ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಉದಾರಿಯಾದ ದರ್ಶನ್ - ನಿರ್ದೇಶಕ ಪಟ್ಟಕ್ಕೆ ನಾರಾಯಣ್ (Darshan | Ram Narayan | Snehitaru | Vijaya Raghavendra | Tarun | Kannada film | Latest Movies in Kannada | Latest Kannada Movie News | Kannada Film Ne)
PR
ಏರಿದ ಏಣಿಯನ್ನು ಒದೆಯದ ವ್ಯಕ್ತಿ ದರ್ಶನ್ ಅನ್ನೋ ಮಾತು ಗಾಂಧಿನಗರದಲ್ಲಿ ಪ್ರಚಲಿತ. ಇದನ್ನು ಚಾಲೆಂಜಿಂಗ್ ಸ್ಟಾರ್ ಹೌದು ಅಂತ ಮತ್ತೊಮ್ಮೆ ಪ್ರೂವ್ ಮಾಡಿ ತೋರಿಸಿದ್ದಾರೆ. ಗೀತೆ ರಚನೆಕಾರರೊಬ್ಬರು ನಿರ್ದೇಶಕ ಪಟ್ಟಕ್ಕೆ ಏರುವಂತೆ ಮಾಡಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಈ ರೀತಿಯಾಗಿ ಧನ್ಯತಾ ಭಾವವನ್ನು ಮುಖದ ತುಂಬಾ ಹೊತ್ತು ಮಾಧ್ಯಮಗಳ ಮುಂದೆ ನಿಂತ ವ್ಯಕ್ತಿ ರಾಮ್ ನಾರಾಯಣ್. ಪರೋಪಕಾರಿ ಚಾಲೆಂಜಿಂಗ್ ಸ್ಟಾರ್‌ಗೆ ಧನ್ಯವಾದ ಹೇಳುತ್ತಲೇ ಮಾತು ಆರಂಭಿಸಿದವರು ತನ್ನ ಯೋಜನೆಗಳನ್ನು ಒಂದೊಂದಾಗಿಯೇ ಬಿಚ್ಚಿಟ್ಟರು.

ಕಳೆದ ಹಲವಾರು ವರ್ಷಗಳಿಂದ ಬಣ್ಣದ ಲೋಕದ ಬೀದಿಗಳಲ್ಲಿ ಅಲೆದಾಡಿ ಅನುಭವಿ ಎನಿಸಿಕೊಂಡು ಈಗ ನಿರ್ದೇಶಕನ ಕ್ಯಾಪ್ ತೊಡಲು ಮುಂದಾಗಿರುವುಕ್ಕೆ ಪ್ರಮುಖ ಕಾರಣ ದರ್ಶನ್. ಈ ಹಿಂದೆಯೂ ಕಾಲ್ ಶೀಟ್ ವಿಚಾರದಲ್ಲಿ ಉದಾರಿಯಾಗಿರುವ ಉದಾಹರಣೆ ದರ್ಶನ್‌ಗಿದೆ. ಉಳಿದಂತೆ ರಾಮ್ ನಾರಾಯಣ್ ಸಹಾಯಕ್ಕೆ ಬಂದಿರುವುದು ವಿಜಯ ರಾಘವೇಂದ್ರ, ತರುಣ್, ಸೃಜನ್ ಲೋಕೇಶ್. ಚಿತ್ರದ ಹೆಸರು 'ಸ್ನೇಹಿತರು'.

ಇದುವರೆಗೆ 40ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಭಾಷಣೆ ಹಾಗೂ 300ಕ್ಕೂ ಹೆಚ್ಚು ಹಾಡು ಬರೆದಿರುವ ರಾಮ್ ನಾರಾಯಣ್ ನಿರ್ದೇಶನದ ಮಲ್ಟಿ ಸ್ಟಾರ್ ಚಿತ್ರಕ್ಕೆ ಸೌಂದರ್ಯ ಜಗದೀಶ್ ನಿರ್ಮಾಪಕ. ಇವರು ಈ ಹಿಂದೆ ಮಸ್ತ್ ಮಜಾ ಮಾಡಿ ಅನ್ನೋ ಮಲ್ಟಿ ಸ್ಟಾರ್ ಚಿತ್ರ ನಿರ್ಮಿಸಿದ್ದವರು. ಅದೇ ಪ್ರಯೋಗವನ್ನು ಮತ್ತೆ ಮುಂದುವರಿಸಲು ನಿರ್ಧರಿಸಿದ್ದಾರೆ.

'ಸ್ನೇಹಿತರು' ಚಿತ್ರಕ್ಕೆ ಮಹಾಭಾರತವೇ ಸ್ಫೂರ್ತಿಯಂತೆ. ಅದೇ ಸಾಲಿನಲ್ಲಿ ಕಥೆ ಸಾಗುತ್ತದೆ. ವೆರಿ ಸಿಂಪಲ್ ಸ್ಟೋರಿ. ಆದರೆ ಅಲ್ಲಲ್ಲಿ ಸಾಕಷ್ಟು ತಿರುವುಗಳಿವೆ. ಥಿಯೇಟರಿಗೆ ಬರುವ ಪ್ರೇಕ್ಷಕನನ್ನು ಎರಡೂವರೆ ಗಂಟೆಗಳ ಕಾಲ ಸೀಟಿನ ತುದಿಗೆ ತರುವ ಭರವಸೆ ಬೇರೆ.

ಚಿತ್ರದಲ್ಲಿ ಒಟ್ಟು ಐವರು ನಾಯಕರು. ನಾಲ್ವರ ಆಯ್ಕೆ ಪಕ್ಕಾ ಆಗಿದೆ. ಇನ್ನೊಬ್ಬರು ಯಾರೆಂದು ನಿರ್ಧಾರವಾಗಬೇಕಿದೆ. ಇಷ್ಟೂ ಜನಕ್ಕೆ ನಾಯಕಿ ಒಬ್ಬಳೇ. ನಂಬರ್ ವನ್ ನಟಿ ರಮ್ಯಾ ಮತ್ತು ತ್ರಿಷಾ ಹೆಸರುಗಳು ಚಾಲ್ತಿಯಲ್ಲಿವೆ.

ವಿ. ಹರಿಕೃಷ್ಣ ಸಂಗೀತ, ಎಂ.ಆರ್. ಸೀನು ಕ್ಯಾಮರಾ ಕಣ್ಣು ಚಿತ್ರಕ್ಕಿದೆ. ಅಕ್ಟೋಬರ್ ತಿಂಗಳಲ್ಲಿ ಮುಹೂರ್ತ. ನಂತರ ಮೈಸೂರು ಮತ್ತು ಮಂಗಳೂರುಗಳಲ್ಲಿ ಶೂಟಿಂಗ್. ಹೀಗೆ ಎಲ್ಲವೂ ಅಂದುಕೊಂಡಂತೆ ನಡೆದರೆ ಆರ್.ಎನ್. ಜಯಗೋಪಾಲ್, ನಾಗೇಂದ್ರ ಪ್ರಸಾದ್, ಕೆ. ಕಲ್ಯಾಣ್, ಕವಿರಾಜ್ ಮುಂತಾದವರ ಸಾಲಿಗೆ ರಾಮ್ ನಾರಾಯಣ್ ಕೂಡ ಸೇರ್ಪಡೆಯಾಗುತ್ತಾರೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ