ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಎಲ್ರೂ ನಂಗೆ ಐ ಲವ್ ಯೂ ಅಂತಿದ್ರು: ಡೈಸಿ (Daisy Bopanna | Kannada Film | Shrishanth)
ಸುದ್ದಿ/ಗಾಸಿಪ್
Feedback Print Bookmark and Share
 
Daisy Bopanna
IFM
ಡೈಸಿ ಬೋಪಣ್ಣ ನಟಿಯಾಗದಿದ್ದರೆ ಏನು ಮಾಡುತ್ತಿದ್ದರು ಎಂದರೆ, ಆಕೆಯೇ ಹೇಳೋದು ಹೀಗೆ. ಒಂದು ವೇಳೆ ಸಿನಿಮಾ ರಂಗದಲ್ಲಿ ಇಲ್ಲದಿದ್ದರೆ ಜಾಹಿರಾತು ಏಜೆನ್ಸಿಯಲ್ಲಿ ಕಾಪಿ ರೈಟರ್ ಆಗುತ್ತಿದ್ದೆ ಎನ್ನುತ್ತಾರೆ ಈ ಡೈಸಿ ಸ್ಪೈಸಿ. ಸಿನಿಮಾ ಎಂದರೆ ಜನರಿಗೆ ಮೋಡಿ ಮಾಡಿ ಕತೆ ಹೇಳುವುದು ಮತ್ತು ಕತೆ ಹೇಳಿ ಮೋಡಿ ಮಾಡುವುದು ಎಂಬುದು ಅವರ ಅನಿಸಿಕೆ.

ಅಂದ ಹಾಗೆ ಇನ್ನೊಂದು ವಿಷ್ಯ. ಇವರಿಗೆ ಕಾಲೇಜಿನಲ್ಲಿ ತುಂಬಾ ಹುಡುಗರು ಐ ಲವ್ ಯೂ ಎಂದು ಹಿಂದೆ ಬಿದ್ದರಂತೆ. ಒಬ್ಬನಂತೂ ಪ್ರತಿದಿನ ನನ್ನ ಹಿಂದೆಯೇ ಸುತ್ತುತ್ತಿದ್ದ. ಕೊನೆಗೂ ಲವ್ ಯೂ ಎಂದು ಹೇಳಿ ಬಿಟ್ಟೆ ಅನ್ನುತ್ತಾರೆ ಸ್ಪೈಸಿ ಹುಡುಗಿ ಡೈಸಿ.

ಮೊನ್ನೆ ಮೊನ್ನೆಯಷ್ಟೆ ಕ್ರಿಕೆಟರ್ ಶ್ರೀಶಾಂತ್ ನನಗೆ ಪ್ರೊಪೋಸ್ ಮಾಡಿದ್ದ ಅನ್ನುವ ಮೂಲಕ ಸುದ್ದಿ ಮಾಡಿದ್ದ ಡೈಸಿ, ಶ್ರೀಶಾಂತ್ ಕಡ್ಡಿಮುರಿದಂತೆ ಡೈಸಿ ವಿರುದ್ಧ ಹರಿಹಾಯ್ದಿದ್ದರು. ನಂತರ ಸುಮ್ಮನೆ, ನಾನು ಹಾಗೆಲ್ಲ ಹೇಳಿರಲಿಲ್ಲ. ತಮಾಷೆಯಾಗಿ ಹೇಳಿದ್ದು ಅಷ್ಟೆ ಎಂದಿದ್ದಳು. ಈಗ ಮತ್ತೆ ಇಂತಹುದೇ ಲವ್ ವಿಚಾರದ ಮಾತನ್ನೇ ಆಡಿದ್ದಾರೆ ಡೈಸಿ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಡೈಸಿ ಬೋಪಣ್ಣ, ಶ್ರೀಶಾಂತ್, ಕನ್ನಡ ಸಿನಿಮಾ