ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕಿಸ್‌ ಕೊಟ್ರೆ ಪ್ರೇಕ್ಷಕರು ಒಪ್ತಾರಾ...? ; ರಾಗಿಣಿ ಪ್ರಶ್ನೆ! (Kempe Gowda | Ragini | Kannada Film | Glamorous Actress)
PR
ಗ್ಲಾಮರಸ್ ಪಾತ್ರ ಬಯಸುವ ನಿಮಗೆ ಹೀರೋಗೆ ಕಿಸ್ ನೀಡುವ ಪಾತ್ರ ಬಂದರೆ ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ ನಟಿ ರಾಗಿಣಿ ಎಂಬ ಬೆಡಗಿ ಸಕಾರಾತ್ಮಕವಾಗಿಯೇ ಉತ್ತರಿಸಿದ್ದಾರೆ.

'ಅಂಥಾ ಪಾತ್ರಕ್ಕೆ ನಾನಂತೂ ರೆಡಿ. ಆದರೆ ಕನ್ನಡ ಸಿನಿಮಾ ಪ್ರೇಕ್ಷಕರು ಇಂಥಾ ದೃಶ್ಯಗಳನ್ನು ಒಪ್ಪುತ್ತಾರಾ..?' ಎಂದೂ ಅವರು ಮರು ಪ್ರಶ್ನೆ ಹಾಕುತ್ತಾರೆ. ಕನ್ನಡ ಚಿತ್ರ ಪ್ರೇಕ್ಷಕರಿಗೆ ಅತ್ಯುತ್ತಮ ಅಭಿರುಚಿ ಇದೆ. ಚುಂಬನ ಹಾಗೂ ಅರೆ ನಗ್ನ ದೃಶ್ಯಗಳನ್ನು ಅವರು ಒಪ್ಪುವುದಿಲ್ಲ ಎಂಬುದು ರಾಗಿಣಿ ಅಭಿಮತ.

ತನ್ನ ಅಭಿನಯದ 'ಕೆಂಪೇಗೌಡ' ಚಿತ್ರ ಬಿಡುಗಡೆ ಸಂದರ್ಭಾರ್ಥ 'ಅರಗಿಣಿ' ವಾರಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಾಗಿಣಿ, ಹಿಂದಿ ಸಿನಿಮಾದಲ್ಲಿ ನಾಯಕ ನಾಯಕಿಗೆ ಮುತ್ತು ಕೊಡೋದನ್ನ ನಮ್ಮವರು ನೋಡುತ್ತಾರಲ್ಲಾ ಎಂಬ ಪ್ರಶ್ನೆಗೆ, 'ನಿಜ. ಆದರೆ ಕನ್ನಡ ಸಿನಿಮಾಗಳನ್ನೇ ಪ್ರೀತಿಸುವ ಪ್ರೇಕ್ಷಕರು ಇಂತಹ ಹಿಂದಿ ಸಿನಿಮಾಗಳನ್ನು ನೋಡೋದಿಲ್ಲ' ಎಂದು ಉತ್ತರಿಸಿದ್ದಾರೆ.

ಲಿಪ್ ಟು ಲಿಪ್ ಕಿಸ್ ದೃಶ್ಯಗಳ ಎಷ್ಟೋ ಹಿಂದಿ ಚಿತ್ರಗಳು ಬಂದಿವೆಯಾದರೂ ಆ ಪೈಕಿ ಎಷ್ಟು ಸಿನಿಮಾಗಳು ಕರ್ನಾಟಕದಲ್ಲಿ ಸಕ್ಸಸ್ ಆಗಿವೆ ಎಂದು ಮರು ಸವಾಲು ಹಾಕಿದ್ದಾರೆ ರಾಗಿಣಿ.

ನಾನು ಗ್ಲಾಮರಸ್ ಪಾತ್ರ ಮಾಡುವುದು ನನ್ನ ಅಭಿಮಾನಿಗಳಿಗೆ ಇಷ್ಟ. ನಾನು ಎಂತಹ ಡಿಫರೆಂಟ್ ಪಾತ್ರದಲ್ಲಿ ನಟಿಸಿದರೂ ಕೂಡ ಗ್ಲಾಮರಸ್ ಆಗಿರಬೇಕು ಅಂತ ಅಭಿಮಾನಿಗಳು ಬಯಸುತ್ತಾರೆ. ಅವರ ಬಯಕೆ ಈಡೇರಿಸುವುದು ನನ್ನ ಕರ್ತವ್ಯ ಎಂದಿದ್ದಾರೆ ರಾಗಿಣಿ.
ಇವನ್ನೂ ಓದಿ