ಕೆ. ಕಲ್ಯಾಣ್ ಪ್ರೇಮಿಗಳನ್ನು ಒಲಿಸಿ ಬೇಸತ್ತು, ಇದೀಗ ಹೊಸ ಪ್ರಯೋಗಕ್ಕೆ ಅಣಿಯಾಗಿದ್ದಾರೆ. ಹೌದು, ಅವರೀಗ ಪ್ರೇಮಿಗಳನ್ನು ಮೆಚ್ಚಿಸುವ ಹಾಡು ಬಿಟ್ಟು ಚಿತ್ರ ಸಂಗೀತದಿಂದ ಕೊಂಚ ದೂರಾಗಿ ಒಂದು ಆಲ್ಬಂ ರಚಿಸಿದ್ದಾರೆ.
ಕನ್ನಡದ ಪಾಲಿಗೆ ಆಲ್ಬಂಗಳು ಅತಿ ವಿರಳ. ಒಂದು ರೀತಿ ಮರುಭೂಮಿಯ ಒಯಾಸಿಸ್ ಅಂದರೂ ತಪ್ಪಾಗಲಾರದು. ಈ ಸ್ಥಿತಿಯಲ್ಲಿರುವಾಗ ಕಲ್ಯಾಣ್ ಒಂದು ಆಲ್ಬಂ ಕೊಟ್ಟಿದ್ದಾರೆ. 'ಟೈಂಪಾಸ್' ಹೆಸರಿನ ಈ ಆಲ್ಬಂನಲ್ಲಿ ಐದು ಹಾಡುಗಳಿವೆ. ಡಿಫರಂಟ್ ಆಗಿದ್ದು, ಸಾಮಾನ್ಯ ಜನರ ಭಾಷೆಯಲ್ಲಿ ಹಾಡುಗಳನ್ನು ಸಿದ್ಧಪಡಿಸಲಾಗಿದೆ.
ಆಲ್ಬಂಗೆ ಅತ್ಯುತ್ತಮ ಸಾಹಿತ್ಯವನ್ನು ಇವರು ರಚಿಸಿದ್ದು, ಇದಕ್ಕಾಗಿ ಸಾಕಷ್ಟು ಶ್ರಮವನ್ನೂ ತೊಡಗಿಸಿದ್ದಾರೆ. ಒಂದು ಅಪರೂಪದ ಆಲ್ಬಂ ಇದಾಗಬೇಕೆಂದು ಅವರು ಆಶಿಸಿ ಸಿದ್ಧಪಡಿಸಿದ್ದಾರೆ. ಈ ಆಲ್ಬಂಗೆ ಕ್ಲಾಸಿಕಲ್ ಟಚ್ ನೀಡಿದ್ದಾರೆ. ಅಮ್ಮ ಆಡಿಯೋ ಸಂಸ್ಥೆ ಇದನ್ನು ಹೊರತಂದಿದೆ.
ಆಡಿಯೊ ಬಿಡುಗಡೆ ಸಮಾರಂಭ ಇತ್ತೀಚೆಗೆ ನಗರದಲ್ಲಿ ನಡೆಯಿತು. ಪುನಿತ್ ರಾಜ್ ಕುಮಾರ್, ಯೋಗರಾಜ್ ಭಟ್ ಉಪಸ್ಥಿತರಿದ್ದು ಶುಭ ನುಡಿದರು. ಪುನಿತ್ ರಾಜ್ ಕುಮಾರ್ ಇವರ ಮುಂದಿನ ಆಲ್ಬಂಗೆ ತಾವೂ ಒಂದು ಹಾಡನ್ನು ಹಾಡುವ ಇಂಗಿತ ವ್ಯಕ್ತಪಡಿಸಿದರು. ಸಿನಿಮಾ ಚಿತ್ರಗಳಲ್ಲಿ ಮಾತ್ರವಲ್ಲ, ಈ ರೀತಿಯ ಯತ್ನವನ್ನು ಅದರ ಹೊರತಾಗಿಯೂ ಕಲ್ಯಾಣ್ ಮಾಡಿದ್ದು ಮೆಚ್ಚುಗೆ ಪಡೆಯುವ ಸಂಗತಿ ಎಂದು ಯೋಗರಾಜ್ ಭಟ್ ಹೇಳಿದರು. ಇದು ಹೆಸರಿಗೆ ತಕ್ಕಂತೆ ಟೈಂಪಾಸ್ ಆಲ್ಬಂ ಆಗಿದ್ದು, ಬಿಡುವಿದ್ದಾಗೆಲ್ಲ ಕೇಳಿ ಆನಂದಿಸಬಹುದಾಗಿದೆ.