ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನಾನು ಕನ್ನಡ ವಿರೋಧಿಯಲ್ಲ, ನಂಬಿ ಪ್ಲೀಸ್: ರಾಗಿಣಿ (Ragini Dwivedi | Kannada film industry | Malayalam | Mohanlal)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
'ವೀರ ಮದಕರಿ' ಎಂಬ ಕನ್ನಡ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿ ಕನ್ನಡ ಚಿತ್ರರಂಗದ ವಿರುದ್ಧ ಹಗುರ ಮಾತುಗಳನ್ನಾಡಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ರಾಗಿಣಿ ದ್ವಿವೇದಿ ಕೆಂಡಾಮಂಡಲವಾಗಿದ್ದಾರೆ. ನಾನು ಹಾಗೆ ಹೇಳಿಯೇ ಇಲ್ಲ, ನಾನು ಕನ್ನಡವನ್ನು ಅಪಾರವಾಗಿ ಪ್ರೀತಿಸುತ್ತೇನೆ ಎಂದು ಕನ್ನಡತಿಯೇ ಆಗಿರುವ ನಟಿ ಸ್ಪಷ್ಟಪಡಿಸಿದ್ದಾರೆ.

ಮಲಯಾಳಂನ 'ಕಂದಹಾರ್' ಎಂಬ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಮತ್ತು ಮೋಹನ್ ಲಾಲ್ ಮುಂತಾದ ಘಟಾನುಘಟಿಗಳ ಜತೆ ನಟಿಸಿ ಬಂದಿದ್ದ ರಾಗಿಣಿ ಕೆಲ ದಿನಗಳ ಹಿಂದೆ ಮಾತನಾಡುತ್ತಾ, ಮಲ್ಲುವುಡ್‌ನಿಂದ ಸ್ಯಾಂಡಲ್‌ವುಡ್ ಕಲಿಯುವುದು ತುಂಬಾ ಇದೆ ಎಂದು ಹೋಲಿಕೆ ಮಾಡಿದ್ದರು.

ಮಲಯಾಳಂ ಚಿತ್ರರಂಗದಲ್ಲಿ ಅವಧಿಗೆ ಮುಂಚೆಯೇ ಚಿತ್ರವನ್ನು ಮುಗಿಸುತ್ತಾರೆ. ಆದರೆ ಇಲ್ಲಿ ಅನಗತ್ಯವಾಗಿ ಎಳೆದಾಟ ನಡೆಸುತ್ತಾರೆ. ಅಲ್ಲಿನ ತಂತ್ರಜ್ಞರ, ನಟರ ಕಾರ್ಯ ಮೆಚ್ಚುವಂತದ್ದು. ಅಲ್ಲಿನ ಚಿತ್ರರಂಗ ಕಿರಿಯ ಕಲಾವಿದರನ್ನು ಕೂಡ ನಡೆಸಿಕೊಳ್ಳುವ ರೀತಿ ಅನುಕರಣೀಯ. ಕನ್ನಡ ಚಿತ್ರರಂಗ ಈಗಷ್ಟೇ ಸರಿಯಾದ ದಾರಿಯಲ್ಲಿ ಸಾಗುತ್ತಿದೆ. ಮಲಯಾಳಂ, ಬೆಂಗಾಲಿ ಚಿತ್ರರಂಗಗಳಂತೆ ಇಲ್ಲೂ ವೃತ್ತಿಪರ ವಾತಾವರಣ ನಿರ್ಮಾಣವಾಗಬೇಕಾದ ಅಗತ್ಯವಿದೆ ಎಂದು ರಾಗಿಣಿ ಹೇಳಿದ್ದರು ಎಂದು ಪತ್ರಿಕೆಯೊಂದು ವರದಿ ಮಾಡಿತ್ತು.

ಇದು ತೀವ್ರ ವಿವಾದಕ್ಕೂ ಕಾರಣವಾಗಿತ್ತು. ಕನ್ನಡ ಚಿತ್ರಗಳ ಮೂಲಕವೇ ಬೆಳಕಿಗೆ ಬಂದ ರಾಗಿಣಿ ಕನ್ನಡ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಹುಯಿಲೆಬ್ಬಿಸಲಾಗಿತ್ತು. ಅಷ್ಟರಲ್ಲೇ ರಾಗಿಣಿ, ತಾನು ಹಾಗೆ ಹೇಳಿಯೇ ಇಲ್ಲ ಎಂದಿದ್ದಾರೆ.

ನಾನು ಅಂತರ ಹೇಳಿಕೆಯನ್ನೇ ನೀಡಿಲ್ಲ. ಕನ್ನಡ ಮತ್ತು ಮಲಯಾಳಂ ಚಿತ್ರರಂಗಗಳ ಬಗ್ಗೆ ನಿಮಗೇನನ್ನಿಸುತ್ತಿದೆ ಎಂದು ಪ್ರಶ್ನೆ ಕೇಳಲಾಗಿತ್ತು. ಕನ್ನಡ ನನ್ನ ತವರು ಮನೆಯಿದ್ದಂತೆ. ನಾವು ಸಾಕಷ್ಟು ಪ್ರಗತಿಯನ್ನು ಸಾಧಿಸಿದ್ದೇವೆ. ಇನ್ನೂ ಹೆಚ್ಚಿನದ್ದು ಸಾಧ್ಯವಾದರೆ ಉತ್ತಮ ಎಂದು ಹೇಳಿದ್ದೆ. ಆದರೆ ಅದನ್ನು ತಿರುಚಿ ಬರೆಯಲಾಗಿದೆ. ಈ ಬಗ್ಗೆ ಪತ್ರಿಕೆ ಕ್ಷಮೆ ಯಾಚಿಸುವಂತೆ ನಾನು ಕೇಳಿಕೊಂಡಿದ್ದೇನೆ ಎಂದು ರಾಗಿಣಿ ವಿವರಣೆ ನೀಡಿದ್ದಾರೆ.

ಮಾತು ಮುಂದುವರಿಸಿದ ರಾಗಿಣಿ, ಕನ್ನಡ ಚಿತ್ರರಂಗ ಸಂಘಟಿತವಾಗಿಲ್ಲ; ಆ ನಿಟ್ಟಿನಲ್ಲಿ ಮಲಯಾಳಂ ಚಿತ್ರರಂಗ ಉತ್ತಮ ಎಂದು ವರದಿ ಪ್ರಕಟವಾಗಿತ್ತು. ಆದರೆ ನಾನು ಹಾಗೆ ಹೇಳಿಲ್ಲ. ನಾನು ಕನ್ನಡ ಮತ್ತು ಕನ್ನಡಿಗರನ್ನು ಅಪಾರವಾಗಿ ಪ್ರೀತಿಸುತ್ತೇನೆ. ನಾನು ಕನ್ನಡ ಚಿತ್ರರಂಗಕ್ಕೆ ಸೇರಿದವಳು, ಕನ್ನಡ ಚಿತ್ರರಂಗ ನನಗೆ ಸೇರಿದುದಾಗಿದೆ ಎಂದು ಹೆಮ್ಮೆಯಿಂದ ನುಡಿದರು.

ಕನ್ನಡದಲ್ಲಿ ವೀರ ಮದಕರಿ, ಗೋಕುಲ, ಶಂಕರ್ ಐಪಿಎಸ್, ಹೋಳಿ, ಒಮ್ಮೊಮ್ಮೆ ಮುಂತಾದ ಚಿತ್ರಗಳಲ್ಲಿ ನಟಿಸಿರುವ ರಾಗಿಣಿಯ, ಮಲಯಾಳಂ ಚಿತ್ರ 'ಕಂದಹಾರ್' ಹಾಗೂ ಕನ್ನಡದ 'ನಾಯಕ' ಇದೇ ವಾರ (ಡಿಸೆಂಬರ್ 17) ತೆರೆಗೆ ಬರುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಾಗಿಣಿ ದ್ವಿವೇದಿ, ಕನ್ನಡ ಚಿತ್ರರಂಗ, ಮಲಯಾಳಂ, ಮೋಹನ್ಲಾಲ್