ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಮಮತೆ'ಯ ಚುನಾವಣಾ ರೈಲ್ವೆ ಬಜೆಟ್ ಮುಖ್ಯಾಂಶಗಳು (Railway budget 2011-12 | Mamata Banerjee | Trinamool Congress | West Bengal)
ನಿರೀಕ್ಷೆಯಂತೆ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿಯವರು ಪಶ್ಚಿಮ ಬಂಗಾಲ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡೇ ರೈಲು ಗಾಡಿಗಳಿಗೆ ಬಣ್ಣ ಹಚ್ಚಿದ್ದಾರೆ. ಇಂದು ಮಧ್ಯಾಹ್ನ 12.10ಕ್ಕೆ ಸಚಿವೆ 2011-12ನೇ ಸಾಲಿನ ಹಾಗೂ ತನ್ನ ಮೂರನೇ ರೈಲ್ವೆ ಬಜೆಟ್ ಮಂಡಿಸಿದ್ದು, ಕರ್ನಾಟಕಕ್ಕೆ ಸಾಕಷ್ಟು ರೈಲುಗಳು ಬಂದಿವೆ.

ಇದನ್ನೂ ಓದಿ: ರೈಲ್ವೆ ಬಜೆಟ್; ಕರ್ನಾಟಕಕ್ಕೆ ದೀದಿಯ 'ಮಮತೆ' ಎಷ್ಟು?

ಪ್ರಯಾಣಿಕ ದರ ಮತ್ತು ಸರಕು ಸಾಗಣೆ ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲದಿರುವುದು ಬೆಲೆ ಏರಿಕೆಯಿಂದ ನೊಂದ ಜನತೆಗೆ ಒಂದಿಷ್ಟು ಸಮಾಧಾನ ತಂದಿದೆ. ಆದರೂ ಸಚಿವೆ ಬಹುತೇಕ ರೈಲುಗಳನ್ನು ಪಶ್ಚಿಮ ಬಂಗಾಲಕ್ಕೆ ತಿರುಗಿಸಿರುವುದು ಸ್ಪಷ್ಟ. ಒಟ್ಟಾರೆ ಬಜೆಟ್ ತೃಪ್ತಿದಾಯಕವಾಗಿಲ್ಲ ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿದೆ.

ಬಜೆಟ್ ಮುಖ್ಯಾಂಶಗಳು:
* ರೈಲ್ವೆ ಇಲಾಖೆಯಲ್ಲಿ ನೂತನ ಮೂಲ ಸೌಕರ್ಯ ನೀತಿ ಜಾರಿಗೆ
* ಹೊಸ ರೈಲ್ವೆ ಕೋಚ್ ಕಾರ್ಖಾನೆಗಳ ಸ್ಥಾಪನೆ
* ರೈಲ್ವೆಯಲ್ಲಿ ಬಂಡವಾಳ ಹೂಡಲು ಉದ್ಯಮಿಗಳಿಗೆ ಸ್ವಾಗತ
* ಜಮ್ಮು-ಕಾಶ್ಮೀರದಲ್ಲಿ ಕೋಚ್ ಫ್ಯಾಕ್ಟರಿ
* ಕೇರಳದ ಪಾಲಕ್ಕಾಡ್‌ನಲ್ಲಿ ಕೋಚ್ ಫ್ಯಾಕ್ಟರಿ
* ಕೇರಳದ ಚೇರ್ತಳದಲ್ಲಿ ಬಿಡಿ ಭಾಗಗಳ ಫ್ಯಾಕ್ಟರಿ.
* 2020ರ ಒಳಗೆ ರೈಲ್ವೆ ಆಧರಿತ ಉದ್ಯಮ ಸ್ಥಾಪನೆ.
* ರಾಯ್‌ಬರೇಲಿಯಲ್ಲಿ ಕೋಚ್ ಕಾರ್ಖಾನೆ
* ಕಾಶ್ಮೀರದಲ್ಲಿ ರೈಲು ಸೇತುವೆ ನಿರ್ಮಾಣದ ಕಾರ್ಖಾನೆ
* ಮಣಿಪುರದಲ್ಲಿ ಡೀಸೆಲ್ ಲೋಕೋಮೋಟಿವ್ ಕಾರ್ಖಾನೆ
* 700 ಕಿ.ಮೀ. ಹೊಸ ರೈಲ್ವೆ ಹಳಿ ವಿಸ್ತರಣೆ ಯೋಜನೆ
* ನಿರ್ವಸಿತರಿಗೆ ರೈಲ್ವೆ ವಸತಿ ಯೋಜನೆ
* 10 ಸಾವಿರ ಮನೆ ನಿರ್ಮಾನ
* ಪ್ರಧಾನ ಮಂತ್ರಿ ರೈಲ್ವೆ ವಿಕಾಸ್ ಯೋಜನೆ ಜಾರಿ
* ಮಣಿಪುರಕ್ಕೆ ಮೊತ್ತ ಮೊದಲ ಬಾರಿ ರೈಲು ಸಂಪರ್ಕ ಯೋಜನೆ
* 19 ನೂತನ ಯೋಜನೆಗಳಿಗೆ 771 ಕೋಟಿ ರೂ.
* ಡಾರ್ಜಲಿಂಗ್‌ನಲ್ಲಿ ವಿಶೇಷ ಸಾಫ್ಟ್‌ವೇರ್ ಘಟಕ ಸ್ಥಾಪನೆ
* ಅಶಕ್ತರ 250 ಕಿ.ಮೀ. ಪ್ರಯಾಣಕ್ಕೆ ಕೇವಲ 50 ರೂ.
* ಮಹಾರಾಷ್ಟ್ರದಲ್ಲಿ ಅನಿಲ ಆಧಾರಿತ ವಿದ್ಯುತ್ ಸ್ಥಾವರ
* ಸಾರ್ವಜನಿಕ-ಖಾಸಗಿ ಸಹಭಾಗಿತ್ವದ 85 ಯೋಜನೆಗಳ ಪ್ರಸ್ತಾವನೆ
* ರೈಲು ಹಳಿಗಳ ಪಕ್ಕದ ಸ್ಲಮ್ ನಿವಾಸಿಗಳಿಗೆ 10 ಸಾವಿರ ಮನೆ ನಿರ್ಮಾಣ
* ರೈಲುಗಳ ಸಂಖ್ಯೆಯನ್ನು 16ರಿಂದ 18 ಸಾವಿರಕ್ಕೆ ಏರಿಕೆ
* ಒರಿಸ್ಸಾದಲ್ಲಿ ವಾಗನ್ ಕಾರ್ಖಾನೆ
* ತೆರಿಗೆ ರಹಿತ ಬಾಂಡ್ ಮೂಲಕ 10 ಸಾವಿರ ಕೋಟಿ ರೂ. ನಿಧಿ ಸಂಗ್ರಹ
* 2011ನ್ನು ಹಸಿರು ಇಂಧನ ವರ್ಷ ಆಚರಣೆ
* 442 ರೈಲು ನಿಲ್ದಾಣ ಮೇಲ್ದರ್ಜೆಗೇರಿಸುವ ಕಾರ್ಯ ಈ ವರ್ಷ ಪೂರ್ಣ
* ಹೊಸ ರೈಲು ಯೋಜನೆಗಳಿಗೆ 9853 ಕೋಟಿ ರೂ.
* ಆಂಧ್ರಪ್ರದೇಶದಲ್ಲಿ 1,300 ಮೆಗಾ ವ್ಯಾಟ್ ಸಾಮರ್ಥ್ಯದ ಥರ್ಮಲ್ ವಿದ್ಯುತ್ ಸ್ಥಾವರ.
* ಮಾನವ ರಹಿತ ರೈಲ್ವೆ ಕ್ರಾಸಿಂಗ್ ನಿರ್ಮೂಲನೆ
* ಕೇರಳಕ್ಕೆ ಎರಡು ಹೊಸ ಪ್ಯಾಸೆಂಜರ್ ಟರ್ಮಿನಲ್ಸ್
* ಸುರಕ್ಷತೆ ಕಾಯ್ದ ರಾಜ್ಯಗಳಿಗೆ ಬಹುಮಾನ ನೀಡಲು ನಿರ್ಧಾರ
* ಅಪಘಾತ ಸಂಭವಿಸದ ರಾಜ್ಯಗಳಿಗೆ ಎರಡು ರೈಲು ಕೊಡುಗೆ
* ರೈಲು ಮಾರ್ಗಗಳ ಡಬ್ಲಿಂಗ್‌ಗೆ 2474 ಕೋಟಿ ರೂ.
* ಎಲ್ಲಾ ಐಐಟಿಗಳನ್ನು ಸಂಪರ್ಕಿಸುವಂತೆ ರೈಲು ವ್ಯವಸ್ಥೆ
* 584 ರೈಲು ನಿಲ್ದಾಣಗಳು ವಿಶ್ವ ದರ್ಜೆಗೆ
* ಈಗ ಇರುವ 9 ಕಾರ್ ರೈಲುಗಳು 12 ಕಾರ್‌ಗಳಿಗೆ ಏರಿಕೆ.
* ಚೆನ್ನೈ ಮತ್ತು ಕೊಲ್ಕತ್ತಾಗಳಲ್ಲಿ ಹೊಸ ಸ್ಥಳೀಯ ರೈಲು ಆರಂಭ.
* ಇಲಾಖೆಯಲ್ಲಿ ಕ್ರೀಡಾ ವಿಭಾಗ ಪ್ರತ್ಯೇಕ ಸೃಷ್ಟಿ.

ಮಮತಾ ತವರು ಕೊಲ್ಕತ್ತಾಕ್ಕೆ ಸಿಂಹಪಾಲು...
* ಕೊಲ್ಕತ್ತಾದಲ್ಲಿ ಮೆಟ್ರೋ ಕೋಚ್ ಫ್ಯಾಕ್ಟರಿ
* ನಂದಿಗ್ರಾಮದಲ್ಲಿ ರೈಲ್ವೆ ಔದ್ಯೋಗಿಕ ಪಾರ್ಕ್ ಸ್ಥಾಪನೆ
* ಕೊಲ್ಕತ್ತಾದ 15 ಉಪನಗರಗಳಿಗೆ ರೈಲು.
* ಮುಂಬೈ, ಚೆನ್ನೈ, ಚೆನ್ನೈ, ಹೈದರಾಬಾದ್, ಅಹಮದಾಬಾದ್ ಮತ್ತು ಕೊಲ್ಕತ್ತಾಗಳ ಏಕೀಕೃತ ಲೋಕಲ್ ರೈಲು ಜಾಲಗಳ ಅಭಿವೃದ್ಧಿ.
* ಕೊಲ್ಕತ್ತಾದಲ್ಲಿ ಇದೇ ವರ್ಷ 34 ನೂತನ ರೈಲು ಸೇವೆಗಳಿಗೆ ಚಾಲನೆ.
* ಕೊಲ್ಕತ್ತಾ ಮೆಟ್ರೋ ಯೋಜನೆ ಉಸ್ತುವಾರಿಗೆ ಕೋರ್ ಸಮಿತಿ.

ಏರಿಕೆ-ಇಳಿಕೆ; ಪ್ರಯಾಣಿಕರಿಗೇನು ಲಾಭ?
* ಪ್ರಯಾಣ ದರದಲ್ಲಿ ಯಾವುದೇ ಬದಲಾವಣೆಯಿಲ್ಲ.
* ಸರಕು ಸಾಗಣೆ ದರದ ಕುರಿತು ಪ್ರಸ್ತಾವನೆಯೇ ಇಲ್ಲ.
* ಇಂಟರ್ನೆಟ್ ಮೂಲಕ ಎಸಿ ಮುಂಗಡ ಬುಕ್ಕಿಂಗ್ ದರ 20ರಿಂದ 10 ರೂಪಾಯಿಗೆ ಇಳಿಕೆ
* ಎಸಿ ರಹಿತ ದರ್ಜೆಯ ಇತರ ಮುಂಗಡ ಬುಕ್ಕಿಂಗ್ ದರ 10ರಿಂದ 5 ರೂಪಾಯಿಗೆ ಇಳಿಕೆ
* ದೂರ ಪ್ರಯಾಣಕ್ಕೆ ಗೋ ಇಂಡಿಯಾ ಸ್ಮಾರ್ಟ್ ಕಾರ್ಡ್
* ಪುರುಷ ಹಿರಿಯ ನಾಗರಿಕರಿಗೆ ಶೇ.30ರ ರಿಯಾಯಿತಿ.
* ಮಹಿಳಾ ಹಿರಿಯ ನಾಗರಿಕರ ವಯೋಮಿತಿ 58ಕ್ಕೆ ಇಳಿಕೆ.
* ಮರಣೋತ್ತರ ಶೌರ್ಯ ಪ್ರಶಸ್ತಿ ಪಡೆದವರ ಹೆತ್ತವರಿಗೆ ಪ್ರಯಾಣ ದರದಲ್ಲಿ ರಿಯಾಯಿತಿ
* ರಾಜಧಾನಿ ಮತ್ತು ಶತಾಬ್ದಿಗಳಲ್ಲಿ ವಿಕಲಚೇತನರಿಗೆ ರಿಯಾಯಿತಿ
* ಪತ್ರಕರ್ತರಿಗೆ ವರ್ಷದಲ್ಲಿ ಎರಡು ಬಾರಿ ಶೇ.50 ಪ್ರಯಾಣ ರಿಯಾಯಿತಿ.

ಇತರೆ ಹೊಸ ರೈಲುಗಳು...
* 9 ತುರಂತೋ, 3 ಶತಾಬ್ದಿ, 56 ಎಕ್ಸ್‌ಪ್ರೆಸ್ ಹೊಸ ರೈಲುಗಳು
* 17 ರೈಲುಗಳ ಓಡಾಟ ಹೆಚ್ಚಳ.
* ಪ್ರಸಕ್ತ ಇರುವ 33 ರೈಲುಗಳ ವಿಸ್ತರಣೆ
* ರಾಜ್ಯ ರಾಜಧಾನಿಗಳು, ಪ್ರಮುಖ ನಗರಗಳನ್ನು ಸಂಪರ್ಕಿಸುವ 10 ರಾಜ್ಯ ರಾಣಿ ರೈಲುಗಳು.
* ಮುಂಬೈ ಸ್ಥಳೀಯ ರೈಲು ಸೇವೆಗೆ 47 ಹೊಸ ರೈಲು ಸೇರ್ಪಡೆ.
* ಚೆನ್ನೈ ಸ್ಥಳೀಯ ರೈಲು ಸೇವೆಗೆ 9 ರೈಲು ಮಾರ್ಗಗಳ ಸೇರ್ಪಡೆ.

ಆರ್ಥಿಕ ನಿರ್ವಹಣೆ...
* ಆರನೇ ವೇತನ ಆಯೋಗದಿಂದಾಗಿ ಸಮಸ್ಯೆ
* ಮಿತವ್ಯಯ ಕ್ರಮಗಳಿಂದಾಗಿ 3,700 ಕೋಟಿ ಉಳಿಕೆ.
* ಆದಾಯ ಪ್ರಮಾಣ 1 ಲಕ್ಷ ಕೋಟಿ ಸನಿಹಕ್ಕೆ
* ಪ್ರಸಕ್ತ ವರ್ಷ 57,630 ಕೋಟಿ ರೂಪಾಯಿ ಹೂಡಿಕೆ.
* 2,500 ಕೋಟಿ ರೂಪಾಯಿ ಖೋತಾ ಬಜೆಟ್

ಸಿಬ್ಬಂದಿಗಳು ಮತ್ತು ನೇಮಕಾತಿ...
* ರೈಲ್ವೆ ಉದ್ಯೋಗಿಗಳ ಪೋಷಕರಿಗೆ ಉಚಿತ ವೈದ್ಯಕೀಯ ಸೌಲಭ್ಯ.
* ಗ್ರೂಪ್ ಡಿ ನೌಕರರ ಮಕ್ಕಳಿಗೆ ನೀಡಲಾಗುವ ವಿದ್ಯಾರ್ಥಿ ವೇತನ ಹೆಚ್ಚಳ
* ಮಕ್ಕಳ ಶಿಕ್ಷಣಕ್ಕಾಗಿ ಸ್ಕಾಲರ್‌ಶಿಪ್ 1,200 ಕೋಟಿ. ರೂ.
* 13,000 ಆರ್‌ಪಿಎಫ್ ಖಾಲಿ ಹುದ್ದೆ ಭರ್ತಿ
* ರೈಲ್ವೆ ಭದ್ರತೆಗೆ 16,000 ಮಾಜಿ ಸೈನಿಕರ ನೇಮಕ
* ಕ್ರೀಡಾಪಟುಗಳಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ
* ಧಾರವಾಡ, ಕೊಲ್ಕತ್ತಾ, ಪುಣೆಗಳಲ್ಲಿ ತರಬೇತಿ ಕೇಂದ್ರ.
* ಧಾರವಾಡದಲ್ಲಿ ಪಾಲಿಟೆಕ್ನಿಕ್.


ಇವನ್ನೂ ಓದಿ