ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮತ್ತೆ ಕಸಬ್ ಜೋಕ್; ಉಗ್ರರಲ್ಲಿ ನಾಲ್ವರು ಭಾರತೀಯರು..! (Mumbai attack | Pakistan | Mohammed Ajmal Amir Kasab | Nariman House)
Bookmark and Share Feedback Print
 
ದಿನಕ್ಕೊಂದು ಹೇಳಿಕೆ ನೀಡುತ್ತಿರುವ ಪಾಕಿಸ್ತಾನಿ ಉಗ್ರ ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್, ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಸತ್ತ ಒಂಬತ್ತು ಉಗ್ರರಲ್ಲಿ ನಾಲ್ವರು ಭಾರತೀಯರು ಮತ್ತು ಅವರೇ ತಾಜ್ ಹೊಟೇಲ್ ಮೇಲೆ ದಾಳಿ ನಡೆಸಿದ್ದಾರೆ ಎಂದು ಬಾಂಬ್ ಸಿಡಿಸಿದ್ದಾನೆ.

ಆತನ ಇಂದಿನ ಹೇಳಿಕೆ ಪ್ರಕಾರ ತಾಜ್ ಹೊಟೇಲ್ ಮೇಲೆ ದಾಳಿ ನಡೆಸಿದ ಭಯೋತ್ಪಾದಕರೆಲ್ಲರೂ ಭಾರತೀಯರು ಮತ್ತು ಅವರೆಲ್ಲ ಪ್ರಾಣ ತೆತ್ತಿದ್ದಾರೆ. ಸತ್ತವರಲ್ಲಿ ಮೂವರು ಕಾಶ್ಮೀರ, ಗುಜರಾತ್ ಮತ್ತು ಬಾಂಬೆಗಳಿಂದ ಬಂದವರು ಎಂದು ಹೇಳಿದ್ದಾನೆ. ಆದರೆ ನಾಲ್ಕನೇ ಉಗ್ರನ ಕುರಿತು ಆತ ಯಾವುದೇ ವಿವರ ನೀಡಿಲ್ಲ.
PTI


ನೀವು ಅಬು ಆಲಿ ಎಂದು ಹೇಳುತ್ತಿರುವ, ನನಗೆ ತೋರಿಸಲಾದ ಚಿತ್ರದಲ್ಲಿರುವ ವ್ಯಕ್ತಿ ಕಾಶ್ಮೀರಿ. ನೀವು ಹೇಳುತ್ತಿರುವ ಅಬು ಇಸ್ಮಾಯಿಲ್ ಎಂಬವನು 'ಬಾಂಬೆ'ಯವ. ಮತ್ತೊಬ್ಬ ಗುಜರಾತಿನವನು ಎಂದು ನ್ಯಾಯಾಲಯದಲ್ಲಿ ಕಸಬ್ ವಿವರಣೆ ನೀಡಿದ್ದಾನೆ.

ಅಬು ಆಲಿಯ ವಿವರಗಳು ನಿನಗೆ ಹೇಗೆ ಗೊತ್ತು ಎಂದು ಪ್ರಶ್ನಿಸಿದಾಗ, ಇವೆಲ್ಲವನ್ನು ಆತನ ಮೊಬೈಲ್ ಸಿಮ್ ಕಾರ್ಡಿನಲ್ಲಿ ದಾಖಲು ಮಾಡಲಾಗಿತ್ತು ಮತ್ತು ಅದನ್ನು ಆತ ನನಗೆ ತೋರಿಸಿದ್ದ ಎಂದು ಕಸಬ್ ಉತ್ತರಿಸಿದ.

ಅಬು ಇಸ್ಮಾಯಿಲ್ ಬಗ್ಗೆ ಮಾತನಾಡುತ್ತಾ, ಆತನ ಮುಖ ಲಕ್ಷಣಗಳಿಂದ ಆತ ಬಾಂಬೆಯವನು ಎಂದು ಸ್ಪಷ್ಟವಾಗಿ ಹೇಳಬಹುದು ಎಂದ. ಇದಕ್ಕೆ ನ್ಯಾಯಾಧೀಶರು, 'ಆತ ನಿನಗೆ ಮರಾಠಿಗನಂತೆ ಕಾಣುತ್ತಿದ್ದನೇ?' ಎಂದು ಹಾಸ್ಯ ಮಿಶ್ರಿತ ದನಿಯಲ್ಲಿ ಪ್ರಶ್ನಿಸಿದರು.

ಈ ಹಿಂದಿನ ಹೇಳಿಕೆಯಲ್ಲಿ ಆತ, ತಾನು ಮುಂಬೈಗೆ ದಾಳಿ ನಡೆಸಿದ ಕಸಬ್ ಅಲ್ಲ; ಆತ ಸತ್ತಿದ್ದಾನೆ. ನಾನು ಬಾಲಿವುಡ್ ಸಿನಿಮಾದಲ್ಲಿ ನಟಿಸಬೇಕೆಂದು ಮುಂಬೈಗೆ ಬಂದಿದ್ದೆ. ಆ ಸಂದರ್ಭದಲ್ಲಿ ಉಗ್ರ ಕಸಬ್‌ನಂತೆ ನನ್ನನ್ನು ಕಂಡ ಪೊಲೀಸರು ಬಂಧಿಸಿ ಆರೋಪ ಹೊರಿಸಿದ್ದರು. ನಾನು ಪಾಕಿಸ್ತಾನದಲ್ಲಿ ಬಾಣಸಿಗನಾಗಿದ್ದೆ ಎಂದು ಹೇಳಿದ್ದ.

2008ರ ನವೆಂಬರ್ 26ರ ಹತ್ಯಾಕಾಂಡದ ಆರೋಪಿ ಕಸಬ್ ಸೋಮವಾರ ಇಲ್ಲಿನ ವಿಶೇಷ ನ್ಯಾಯಾಲಯದಲ್ಲಿ ನ್ಯಾಯಾಧೀಶ ಎಂ.ಎಲ್. ತಹಲ್ಯಾನಿ ಅವರೆದುರು ತನ್ನ ಹೇಳಿಕೆಯನ್ನು ಮುಂದುವರಿಸಿದ್ದು, ಇನ್ನೆರಡು ದಿನಗಳಲ್ಲಿ ಆತನ ಹೇಳಿಕೆ ದಾಖಲಾತಿಯನ್ನು ಮುಗಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ