ದುನಿಯಾದ ದುನಿಯಾದಿಂದ ರಾತ್ರೋರಾತ್ರಿ ಸ್ಟಾರ್ ಆದ ಲೂಸ್ ಮಾದ ಯೋಗೀಶ್‌ರ ಮಾರ್ಕೆಟ್ ಎಷ್ಟು..? ಈ ಪ್ರಶ್ನೆಯನ್ನು ಲೂಸ್ ಮಾದ ಯೋಗಿಗೇ ಕೇಳಿದರೆ ಆತ ನನಗಿದೆಲ್ಲ ಗೊತ್ತಿಲ್ಲ, ಎಲ್ಲ ಅಪ್ಪನಿಗೆ ಸಂಬಂಧಿಸಿದ್ದು ಎನ್ನುವಂತೆ ಹಾರಿಕೆಯ ಉತ್ತರ ನೀಡಿದ್ದು ಗೊತ್ತಿರೋ ಸಂಗತಿ.
ಹೀಗೆಲ್ಲಾ ವಿಷಯಾಂತರ ಮಾಡಿದರೂ ಸತ್ಯ ಹೊರಬರದೆ ಇರೋದಾದ್ರೂ ಹೇಗೆ ಹೇಳಿ. ಅಂತೂ ಲೂಸ್ ಮಾದ ಯೋಗಿಯ ತಾರಾ ಮೌಲ್ಯ ಬರೋಬ್ಬರಿ 30 ಲಕ್ಷ ರುಪಾಯಿಗಳು ಎಂಬ ಸಂಗತಿ ಈಗ ಜಗಜ್ಜಾಹೀರಾಗಿ ಅಂದಾಜಿಸಲಾಗಿದೆ. ಇಷ್ಟೇ ಅಲ್ಲ. ಯೋಗಿ ಸದ್ಯಕ್ಕೆ ಗಾಂಧಿನಗರಿಯಲ್ಲಿ ವೇಗವಾಗಿ ಮಾರ್ಕೆಟ್ ಕುದುರಿಸಿಕೊಂಡ ನಟ ಕೂಡಾ.
ಪಡ್ಡೆಗಳ ಪ್ರಿಯವಾದ ಯೋಗಿ ಕೈಯಲ್ಲಿ ಈಗ ಒಟ್ಟು 15 ಚಿತ್ರಗಳಿವೆಯಂತೆ. ಯೋಗಿ, ಶನಿವಾರ, ಯಕ್ಷ, ರಾವಣ.... ಹೀಗೆ ತರಹೇವಾರಿ ಹೆಸರುಗಳ 15 ಚಿತ್ರಗಳು ಯೋಗಿಯ ಬತ್ತಳಿಕೆಯಲ್ಲಿರೋದ್ರಿಂದ ಸದ್ಯಕ್ಕಂತೂ ಯೋಗಿ ಚಿಂತಿಸುವಂತಿಲ್ಲ. ಆದ್ರೂ ವಯಸ್ಸಿನ್ನೂ 20 ಮಾತ್ರ. ಇಷ್ಟು ಚಿಕ್ಕ ವಯಸ್ಸಿಗೇ ಇಷ್ಟೆಲ್ಲಾ..!