ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಅರ್ಜುನ್ ಸರ್ಜಾ ಅಳಿಯ 'ಚಿರು'ವಿಗೆ ಸುದೀಪ್ ಪ್ರಶಂಸೆ (Chirru | Mahesh Babu | Chiranjeevi Sarja | Sudeep)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಯುವ ಪ್ರತಿಭೆಗಳನ್ನು ಹಿಂದಿನಿಂದಲೂ ಪ್ರೋತ್ಸಾಹಿಸುತ್ತಾ ಬಂದಿರುವ ಸುದೀಪ್ ಈಗ ಮೆಚ್ಚುಗೆಯ ಮಾತುಗಳನ್ನಾಡಿರುವುದು ಅರ್ಜುನ್ ಸರ್ಜಾ ಅಳಿಯ ಚಿರಂಜೀವಿ ಸರ್ಜಾರ ಚಿತ್ರಕ್ಕೆ. ಅವರ 'ಚಿರು' ಸಿನಿಮಾ ನೋಡಿದ ಬಳಿಕ ಬೆನ್ನು ತಟ್ಟಿದ್ದಾರೆ.

ಅರ್ಜುನ್ ಸರ್ಜಾ ಜತೆ ಇತ್ತೀಚೆಗಷ್ಟೇ ಈ ಚಿತ್ರವನ್ನು ನೋಡಿದ ಸುದೀಪ್ ಮಾಧ್ಯಮಗಳೊಂದಿಗೂ ತನ್ನ ಸಂತಸವನ್ನು ಹಂಚಿಕೊಂಡಿದ್ದಾರೆ. ನಿಜಕ್ಕೂ ಉತ್ತಮ ಚಿತ್ರ, ಚಿರಂಜೀವಿ ನಟನೆ ಪ್ರಶಂಸಾರ್ಹ ಎಂದಿದ್ದಾರೆ.

ಚಿರು ಆಕ್ಷನ್ ಮತ್ತು ಡ್ಯಾನ್ಸ್‌ನಲ್ಲಿ ಅತ್ಯುತ್ತಮ ಎಂಬುವುದು ನಮಗೆಲ್ಲ ಗೊತ್ತಿರುವಂತದ್ದೇ. ಆಧರೆ ಈ ಚಿತ್ರದಲ್ಲಿ ಭಾವನಾತ್ಮಕ ದೃಶ್ಯಗಳಲ್ಲೂ ಅವರು ಮೇಲುಗೈ ಸಾಧಿಸಿದ್ದಾರೆ. ಇದು ಅವರಲ್ಲಿ ಸುಧಾರಣೆ ಕಂಡಿರುವ ಅಂಶ ಎಂದಿರುವ ಸುದೀಪ್, ಚಿತ್ರದ ನಾಯಕಿ ಕೃತಿ ಕರಬಂಧ ಅವರತ್ತಲೂ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

ನಿರ್ದೇಶಕ ಮಹೇಶ್ ಬಾಬು ತೋರಿಸಿರುವ ಚಾಕಚಕ್ಯತೆಯನ್ನೂ ಸುದೀಪ್ ಹಾಡಿ ಹೊಗಳಿದ್ದಾರೆ. ಈ ವಿಶೇಷ ಪ್ರದರ್ಶನಕ್ಕೆ ನಿರ್ದೇಶಕ ಬಂದಿರಲಿಲ್ಲ.

ಅದೇ ಹೊತ್ತಿಗೆ ಸುದೀಪ್ ಹೊಸ ಚಿತ್ರ 'ಕೆಂಪೇಗೌಡ'ದಲ್ಲಿ ಚಿರಂಜೀವಿ ಸರ್ಜಾ ಕೂಡ ಕಾಣಿಸಿಕೊಳ್ಳಲಿದ್ದಾರೆ. ಹಾಡೊಂದರಲ್ಲಿ ಸರ್ಜಾ, ಯೋಗೀಶ್, ಯಶ್, ಪ್ರಶಾಂತ್ ಮತ್ತು ಶ್ರೀನಗರ ಕಿಟ್ಟಿ ಮುಂತಾದವರು ಸುದೀಪ್ ಜತೆ ಹೆಜ್ಜೆ ಹಾಕಲಿದ್ದಾರಂತೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಚಿರು, ಮಹೇಶ್ ಬಾಬು, ಚಿರಂಜೀವಿ ಸರ್ಜಾ, ಸುದೀಪ್