ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಶಿಲ್ಪಾ, ಸುನೀತಾಗೆ ರಾಜೀವ್ ಗಾಂಧಿ ಪ್ರಶಸ್ತಿ
ಸುದ್ದಿ/ಗಾಸಿಪ್
Feedback Print Bookmark and Share
 
ಹಿಂದಿ ಚಿತ್ರರಂಗದ ತಾರೆಗಳಾದ ಸಲ್ಮಾನ್ ಖಾನ್ ಮತ್ತು ಶಿಲ್ಪಾ ಶೆಟ್ಟಿ, ಕಪಿಲ್ ದೇವ್ ಮತ್ತು ಭಾರತೀಯ ಸಂಜಾತೆ ಅಮೆರಿಕನ್ ಗಗನ ಯಾತ್ರಿ ಸುನೀತ ವಿಲಿಯಮ್ಸ್‌ರವರಿಗೆ ತಮ್ಮ ಆಯ್ಕೆಯ ಕ್ಷೇತ್ರಗಳಲ್ಲಿ ಸಲ್ಲಿಸಿದ ಗಣನೀಯ ಸೇವೆಗಾಗಿ ಭಾನುವಾರ ರಾಜೀವ್ ಗಾಂಧಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮುಂಬಯಿಯಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಕೇಂದ್ರ ವಿದ್ಯುಚ್ಛಕ್ತಿ ಸಚಿವ ಸುಶೀಲ್ ಕುಮಾರ್ ಶಿಂಧೆ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್ ರಾವ್ ದೇಶ್‌ಮುಖ್ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಿದರು.

ಭಾರತೀಯ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ ಸೇವೆಗಾಗಿ ಡಿ ವೈ ಪಾಟೀಲ್ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದು, ತಾವು ಸುಧೀರ್ಘವಾದ ನಿಕಟ ಸಂಬಂಧ ಹೊಂದಿದ ಗಾಂಧಿ ಕುಟುಂಬದ ಪ್ರಮುಖ ಸದಸ್ಯರ ಸ್ಮರಣಾರ್ಥ ಸ್ಥಾಪಿಸಲಾಗಿರುವ ಈ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದು ದೊಡ್ಡ ಸನ್ಮಾನ ಎಂದು ಹೇಳಿದರು.

ಇತರ ಪುರಸ್ಕೃತರೆಂದರೆ, ಇಂಡಿಯನ್ ಎಕ್ಸ್‌ಪ್ರೆಸ್ ಮುಖ್ಯ ಸಂಪಾದಕ ಶೇಖರ್ ಗುಪ್ತರವರಿಗೆ ಪತ್ರಿಕೋದ್ಯಮಕ್ಕೆ ಹಾಗೂ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ಧರ್ಮಾರ್ಥ ಸೇವೆಗಾಗಿ ಪ್ರಶಸ್ತಿ ಗೌರವಕ್ಕೆ ಪಾತ್ರರಾದರು.

ಫಾರ್ಮ ಪ್ರಮುಖ ನಿಕೋಲಸ್ ಪಿರಮಲ್ ಇಂಡಿಯದ ನಿರ್ದೇಶಕರಾದ ಸ್ವಾತಿ ಪಿರಮಲ್, ಮಹಿಳಾ ಸಾಧಕರ ವರ್ಗದಲ್ಲಿ ಪ್ರಶಸ್ತಿ ಸ್ವೀಕರಿಸಿದರು.