ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನಿಖಿತ್-ರಾಧಿಕಾ ಜತೆ ಶ್ರದ್ಧಾ ಹೊಸ ಪ್ರೇಮ ಪುರಾಣ (Shradha Das | Hosa Prema Purana | Shivakumar | Radhika Gandhi)
ಸುದ್ದಿ/ಗಾಸಿಪ್
Bookmark and Share Feedback Print
 
ಶ್ರದ್ಧಾ ದಾಸ್ ಅಂದ ಕೂಡಲೇ ಹೆಸರು ಕೇಳಿದ್ದು ನೆನಪಿಗೆ ಬರದೇ ಇರದು. ಅವರ ಪ್ರೇಮ ಪುರಾಣ ಏನೆಂದು ಕೇಳುತ್ತಿದ್ದೀರಾ? ಹಾಗೇನಿಲ್ಲ, ಅದು ಅವರು ನಟಿಸುತ್ತಿರುವ ಹೊಸ ಕನ್ನಡ ಚಿತ್ರದ ಹೆಸರು. ಮುಂಬೈ ಮೂಲದ ನಟಿಗೆ ಲಿವಿಂಗ್ ಟುಗೆದರ್ ಸಂಬಂಧಗಳ ಬಗ್ಗೆ ಬೆಳಕು ಚೆಲ್ಲುವ 'ಹೊಸ ಪ್ರೇಮ ಪುರಾಣ'ದಲ್ಲಿ ಟಿಕೆಟ್ ಸಿಕ್ಕಿದೆ.

ನಿಖಿತ್ ಈ ಚಿತ್ರದಲ್ಲಿ ನಾಯಕ. ಶ್ರದ್ಧಾ ದಾಸ್ ಮತ್ತು ರಾಧಿಕಾ ಗಾಂಧಿ ನಾಯಕಿಯರು.
PR

ವಿಷ್ಣುವರ್ದನ್ ಕೊನೆ ಚಿತ್ರ 'ಆಪ್ತರಕ್ಷಕ'ದ ತೆಲುಗು ರಿಮೇಕ್‌ನಲ್ಲಿ (ನಾಗವಲ್ಲಿ) ವೆಂಕಟೇಶ್‌ಗೆ ನಾಯಕಿಯಾಗಿ ನಟಿಸುತ್ತಿರುವ ಶ್ರದ್ಧಾ ಈ ಹಿಂದೆ ದೊಡ್ಡದಾಗಿ ಸುದ್ದಿ ಮಾಡಿದ್ದು ಆರ್ಯ ಭಾಗ ಎರಡರಲ್ಲಿ. ಸಿದ್ಧು ಫ್ರಮ್ ಶ್ರೀಕಾಕುಲಂ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಪಡೆದಿದ್ದ ಈಕೆ ಇದುವರೆಗೆ ಎಂಟು ಚಿತ್ರಗಳಲ್ಲಿ ನಟಿಸಿದ್ದಾರೆ. 'ಲಾಹೋರ್' ಎಂಬ ಹಿಂದಿ ಚಿತ್ರದಲ್ಲೂ ಸಣ್ಣ ಪಾತ್ರವೊಂದನ್ನು ಮಾಡಿದ್ದರು.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಅಂದ ಹಾಗೆ ಆಕೆ ಕನ್ನಡದಲ್ಲಿ ನಟಿಸುತ್ತಿರುವ 'ಹೊಸ ಪ್ರೇಮ ಪುರಾಣ'ವನ್ನು ನಿರ್ದೇಶಿಸುತ್ತಿರುವುದು ಶಿವಕುಮಾರ್ ಎಂಬವರು.

ಸಹಬಾಳ್ವೆ ಸಂಬಂಧದಲ್ಲಿನ ಒಳಿತು-ಕೆಡುಕುಗಳನ್ನು ವಿವರಿಸುವ ಚಿತ್ರ ಸ್ವಮೇಕ್ ಎಂದೂ, ಐದು ವರ್ಷಗಳ ಹಿಂದೆ ಬಾಲಿವುಡ್‌ನಲ್ಲಿ ಬಂದಿದ್ದ 'ಸಲಾಂ ನಮಸ್ತೆ' ಚಿತ್ರದ ಯಾವುದೇ ಅಂಶಗಳು ಚಿತ್ರದಲ್ಲಿಲ್ಲವೆಂದೂ ನಿರ್ದೇಶಕರು ಜತೆಗೆ ಸ್ಪಷ್ಟಪಡಿಸಿದ್ದಾರೆ.

ಈ ಚಿತ್ರದಲ್ಲಿ ಸುಧಾರಿತ ಜೀವನ ಪದ್ಧತಿಯ ವಸ್ತು ಇರುವುದರಿಂದ ಒಪ್ಪಿಕೊಂಡಿದ್ದೇನೆ ಎಂದು ಶ್ರದ್ಧಾ ಹೇಳಿಕೊಂಡಿದ್ದಾರೆ. ರಾಧಿಕಾ ಗಾಂಧಿಯದ್ದು ಇಲ್ಲಿ ಹಳ್ಳಿ ಹುಡುಗಿಯ ಪಾತ್ರವಂತೆ.

ನಿರ್ದೇಶಕನಾಗಿ ಶಿವಕುಮಾರ್ ಅವರಿಗೆ ಇದು ಚೊಚ್ಚಲ ಚಿತ್ರ. ಈ ಹಿಂದೆ ಮಿನುಗು ಮತ್ತು ಮಲೆನಾಡ ಮಲ್ಲಿಗೆ ಚಿತ್ರದಲ್ಲಿ ಕೆಲಸ ಮಾಡಿದ ಅನುಭವ ಮಾತ್ರ ಬೆನ್ನಿಗಿದೆ.

ಹಿರಿಯ ನಟ ರೂಪೇಶ್ ಪುತ್ರನಾಗಿರುವ ನಾಯಕ ನಿತೀಶ್, ಲಿವಿಂಗ್ ಟುಗೆದರ್ ಸಂಬಂಧಗಳ ಬಗ್ಗೆ ತನ್ನ ಗೆಳೆಯರಿಂದ ಮಾಹಿತಿ ಪಡೆದಿದ್ದಾರಂತೆ. ಚಿತ್ರದಲ್ಲಿ ಅವರದ್ದು ನಾಯಕ ಮತ್ತು ವಿಲನ್ ಶೇಡ್ ಹೊಂದಿರುವ ಪಾತ್ರ. ತನ್ನಿಂದ ಸಾಧ್ಯವಾಗುವಷ್ಟು ಉತ್ತಮ ಕೊಡುಗೆ ನೀಡಲು ಯತ್ನಿಸುವುದಾಗಿ ಹೇಳಿದರು.

ಮೈಸೂರಿನ ಉದ್ಯಮಿ, ಚಿಕ್ಕಮಗಳೂರಿನಲ್ಲಿ ಕಾಫಿ ಎಸ್ಟೇಟ್ ಹೊಂದಿರುವವರು ಹಣ ಹಾಕುತ್ತಿದ್ದಾರೆ. ಚಿತ್ರಕಥೆ ಇಷ್ಟವಾದ ಕಾರಣ ನಿರ್ದೇಶಕರನ್ನು ಭಾರೀ ನಂಬಿದ್ದಾರಂತೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶ್ರದ್ಧಾ ದಾಸ್, ಹೊಸ ಪ್ರೇಮ ಪುರಾಣ, ರಾಧಿಕಾ ಗಾಂಧಿ, ನಿಖಿತ್