ಲೂಸ್ ಮಾದ ಅರ್ಥಾತ್ ಯೋಗಿಶ್ ಅಭಿನಯಿಸುತ್ತಿರುವ ಪ್ರೀತ್ಸೆ ಪ್ರೀತ್ಸೆ ಚಿತ್ರದ ಚಿತ್ರೀಕರಣ ಮುಗಿದು ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೇ ಸಾಕಷ್ಟು ಪಬ್ಲಿಸಿಟಿ ಕೂಡ ಚಿತ್ರಕ್ಕೆ ಸಿಕ್ಕಿದೆ. ನಿರ್ದೇಶಕ ಚಿತ್ರದ ಬಗ್ಗೆ ಹಲವು ನೀರೀಕ್ಷೆಗಳನ್ನು ಇಟ್ಟುಕೊಂಡು ಚಿತ್ರ ಮಾಡಿದ್ದಾರೆ.
ಇತ್ತೀಚೆಗೆ ಚಿತ್ರಕ್ಕೆ ಸೆನ್ಸಾರ್ ಕೂಡ ನಡೆದಿದೆ. ಚಿತ್ರಕ್ಕೆ ಎ ಸರ್ಟಿಫಿಕೇಟ್ ದೊರಕಿದೆ. ಆದರೆ ಚಿತ್ರದ ಒಂದು ಪುಟ್ಟ ತುಣುಕನ್ನು ಕಟ್ ಮಾಡಲಾಗಿದೆಯಂತೆ. ಚಿತ್ರ ನೋಡಿದ ಸೆನ್ಸಾರ್ ಮಂಡಳಿ ಚಿತ್ರದ ಬಗ್ಗೆ ಹರ್ಷ ವ್ಯಕ್ತಪಡಿಸಿದೆ.
ಸೆನ್ಸಾರ್ ಮಂಡಳಿ ಸದಸ್ಯ ಹಾಗೂ ನಿರ್ದೇಶಕರಾದ ಅಂಕಲಗಿ ಚಿತ್ರ ವೀಕ್ಷಿಸಿ ನಾಯಕ ಯೋಗೀಶ್ ಅಭಿನಯ ಕಂಡು ಹರ್ಷೋದ್ಘಾರ ವ್ಯಕ್ತಪಡಿಸಿದ್ದಾರೆ. ದುನಿಯಾ, ನಂದ ಲವ್ಸ್ ನಂದಿತ, ಅಂಬಾರಿ ಚಿತ್ರದ ಅಭಿನಯಕ್ಕಿಂತ ಹತ್ತು ಪಟ್ಟು ಚೆನ್ನಾಗಿ ಈ ಚಿತ್ರದಲ್ಲಿ ಯೋಗಿ ನಟಿಸಿದ್ದಾರೆ. ಚಿತ್ರದಲ್ಲಿ ಯೋಗಿ ಅಭಿನಯ ಕಂಡು ಆಶ್ಚರ್ಯವಾಗಿದೆ. ಅತ್ಯದ್ಬುತವಾಗಿ ನಟಿಸಿದ್ದಾರೆ ಎಂದಿದ್ದಾರೆ. ಆದರೆ ಪ್ರೇಕ್ಷಕ ಮಹಾ ಪ್ರಭು ಚಿತ್ರವನ್ನು ಹೇಗೆ ಸ್ವೀಕರಿಸುತ್ತಾನೆ ಎಂಬುದನ್ನು ಕಾದು ನೋಡಬೇಕಿದೆ. ಈ ಚಿತ್ರವೇನಾದರು ಯಶಸ್ಸು ಕಂಡರೆ ಯೋಗಿ ಹ್ಯಾಟ್ರಿಕ್ ಹೀರೋ ಆಗೋದಂತೂ ಖಂಡಿತ.