ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ರಮ್ಯಾ ಈಗ ಒಂಟಿಯಲ್ವಂತೆ! (Ramya | Sanju weds Geetha | Dandam Dashagunam | Johny mera Naam)
PR
'ನಾನೀಗ ಒಂಟಿಯಲ್ಲ. ನನ್ನ ಬದುಕಿನಲ್ಲಿ ಈಗ ಮತ್ತೊಬ್ಬರ ಪ್ರವೇಶವಾಗಿದೆ' ಎಂದು ಪ್ರತಿಷ್ಠಿತ ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಟಿ ರಮ್ಯಾ ಘೋಷಿಸಿರುವುದು ಅನೇಕ ಮಂದಿಗೆ ಅಚ್ಚರಿ ಮೂಡಿಸಿದೆ. ಆದರೆ ಆ ಅದೃಷ್ಟಶಾಲಿ ಯಾರು ಎಂಬುದು ಇನ್ನೂ ಪತ್ತೆಯಾದಂತಿಲ್ಲ.

ಆತ ಯಾರೇ ಇರಲಿ. ರಮ್ಯಾ ಮಾತ್ರ ಬರು ಬರುತ್ತಾ ಹೆಚ್ಚು ಹೆಚ್ಚು ಚೆಂದ ಕಾಣಿಸುತ್ತಿರುವುದಂತೂ ಹದಿನಾರಾಣೆ ಸತ್ಯ. 'ಸಂಜು ವೆಡ್ಸ್ ಗೀತಾ' ಚಿತ್ರದ 'ಗಗನವೇ ಬಾಗಿ' ಹಾಡನ್ನು ಟಿವಿಯಲ್ಲಿ ನೋಡಿದವರು ರಮ್ಯಾ ಬಗ್ಗೆ ಈ ಅಭಿಪ್ರಾಯಕ್ಕೆ ಬಂದರೆ ಆಶ್ಚರ್ಯವಿಲ್ಲ. ರಮ್ಯಾ ನಿಜಕ್ಕೂ ಬರು ಬರುತ್ತಾ ಮತ್ತಷ್ಟು ಸುಂದರಿಯಾಗುತ್ತಿದ್ದಾರೆ.

2003ರಲ್ಲಿ 'ಅಭಿ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ರಮ್ಯಾಗೆ ಈಗ ಆಜು ಬಾಜು ಮೂವತ್ತರ ಹರೆಯ. ಸಾಮಾಜಿಕ ವೆಬ್‌ತಾಣ 'ಫೇಸ್‌ಬುಕ್‌' ನಲ್ಲಿ ಅವರಿಗೆ ಈಗಾಗಲೇ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ರಮ್ಯಾ ಅಭಿಮಾನಿಗಳ ಕಣ್ಣು ಇದೀಗ ಏಪ್ರಿಲ್ ಒಂದರಂದು ಬಿಡುಗಡೆಗೊಳ್ಳಲಿರುವ 'ಸಂಜು ವೆಡ್ಸ್ ಗೀತಾ' ಚಿತ್ರದ ಮೇಲಿದೆ.

ಒಟ್ಟಿನಲ್ಲಿ ರಮ್ಯಾ ಸೌಂದರ್ಯಕ್ಕೆ ಮನಸೋತು 'ಗಗನವೇ ಮಾಗಿ' ಮುತ್ತಿಕ್ಕಿದೆ ಎಂದರೂ ಅತಿಶಯೋಕ್ತಿ ಆಗದು. ಈ ಮಧ್ಯೆ ರಮ್ಯಾ ಅಭಿನಯದ 'ದಂಡಂ ದಶಗುಣಂ' ಚಿತ್ರವೂ ಬೆಳ್ಳಿ ತೆರೆಗೆ ಬರಲು ಸಜ್ಜಾಗುತ್ತಿದೆ. ಈ ಚಿತ್ರಕ್ಕೂ ರಮ್ಯಾ ಅವರ ಸಹಜ ಸೌಂದರ್ಯವೇ ಗ್ಲಾಮರ್ ಲೇಪನವನ್ನಿತ್ತಿದೆ ಎನ್ನುತ್ತಾರೆ ಗಾಂಧೀನಗರ ಪಂಡಿತರು. ರಮ್ಯಾ ಈಗ ವಿಜಯ್ ಜೊತೆಗಿನ ಅಭಿನಯದ 'ಜಾನಿ ಮೇರಾ ನಾಮ್' ಚಿತ್ರೀಕರಣದಲ್ಲಿ ತಲ್ಲೀನರಾಗಿದ್ದಾರೆ.
ಇವನ್ನೂ ಓದಿ