ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಗೋಣಿಕೊಪ್ಪ ಕಾಲೇಜಿನಲ್ಲಿ ಭಾರೀ 'ತೂಫಾನ್'! (Toofan | Yashas | Style Seenu | Nakshtra)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಕೊಡಗು ಜಿಲ್ಲೆಯ ಗೋಣಿಕೊಪ್ಪದ ಕಾಲೇಜಿನಲ್ಲಿ 'ತೂಫಾನ್' ಎದ್ದಿತ್ತು. ಗಾಬರಿಯಾಗಬೇಡಿ, ಇದು ಯಾವುದೇ ಸುಂಟರಗಾಳಿಯಲ್ಲ ಅಥವಾ ಯಾವುದೇ ಚಂಡಮಾರುತವಲ್ಲ, ಇನ್ನೂ ಯಾವುದೇ ಅನಾಹುತವೂ ಆಗಲಿಲ್ಲ! ಇದು 'ತೂಫಾನ್' ಚಿತ್ರದ ಶೂಟಿಂಗ್ ಸುಂಟರಗಾಳಿ ಅಷ್ಟೇ.

ಸ್ಟೈಲ್ ಸೀನು ನಿರ್ದೇಶನದ ಎಚ್.ಜಿ. ಗೌಡ ಪ್ರೊಡಕ್ಷನ್ಸ್‌ನ ಎಚ್. ಜಡೇಗೌಡ್ರು ನಿರ್ಮಿಸುತ್ತಿರುವ ತೂಫಾನ್ ಚಿತ್ರಕ್ಕೆ ಗೋಣಿಕೊಪ್ಪದ ಕಾವೇರಿ ಕಾಲೇಜಿನಲ್ಲಿ ಇತ್ತೀಚೆಗೆ ಚಿತ್ರೀಕರಣ ನಡೆಸಲಾಯಿತು.

ನಿರ್ದೇಶನದ ಜತೆ ಚಿತ್ರದ ಕಥೆ, ಚಿತ್ರಕಥೆ ಕೂಡ ಸ್ಟೈಲ್ ಸೀನು ಅವರದ್ದೇ. ಕಾಲೇಜಿನಲ್ಲಿ ನಡೆದ ಚಿತ್ರೀಕರಣದಲ್ಲಿ ಸಾಧುಕೋಕಿಲ, ಯಶಸ್, ನಕ್ಷತ್ರ ಮುಂತಾದವರು ಭಾಗವಹಿಸಿದ್ದರು.

ಶಿಶಿರ ಚಿತ್ರದಲ್ಲಿ ಗಮನ ಸೆಳೆದಿದ್ದ ಸುಂದರಾಂಗ ಯಶಸ್ ಇದರ ನಾಯಕ. ತಮಿಳಿನ ಆಮದು ಹುಡುಗಿ ನಕ್ಷತ್ರ ಇಲ್ಲಿ ನಾಯಕಿ.

ಎಲ್ವಿನ್ ಜೋಶ್ವಾ ಸಂಗೀತ ನೀಡಿರುವ ಚಿತ್ರದಲ್ಲಿ ರಮೇಶ್ ಭಟ್, ಪ್ರಮೀಳಾ ಜೋಷಾಯ್, ಶಿವರಾಮಣ್ಣ, ಮಂಗಳೂರು ಸುರೇಶ್, ಚಿತ್ರಾ ಶೆಣೈ ಮುಂತಾದವರು ನಟಿಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ತೂಫಾನ್, ಯಶಸ್, ಸ್ಟೈಲ್ ಸೀನು, ನಕ್ಷತ್ರ