರೇ ಚಿತ್ರದ ನಿರ್ದೇಶಕರು ಕೂಡ.

ಟ್ಯಾಕ್ಸಿ ನಂ.1 ಚಿತ್ರ ಫ್ಲಾಪ್ ಆಯಿತು ಅಂತ ಪ್ರಭಾಕರನ್ ಹುಮ್ಮಸ್ಸು ಕಳೆದುಕೊಂಡು ಕೈಕಟ್ಟಿ ಕುಳಿತ್ತಿಲ್ಲ. ಮರಳಿ ಯತ್ನವ ಮಾಡು ಅಂತ ಮತ್ತೊಂದು ಚಿತ್ರಕ್ಕೆ ನಾಯಕನಾಗಿ ನಟಿಸುತ್ತಿದ್ದಾರೆ. ಚಿತ್ರಕ್ಕಿನ್ನೂ ಹೆಸರಿಡಬೇಕಿದೆ. ನಾಯಕಿಯ ಹುಡುಕಾಟ ಕೂಡ ನಡೆಯುತ್ತಿದೆ. ಚಿತ್ರತಂಡದ ಆಯ್ಕೆ ಕೂಡ ಚಾಲನೆಯಲ್ಲಿದೆ.

ಚಿತ್ರಕ್ಕೆ ಪ್ರಭಾಕರನ್ ಸಹೋದರರಾದ ನಟರಾಜ್, ಸುರೇಶ್ ಮತ್ತು ಆನಂದ್ ನಿರ್ಮಾಪಕರಾದರೆ, ನಿರ್ದೇಶಕರಾಗಿ ಶ್ರೀನಿವಾಸ್ ಕೌಶಿಕ್ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಚಿತ್ರಕ್ಕೆ ಕತೆ ಮತ್ತು ಚಿತ್ರಕತೆಯನ್ನು ನಾಯಕ ಪ್ರಭಾಕರನ್ ಬರೆದಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ ತಿಂಗಳಿಂದ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ ಕೌರವ ವೆಂಕಟೇಶ್ ಅವರ ಸಾಹಸವಿದ್ದು, ನಾಗೇಶ್ ಆಚಾರ್ಯ ಅವರ ಛಾಯಾಗ್ರಹಣವಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪ್ರಭಾಕರನ್, ಟ್ಯಾಕ್ಸಿ ನಂ1, ಶ್ರೀನಿವಾಸ್ ಕೌಶಿಕ್