ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹಿಂದೂಗಳ ಮತಾಂತರ; ಮಿಷನರಿಗಳ ವಿರುದ್ಧ ಸುಪ್ರೀಂ ಕಿಡಿ (Religious conversions | Supreme Court | Australian missionary | Graham Staines)
Bookmark and Share Feedback Print
 
ಬಲವಂತದ ಮತಾಂತರ ತಪ್ಪು. ಅವರವರ ಧರ್ಮ ಅವರವರಿಗೆ ಶ್ರೇಷ್ಠವಾಗಿರುತ್ತದೆ. ಆದರೆ ಕ್ರೈಸ್ತ ಮಿಷನರಿಗಳು ಇಂತಹ ಧಾರ್ಮಿಕ ಮತಾಂತರದಲ್ಲಿ ನಿರತವಾಗಿರುವುದು ಹಲವು ಪ್ರಕರಣಗಳಲ್ಲಿ ಸಾಬೀತಾಗಿದೆ. ಅದು ಈ ಪ್ರಕರಣದಲ್ಲೂ ಕಂಡು ಬಂದಿದೆ ಎಂದು ಆಸ್ಟ್ರೇಲಿಯಾ ಮಿಷನರಿ ಗ್ರಹಾಂ ಸ್ಟೈನ್ ಹತ್ಯಾ ಪ್ರಕರಣದ ಅಂತಿಮ ತೀರ್ಪು ಕೊಡುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: ಮಿಷನರಿ ಗ್ರಹಾಂ ಹತ್ಯೆ; ದಾರಾ ಸಿಂಗ್‌ಗೆ ಗಲ್ಲು ಶಿಕ್ಷೆಯಿಲ್ಲ

ಕ್ರೈಸ್ತ ಮಿಷನರಿಗಳು ಹಿಂದೂಗಳನ್ನು ಬಲವಂತವಾಗಿ ಮತಾಂತರ ಮಾಡುತ್ತಿದ್ದರು. ಇದರಿಂದ ರೋಸಿ ಹೋಗಿದ್ದ ದಾರಾ ಸಿಂಗ್, ಅವರನ್ನು (ಗ್ರಹಾಂ ಸ್ಟೈನ್) ಹೆದರಿಸಲು ಬಯಸಿದ್ದನೇ ಹೊರತು, ಕೊಲ್ಲುವ ಉದ್ದೇಶ ಆತನಿಗೆ ಇರಲಿಲ್ಲ ಎಂದು ತನ್ನ ಕಕ್ಷಿಗಾರನ ಪರವಾಗಿ ವಕೀಲ ಎಸ್.ಎಸ್. ಮಿಶ್ರಾ ವಾದಿಸಿದ್ದರು.

'ಅಲ್ಲಿ (ಒರಿಸ್ಸಾದ ಕಿಯೋಂಜರ್ ಜಿಲ್ಲೆಯಲ್ಲಿ) ಬಲವಂತದ ಮತಾಂತರಗಳು ನಡೆಯುತ್ತಿದ್ದವು ಎನ್ನುವುದಕ್ಕೆ ಸಾಕಷ್ಟು ಪುರಾವೆಗಳು ಸಿಕ್ಕಿವೆ. ಆದರೆ, ದಾರಾ ಸಿಂಗ್ ತಪ್ಪಿತಸ್ಥ ಎಂದು ಸಾಬೀತುಪಡಿಸಲು ಸುಪ್ರೀಂ ಕೋರ್ಟ್ ಮುಂದೆ ಇರುವ ಪುರಾವೆ ಎಂದರೆ ಹೈಕೋರ್ಟ್ ತೀರ್ಪು. ಅಪರಾಧ ನಡೆದದ್ದನ್ನು ಯಾರೂ ಕಣ್ಣಾರೆ ನೋಡಿಲ್ಲ. ಹಾಗಾಗಿ ಅಲ್ಲಿ ಯಾವುದೇ ನೇರ ಸಾಕ್ಷಿಗಳಿಲ್ಲ. ಹಾಗಾಗಿ ಇಲ್ಲಿ ಹೆದರಿಸುವ ಉದ್ದೇಶ ಇತ್ತೇ ಹೊರತು, ಕೊಲ್ಲುವುದಾಗಿರಲಿಲ್ಲ' ಎಂದು ವಕೀಲರು ಪ್ರತಿಪಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್, ಸಮೃದ್ಧ ದೇಶವೊಂದರ ಕನಸು ನನಸಾಗಬೇಕಾದರೆ ಮಹಾತ್ಮ ಗಾಂಧೀಜಿಯವರು ಧರ್ಮದ ಕುರಿತು ಹೊಂದಿದ್ದ ದೃಷ್ಟಿಕೋನವನ್ನು ಅಳವಡಿಸಿಕೊಳ್ಳಬೇಕು. ಯಾವುದೇ ವ್ಯಕ್ತಿಯ ನಂಬಿಕೆಯ ನಡುವೆ ಬಲವಂತವಾಗಿ ಮಧ್ಯಪ್ರವೇಶ ಮಾಡುವುದು, ಮತಾಂತರ ಮಾಡುವುದು ಅಥವಾ ಒಂದು ಧರ್ಮಕ್ಕಿಂತ ಇನ್ನೊಂದು ಧರ್ಮ ಉತ್ತಮ ಎಂಬಂತಹ ಸುಳ್ಳು ಭರವಸೆಗಳನ್ನು ನೀಡುವುದನ್ನು ಸಮರ್ಥಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಮತಾಂತರಿಗಳಿಗೆ ಎಚ್ಚರಿಕೆ ನೀಡಿತು.

ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಸ್ವೀಕರಿಸಿರುವ 'ಕ್ಯಾಥೊಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ', ಅದು ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಒಪ್ಪಿಕೊಳ್ಳಲು ನಿರಾಕರಿಸಿದೆ.

ಹಲವು ವರ್ಷಗಳಿಂದ ನಡೆಯುತ್ತಿದ್ದ ಕಾನೂನು ಪ್ರಕ್ರಿಯೆ ತೀರ್ಪಾಗಿ ಹೊರಗೆ ಬಂದಿರುವುದನ್ನು ನಾವು ಸ್ವೀಕರಿಸುತ್ತೇವೆ. ಇಬ್ಬರು ಅಮಾಯಕ ಮಕ್ಕಳು ಮತ್ತು ಅವರ ತಂದೆಯನ್ನು ಕ್ರೂರವಾಗಿ ಹತ್ಯೆಗೈದಿದ್ದ ಪ್ರಕರಣವದು. ಆದರೆ ಅವರು ಧಾರ್ಮಿಕ ಮತಾಂತರ ನಡೆಸುತ್ತಿದ್ದರು ಎಂಬ ಆರೋಪಗಳು ಸಂಪೂರ್ಣವಾಗಿ ಆಧಾರ ರಹಿತವಾದದ್ದು ಎಂದು ಅದರ ವಕ್ತಾರ ಫಾದರ್ ಬಾಬು ಜೋಸೆಫ್ ಹೇಳಿದ್ದಾರೆ.

ಅಲ್ಲದೆ, ಪರೋಕ್ಷವಾಗಿ ಹಿಂದೂ ಸಂಘಟನೆಗಳ ವಿರುದ್ಧವೂ ಅವರು ವಾಗ್ದಾಳಿ ನಡೆಸಿದ್ದಾರೆ.

'ಈ ದೇಶದಲ್ಲಿ ಭಿನ್ನ ಸಮುದಾಯಗಳ ನಡುವೆ ದ್ವೇಷ ಹುಟ್ಟಿಸಲೆಂದೇ ಕಾರ್ಯಾಚರಣೆ ನಡೆಸಲು ಕೆಲವೊಂದು ಸಂಘಟನೆಗಳು ಇವೆ ಎಂಬುದು ಗಂಭೀರ ಎಚ್ಚರಿಕೆ. ತಮ್ಮ ಧರ್ಮಗಳನ್ನು ಪ್ರಚಾರ ಮಾಡುವ ಹಕ್ಕನ್ನು ಎಲ್ಲಾ ಧಾರ್ಮಿಕ ಸಮುದಾಯಗಳು ಸಂವಿಧಾನ ಬದ್ಧ ಹಕ್ಕನ್ನು ಪಡೆದಿವೆ' ಎಂದು ಸಂಘಟನೆ ನಿಲುವನ್ನು ಸ್ಪಷ್ಟಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ