ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮುಸ್ಲಿಮರಿಗೆ ಶೇ.10ರ ಸರ್ಕಾರಿ ಉದ್ಯೋಗ ಮೀಸಲಾತಿಯಿಲ್ಲ? (Ranganath Commission | Hindu | Muslim | Scheduled Caste)
Bookmark and Share Feedback Print
 
ನಿವೃತ್ತ ನ್ಯಾಯಮೂರ್ತಿ ರಂಗನಾಥ್ ಮಿಶ್ರಾ ಆಯೋಗದ ವರದಿಯನ್ವಯ ಮುಸ್ಲಿಮರಿಗೆ ಸರಕಾರಿ ಉದ್ಯೋಗದಲ್ಲಿ ಶೇ.10ರ ಮೀಸಲಾತಿ ನೀಡಬೇಕೆಂಬ ಶಿಫಾರಸ್ಸು ಜಾರಿಯಾಗುವುದು ಸಂಶಯ ಎಂದು ಕೇಂದ್ರ ಸರಕಾರ ತಿಳಿಸಿದೆ.

ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಮುಸ್ಲಿಮ್ ಸಮುದಾಯವನ್ನೂ ಸೇರಿಸುವ ಸಂಬಂಧ ಸರಕಾರ ಪರಿಗಣನೆ ನಡೆಸುತ್ತಿದ್ದು, ರಂಗನಾಥ್ ಆಯೋಗದ ಶಿಫಾರಸ್ಸು ಜಾರಿಯಾಗುವುದು ಸಂಶಯ. ವರದಿ ಬಗ್ಗೆ ಇನ್ನಷ್ಟು ಅಧ್ಯಯನಗಳು ನಡೆಯಬೇಕಿದೆ ಎಂದು ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷೀದ್ ಸೋಮವಾರ ತಿಳಿಸಿದ್ದಾರೆ.

ಸುಪ್ರೀಮ್ ಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ರಂಗನಾಥ್ ಮಿಶ್ರಾ ನೇತೃತ್ವದ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗವು ನೀಡಿರುವ ವರದಿಯನ್ನು ಲೋಕಸಭೆಯಲ್ಲಿ ಖುರ್ಷೀದ್ ಇತ್ತೀಚೆಗಷ್ಟೇ ಮಂಡಿಸಿದ್ದರು.

ಈ ಶಿಫಾರಸ್ಸನ್ನು ನೇರವಾಗಿ ತಿರಸ್ಕರಿಸಲಾಗದು. ಆದರೂ ಆಯೋಗ ಸೂಚಿಸಿರುವ ಬದಲಾವಣೆಗಳು ಜಾರಿಯಾಗುವ ಕುರಿತು ನನಗೆ ಸಂಶಯಗಳಿವೆ. ಈ ಕುರಿತು ಮತ್ತಷ್ಟು ಅಧ್ಯಯನಗಳು ನಡೆಯಬೇಕಾಗಿವೆ ಎಂದು ಸಚಿವರು ಇದೀಗ ತಿಳಿಸಿದ್ದಾರೆ.

ರಾಜ್ಯ ಹಾಗೂ ಕೇಂದ್ರ ಸರಕಾರಗಳ ಎಲ್ಲಾ ಉದ್ಯೋಗ ವಿಭಾಗಗಳಲ್ಲೂ ಮುಸ್ಲಿಮರಿಗೆ ಶೇ.10ರ ಮೀಸಲಾತಿ ಕಡ್ಡಾಯ ಮಾಡಬೇಕು. ಇತರ ಅಲ್ಪಸಂಖ್ಯಾತ ಸಮುದಾಯದವರಿಗೆ ಶೇ.5ರಷ್ಟು ಮೀಸಲಾತಿ ನೀಡಬೇಕು. ಹಿಂದೂ ಧರ್ಮದ ದಲಿತರು ಕ್ರಿಶ್ಚಿಯನ್ ಅಥವಾ ಮುಸ್ಲಿಮ್ ಧರ್ಮಕ್ಕೆ ಮತಾಂತರಗೊಂಡಿದ್ದರೆ ಅಥವಾ ಯಾವುದೇ ಧರ್ಮದಲ್ಲಿ ದಲಿತರಿದ್ದರೆ ಅವರಿಗೆ ಪರಿಶಿಷ್ಟ ಜಾತಿಯ ಸ್ಥಾನಮಾನ ನೀಡಬೇಕು ಎಂದು ನ್ಯಾಯಮೂರ್ತಿಗಳು ಶಿಫಾರಸ್ಸು ಮಾಡಿದ್ದರು.

ಈ ಸಂಬಂಧ ವಿವರಣೆ ನೀಡಿದ ಸಚಿವರು, ವರದಿ ಈಗಾಗಲೇ ಬಹಿರಂಗವಾಗಿದೆ; ಇದರ ಕುರಿತು ಸಾರ್ವಜನಿಕ ಚರ್ಚೆಗಳು ನಡೆಯಬೇಕಿದೆ. ನಾವಿದನ್ನು ಪ್ರಾಮಾಣಿಕವಾಗಿ ಪರಿಶೀಲಿಸುತ್ತೇವೆ. ಹಾಗಾಗಿ ಈಗಲೇ ಅದನ್ನು ಸಂಪೂರ್ಣವಾಗಿ ತಳ್ಳಿ ಹಾಕುವುದು ಅಥವಾ ಒಪ್ಪಿಕೊಳ್ಳುವುದು ಅಸಾಧ್ಯ ಎಂದರು.

ರಂಗನಾಥ್ ಆಯೋಗದ ವರದಿಗೆ ಬಿಜೆಪಿ, ವಿಶ್ವ ಹಿಂದೂ ಪರಿಷತ್‌ಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಈ ಶಿಫಾರಸ್ಸು ಮತಾಂತರ ಮತ್ತು ಜಿಹಾದ್ ಸಿದ್ಧಾಂತಗಳನ್ನು ಪ್ರಚೋದಿಸುತ್ತವೆ ಎಂದು ಅವುಗಳು ಆರೋಪಿಸಿದ್ದವು.

ಸಂಬಂಧಪಟ್ಟ ಸುದ್ದಿಗಳಿವು..
ಮತಾಂತರ, ಜಿಹಾದ್‌ಗೆ ಮೀಸಲಾತಿ ಪೂರಕ: ಬಿಜೆಪಿ, ವಿಎಚ್‌ಪಿ
ಸರ್ಕಾರಿ ನೌಕರಿಯಲ್ಲಿ ಮುಸ್ಲಿಮರಿಗೆ ಶೇ.10 ಮೀಸಲಾತಿ..!
ಸಂಬಂಧಿತ ಮಾಹಿತಿ ಹುಡುಕಿ