ನಿರ್ದೇಶಕ ಶಂಕರ್ ಬಿ.ಕೊಡವ ಅವರ ಪ್ರಕಾರ ಸತ್ತ ಮೇಲೂ ಮನುಷ್ಯನ ಆತ್ಮ ಭೂಮಿಯ ಮೇಲೆ ಎರಡು ಕಾರಣಗಳಿಗಾಗಿ ಇರುತ್ತವೆ. ಒಂದು ಪ್ರೀತಿಗಾಗಿ, ಇನ್ನೊಂದು ದ್ವೇಷಕ್ಕಾಗಿ.
ಇದೇ ಎಳೆಯನ್ನು ಇಟ್ಟುಕೊಂಡು ಅವರು ಅಂತರಾತ್ಮ ಎಂಬ ಭಯಾನಕ ಚಿತ್ರ ಮಾಡಿದ್ದಾರೆ. ತಾನು ಬಯಸಿದ್ದ ವಸ್ತುವನ್ನು ಅಥವಾ ಆದ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳಲು ಆತ್ಮ ಸುತ್ತುತ್ತಿರುತ್ತದೆ ಎಂಬ ಕಾಲ್ಪನಿಕ ಕಥೆಯನ್ನು ಅವರು ಸಿನೆಮಾದ ಮೂಲಕ ಹೇಳಲು ಹೊರಟಿದ್ದಾರೆ.
ಕೋಡ್ಲು ರಾಮಕೃಷ್ಣ ಅವರ ಶಿಷ್ಯರಾದ ಶಂಕರ್, ನಿರ್ದೇಶಿಸುತ್ತಿರುವ ಮೊದಲ ಚಿತ್ರವಿದು. ಕನ್ನಡದಲ್ಲಿ ಹಿಂದೆಂದೂ ತೆಗೆಯದಂಥ ಚಿತ್ರವನ್ನು ಮಾಡಬೇಕೆಂಬುದು ಅವರ ಗುರಿಯಂತೆ. ಹಾಗಾಗಿ ಈ ಭಯಾನಕ ಚಿತ್ರ ಅಂತರಾತ್ಮವನ್ನು ಹೆಣೆದಿದ್ದಾರೆ. ಈ ಚಿತ್ರದಲ್ಲಿ ನಾಯಕರಾಗಿ ಮಿಥುನ್ ತೇಜಸ್ವಿ ಹಾಗೂ ರೋಹನ್ ಗೌಡ ನಟಿಸಿದ್ದಾರೆ.
ಕಥೆ ಆಲಿಸಿಯೇ ಇಂಪ್ರೆಸ್ ಆದ ಹೊಸ ನಿರ್ಮಾಪಕರುಗಳಾದ ಜಯದೇವ ಹಗೂ ಕೃಷ್ಣ ಈ ಚಿತ್ರಕ್ಕೆ ದುಡ್ಡು ಸುರಿದಿದ್ದಾರೆ ಎನ್ನುತ್ತಾರೆ ಶಂಕರ್. ಮುಖ್ಯವಾಗಿ ಈ ಚಿತ್ರದಲ್ಲಿ ಗ್ರಾಫಿಕ್ ತಂತ್ರಜ್ಞಾನವನ್ನು ಧಾರಾಳವಾಗಿ ಬಳಸಿಕೊಳ್ಳಲಾಗಿದೆಯಂತೆ.