ಕಿಚ್ಚ ಸುದೀಪ್ ಹಣದ ವಿಚಾರದಲ್ಲಿ ಉದಾರಿತನವನ್ನು ತೋರಿಸಿದ್ದಾರೆ. ಸುದೀಪ್ ನಾಯಕನಾಗಿ ನಟಿಸಿದ್ದ 'ಜಸ್ಟ್ ಮಾತ್ ಮಾತಲ್ಲಿ' ಚಿತ್ರದ ನಿರ್ಮಾಪಕ ಶಂಕರ್ ಗೌಡರು ಚಿತ್ರ ಸರಿಯಾಗಿ ಓಡದೆ ನಷ್ಟವನ್ನನುಭವಿಸಿದ್ದರು. ಈ ಹಿಂದೆಯೂ ಅವರಿಗೆ ಇಂತಹ ಪರಿಸ್ಥಿತಿ ಎದುರಾಗಿತ್ತು. ಆದರೆ ಅವರ ಪರಿಸ್ಥಿತಿಯನ್ನು ಅರಿತ ಸುದೀಪ್ ತನ್ನ ಉದಾರಿತನವನ್ನು ನಟನೆ ಮತ್ತು ನಿರ್ದೇಶನದ ಮೂಲಕ ತೋರಿಸಿಕೊಟ್ಟಿದ್ದಾರೆ.
ಸುದೀಪ್ ನಿರ್ದೇಶಿಸಿ, ನಾಯಕನಾಗಿ ನಟಿಸಿದ ತಮಿಳಿನ 'ಸಿಂಗಂ' ಚಿತ್ರದ ರಿಮೇಕ್ 'ಕೆಂಪೇಗೌಡ' ಚಿತ್ರದ ಯಶಸ್ಸಿನಿಂದ ಸುಮಾರು ಆರು ಕೋಟಿಯಷ್ಟು ಲಾಭ ಬಂದಿದೆ. ಅಂದರೆ ಚಿತ್ರದ ಐವತ್ತನೇ ಪ್ರದರ್ಶನ ದಿನ ಸಂಭ್ರಮಾಚರಣೆಯ ಅವಧಿಯಲ್ಲಿ ಇಷ್ಟೊಂದು ಲಾಭಬಂದಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಈಗ 'ಕೆಂಪೇಗೌಡ' ನೂರನೇ ದಿನದತ್ತ ಸಾಗುತ್ತಿದೆ. ಆದ್ದರಿಂದ ಆರು ಕೋಟಿಯನ್ನೂ ಮೀರಿಸುವ ಸಾಧ್ಯತೆಯೂ ಇದೆ.
'ಜಸ್ಟ್ ಮಾತ್ ಮಾತಲ್ಲಿ' ಚಿತ್ರದಿಂದ ಸಾಕಷ್ಟು ನಷ್ಟ ಅನುಭವಿಸಿದ್ದ ನಿರ್ಮಾಪಕ ಶಂಕರ್ ಗೌಡರಿಗೆ ಪುನಃ ಅವರದೇ ನಿರ್ಮಾನದಲ್ಲಿ ಲಾಭತರಿಸುವಂತ 'ಕೆಂಪೇಗೌಡ' ಚಿತ್ರವನ್ನು ನಿರ್ದೇಶಿಸಿ, ನಟಿಸುವ ಮೂಲಕ ಉದಾರತೆ ಮೆರೆದಿದ್ದರು ಸುದೀಪ್.
ಹಣಕ್ಕಾಗಿ ನಟರನ್ನು ಸತಾಯಿಸುವ ನಿರ್ಮಾಪಕರು ಹಾಗೂ ನಿರ್ಮಾಪಕರನ್ನು ಸತಾಯಿಸುವ ನಟರು ಇರುವ ಪರಿಸ್ಥಿತಿಯಲ್ಲಿ ಸುದೀಪ್ ಅವರ ಈ ರೀತಿಯ ಉದಾರಿ ಮನೋಭಾವದಿಂದ ಅವರ ಅಭಿಮಾನಿಗಳಿಗೆ ಇನ್ನಷ್ಟು ಸಂತೋಷವಾಗಿದೆ.