ಗಣೇಶ್ ಅಭಿನಯದ ಉಲ್ಲಾಸ ಉತ್ಸಾಹ ಚಿತ್ರ ಅಂತೂ ಉತ್ಸಾಹದಿಂದಲೇ ಚಿತ್ರೀಕರಣ ಮುಗಿಸಿದೆ. ಚೆಲುವಿನ ಚಿತ್ತಾರದ ನಂತರ ಮತ್ತೊಂದು ರೀಮೇಕ್ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಗಣೇಶ್.
ಕರ್ನಾಟಕದ ರಮ್ಯ ತಾಣಗಳಲ್ಲದೇ ಹೊರರಾಜ್ಯಗಳಲ್ಲೂ ಈಗಾಗಲೇ ಚಿತ್ರೀಕರಣ ಮುಗಿಸಿದೆ. ಗಣೇಶ್ ಜೋಡಿಯಾಗಿ ಮುಂಬೈ ಬೆಡಗಿ ಯಮಿಗೌತಮಿ ನಾಯಕಿಯಾಗಿ ನಟಿಸುತ್ತಿದ್ದಾರೆ.
ಖ್ಯಾತ ನಿರ್ದೇಶಕರ ಬಳಿ ಸಹಾಯಕರಾಗಿದ್ದ ದೇವರಾಜ್ ಪಾಲನ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಇದೊಂದು ಸಂಪೂರ್ಣ ಮನರಂಜನೆ ಚಿತ್ರ ಎನ್ನುತ್ತಾರೆ ಗಣೇಶ್. ಅಂದಹಾಗೆ ಈ ಚಿತ್ರ ಮುಂದಿನ ತಿಂಗಳು ತೆರೆಗೆ ಬರುವ ನಿರೀಕ್ಷೆಯಿದೆ. (ಉಲ್ಲಾಸ ಉತ್ಸಾಹದ ಫೋಟೋಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ)