ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಭಟ್ಟರು ಬಿಚ್ಚಿಟ್ಟ 'ಮನಸಾರೆ' ಮಾತು! (Yogaraj Bhat | Aindritha Rey | Digant | Manasaare | Manomurthy)
ಸುದ್ದಿ/ಗಾಸಿಪ್
Feedback Print Bookmark and Share
 
Manasaare
MOKSHA
ಯೋಗರಾಜ್ ಭಟ್ಟರ ಬಹುನಿರೀಕ್ಷೆಯ ಮನಸಾರೆ ಚಿತ್ರದ ಧ್ವನಿಸುರುಳಿ ಬಿಡುಗಡೆಗೊಂಡಿದೆ. ಮುಂಗಾರು ಮಳೆ ಚಿತ್ರದ ಬಳಿಕ ಯೋಗರಾಜ್ ಭಟ್ ಮತ್ತು ಮನೋಮೂರ್ತಿ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಚಿತ್ರ ಇದಾಗಿರುವುದರಿಂದ ಚಿತ್ರದ ಹಾಡುಗಳ ಬಗ್ಗೆ ಸಹಜವಾಗಿಯೇ ನಿರೀಕ್ಷೆ ಜೋರಾಗಿಯೇ ಇದೆ. ಯೋಗರಾಜ ಭಟ್ಟರು ತಮ್ಮ ಬಹುನಿರೀಕ್ಷೆಯ 'ಮನಸಾರೆ'ಯ ಬಗ್ಗೆ ಮನಸಾರೆ ಬಿಚ್ಚಿದ ಮಾತುಗಳು ಇಲ್ಲಿವೆ.

ಇದು ಈ ವರ್ಷದ ಮತ್ತೊಂದು ಮುಂಗಾರು ಮಳೆಯಾಗಲಿದೆಯೇ?
ಪ್ರತಿ ನಿರ್ದೇಶಕನೂ ತನ್ನ ಚಿತ್ರವನ್ನು ಡಿಫರೆಂಟ್ ಆಗಿಯೇ ನೀಡಲು ಬಯಸುತ್ತಾನೆ. ನಾನೂ ಈ ಬಾರಿ ನನ್ನ ಈವರೆಗಿನ ಮಳೆ ಹಾಗೂ ಹಸಿರು ವಾತಾವರಣದಿಂದ ಹೊರಬಂದು ಈ ಚಿತ್ರವನ್ನು ಚಿತ್ರಿಸಿದ್ದೇನೆ. ಏನಾಗುತ್ತದೋ ಕಾಯಬೇಕು.

PR
ಹಾಗಾದರೆ ಮನಸಾರೆ ಏನು?
ಮನಸಾರೆ ಒಂದು ಊಹನೆಗೆ ಮಾಡಲಾಗದ ಒಂದು ಪ್ರೇಮ ಕಥಾನಕ!

ಮುಂಗಾರು ಮಳೆ ಹಾಗೂ ಗಾಳಿಪಟದಲ್ಲಿ ಗಣೇಶ್ ಜತೆ ಕೆಲಸ ಮಾಡಿದ ನಂತರ ಮತ್ತೆ ಮನಸಾರೆಗೆ ಯಾಕೆ ಗೋಲ್ಡನ್ ಸ್ಟಾರ್‌ನನ್ನು ಆಯ್ಕೆ ಮಾಡಲಿಲ್ಲ?
ಈ ಚಿತ್ರದ ಕಥೆಗೆ ಗಣೇಶ್ ಸೂಟ್ ಆಗೋದಿಲ್ಲ. ನನ್ನ ಈ ಕಥೆಯ ಪಾತ್ರಕ್ಕೆ ಅಗತ್ಯವಿದ್ದುದು 20ರ ಆಸುಪಾಸಿನ ಎಲ್ಲರಿಂದ ಸುಲಭವಾಗಿ ಆಕರ್ಷಿಸಬಲ್ಲ ಸುಂದರ ಯುವಕ. ಹಾಗಾಗಿ ಈ ಪಾತ್ರಕ್ಕೆ ನನಗೆ ತಕ್ಷಣ ನೆನಪಿಗೆ ಬಂದಿದ್ದು ದಿಗಂತ್ ಮಾತ್ರ.

PR
ದಿಗಂತ್ ಅವರನ್ನು ಸಿನಿಮಾಕ್ಕೆ ಆಯ್ಕೆ ಮಾಡಿದ ನಂತರವೂ ಧ್ಯಾನ್ (ಸಮೀರ್ ದತ್ತಾನಿ) ಈ ಚಿತ್ರದ ನಾಯಕ ಎಂಬ ಗಾಸಿಪ್ ಹರಿದಾಡುತ್ತಿತ್ತಲ್ಲ, ಯಾಕೆ?
ಅಮಿತಾಬ್ ಬಚ್ಚನ್ ಹಾಗೂ ರಜನೀಕಾಂತ್ ಹೆಸರು ಬಿಟ್ಟು ಉಳಿದೆಲ್ಲ ನಾಯಕರ ಹೆಸರೂ ಮಾಧ್ಯಮ ವಲಯದಲ್ಲಿ ಈ ಚಿತ್ರದ ಬಗ್ಗೆ ಗಾಸಿಪ್ ಹರಡಲು ಸಾಧ್ಯತೆ ಇದೆ! (ತಮಾಷೆಯಿಂದ ನಗುತ್ತಾ)

ದಿಗಂತ್ ಸಿನಿಮಾ ಶೂಟಿಂಗ್‌ಗೆ ಸರಿಯಾಗಿ ಹಾಜರಾಗುವುದಿಲ್ಲ, ತುಂಬ ಅಲಕ್ಷ್ಯದ ಮನುಷ್ಯ ಎಂಬೆಲ್ಲಾ ಆರೋಪಗಳು ದಿಗಂತ್ ಮೇಲಿದೆಯಲ್ಲಾ?
ಆರೋಪಗಳು ನಿಜ. ಆದರೆ, ದಿಗಂತ್ ಜತೆಗೆ ನನಗೆ ಎರಡು ಚಿತ್ರಗಳಲ್ಲಿ ಕೆಲಸ ಮಾಡಿದ ಅನುಭವವಿದೆ. ನನ್ನ ಮನಸಾರೆಯಲ್ಲಿ ನೀವು ಈ ಬಾರಿ ಡಿಫರೆಂಟ್ ಆದ ದಿಗಂತ್‌ರನ್ನು ನೋಡಲಿದ್ದೀರಿ. ದಿಗಂತ್ ನಂಬಿಕೆಗೂ ಮೀರಿದ ಒಬ್ಬ ಉತ್ತಮ ವ್ಯಕ್ತಿ. ಅಲ್ಲದೆ, ತೆರೆಯ ಹಿಂದೆ ದಿಗಂತ್ ಒಬ್ಬ ಲವರ್ ಬಾಯ್ ಎಂಬ ಇಮೇಜಿನಿಂದ ಜನಪ್ರಿಯನಾಗಿದ್ದರೆ ಅದು ದಿಗಂತ್ ತಪ್ಪಲ್ಲ. ಅದು ಆತನ ಹಿಂದೆ ಸುತ್ತುವ ಹುಡುಗಿಯರ ತಪ್ಪು. ಯಾಕೆಂದರೆ ಆತ ಅಷ್ಟೂ ಸುಂದರನಾಗಿದ್ದಾನೆ.

MOKSHA
ಹಾಗಾದರೆ ಮನಸಾರೆಯೂ ಮುಂಗಾರು ಮಳೆಯಂತೆ ಮ್ಯಾಜಿಕ್ ಮಾಡಲಿದೆಯೇ?
ಗೊತ್ತಿಲ್ಲ. ಇದು ಪ್ರೇಕ್ಷಕರಿಗೆ ಬಿಟ್ಟ ವಿಚಾರ. ಮುಂಗಾರುಮಳೆಯನ್ನು ಜನ ಮನೆಯ ಒಂದು ಭಾಗವೇ ಎಂಬಂತೆ ಸ್ವೀಕರಿಸಿದರು. ಮನಸಾರೆಯನ್ನು ನನ್ನ ಈವರೆಗಿನ ಚಿತ್ರಗಳಿಗಿಂತ ಭಿನ್ನವಾಗಿ ರೂಪಿಸಿದ್ದೇನೆ. ಮಳೆ, ಹಸಿರಿನ ಹಂಗು ತೊರೆದಿದ್ದೇನೆ. ನೋಡಬೇಕು. ಪ್ರೇಕ್ಷಕನ ಉತ್ತರಕ್ಕೆ ಕಾಯಬೇಕು.

ಅಂದಹಾಗೆ ಭಟ್ಟರಿಗೆ ನಿರ್ದೇಶನಕ್ಕೆ ಹಿಂದಿ ಹಾಗೂ ತೆಲುಗಿನಿಂದಲೂ ಆಫರ್‌ಗಳು ಬಂದಿವೆಯಂತೆ. ಮನಸಾರೆ ರಿಲೀಸ್ ಆದ ಮೇಲೆ ಅತ್ತ ದೃಷ್ಟಿ ಹರಿಸುತ್ತಾರಂತೆ ಭಟ್ಟರು. ಭಟ್ಟರಿಗೆ ಗುಡ್ ಲಕ್.

ಮನಸಾರೆ ಚಿತ್ರದಲ್ಲಿ ಐದು ಹಾಡುಗಳಿದ್ದು, ಇವೆಲ್ಲವನ್ನೂ ಜಯಂತ್ ಕಾಯ್ಕಿಣಿ ಮತ್ತು ಯೋಗರಾಜ್ ಬರೆದಿದ್ದಾರೆ. ಹಾಗಾಗಿ ನಿಸ್ಸಂದೇಹವಾಗಿ ಕಾವ್ಯಾತ್ಮಕ ಗುಣಗಳಿರುವ ಸಾಹಿತ್ಯವನ್ನು ಪ್ರೇಕ್ಷಕರು ಧಾರಾಳವಾಗಿ ಅಪೇಕ್ಷಿಸಬಹುದು. ಮನೋಮೂರ್ತಿ ಸಂಗೀತಕ್ಕೆ ಶಾನ್, ಶ್ರೇಯಾ ಘೋಷಾಲ್ ಧ್ವನಿಗೂಡಿಸಿದ್ದಾರೆ. ಚಿತ್ರದಲ್ಲಿ ಐಂದ್ರಿತಾ ರೇ ಮತ್ತು ದಿಗಂತ್ ಪ್ರಮುಖ ಭೂಮಿಕೆಯಲ್ಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮನಸಾರೆ, ಯೋಗರಾಜ ಭಟ್, ಐಂದ್ರಿತಾ ರೇ, ದಿಗಂತ್, ಮನೋಮೂರ್ತಿ