ಜೊತೆಗಾರ ಬರುತ್ತಿದ್ದಾನೆ
![](/img/cm/searchGlass_small.png)
ಚಿತ್ರ ಜೊತೆಗಾರ ನಿರ್ದೇಶಕರು: ಸಿಂಗುಮಣಿತಾರಾಂಗಣ: ಪ್ರೇಮ್, ರಮ್ಯ, ಲಕ್ಷಿ, ಆಶಿಶ್ ವಿದ್ಯಾರ್ಥಿಜೊತೆ ಜೊತೆಯಲಿ ಅನ್ನುತ್ತಿದ್ದ ಪ್ರೇಮ್ ಮತ್ತು ರಮ್ಯ ಜೋಡಿ ಈಗ ಜೊತೆಗಾರ ಚಿತ್ರದ ಮೂಲಕ ಮತ್ತೆ ಜೊತೆಯಾಗುತ್ತಿದ್ದಾರೆ. ಪ್ರೀತಿ ಆಕೆ ಭೂಮಿ ಮೇಲಿದೆ ಚಿತ್ರದ ನಂತರ ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್‌ರವರ ಮತ್ತೊಂದು ಚಿತ್ರ ಇದಾಗಿದೆ. ಪ್ರೇಮ್ ನಿರ್ದೇಶನದ ಚಿತ್ರ ಪ್ರೀತಿ ಆಕೆ ಭೂಮಿ ಮೇಲಿದೆ ಅಂದುಕೊಂಡಷ್ಟು ಯಶಸ್ಸನ್ನು ಕಾಣಲಿಲ್ಲ. ಜೊತೆಗಾರ ಚಿತ್ರ ಕೂಡ ಬಾರಿ ಅದ್ದೂರಿಯಾಗಿ ಮಾಡಿದ್ದಾರಂತೆ. ಈ ಚಿತ್ರದಲ್ಲಿ ನಾಯಕನಾಗಿ ಪ್ರೇಮ್ ಹಾಗೂ ನಾಯಕಿಯಾಗಿ ರಮ್ಯ ಅಭಿನಯಿಸುತ್ತಿದ್ದಾರೆ. ಪ್ರೀತಿ ಆಕೆ ಭೂಮಿ ಮೇಲಿದೆ ಚಿತ್ರದಲ್ಲಿ 5 ಕೋಟಿ ಹಣ ಕಳೆದುಕೊಂಡ ಅಶ್ವಿನಿ ರಾಮ್ ಪ್ರಸಾದ್ ಮತ್ತೆ ಜೊತೆಗಾರ ಚಿತ್ರಕ್ಕೆ ಹಣ ಸುರಿದಿದ್ದಾರಂತೆ.ಈ ಚಿತ್ರದ ನಿರ್ದೇಶನವನ್ನು ತೆಲುಗಿನ ನಿರ್ದೇಶಕರಾದ ಸಿಂಗುಮಣಿ ಮಾಡಿದ್ದಾರೆ. ನಂಜುಂಡ ಚಿತ್ರಕತೆ, ಸಂಭಾಷಣೆ ಬರೆದಿದ್ದಾರೆ. ಜಯಂತ್ ಕಾಯ್ಕಿಣಿ, ಕವಿರಾಜ್ ಹಾಗೂ ಕನ್ನಡ ಶಿವು ಹಾಡುಗಳನ್ನು ಬರೆದಿದ್ದಾರೆ. ಚಿತ್ರದಲ್ಲಿ ಒಟ್ಟು ಆರು ಹಾಡುಗಳಿವೆ ಅಂತೆ. ಸೋನು ನಿಗಮ್, ಉದಿತ್ ನಾರಾಯಣ್, ಶ್ರೇಯಾ ಘೋಶಾಲ್ ಮುಂತಾದವರು ಹಾಡಿದ್ದಾರೆ.ಚಿತ್ರದಲ್ಲಿ ರಮ್ಯ ಅವರದ್ದು ಒಳ್ಳೆ ಮಗಳ ಪಾತ್ರ. ಅವಳಿಗೆ ಅಹಂಕಾರವಿರುವುದಿಲ್ಲ. ಎಲ್ಲರ ಜೊತೆ ತರಲೆ ಮಾಡಿಕೊಂಡು ಇರುವ ಪಾತ್ರ ಆಕೆಯದಂತೆ. ಚಿತ್ರದಲ್ಲಿ ಹಾಸ್ಯ, ರೊಮ್ಯನ್ಸ್ ಎಲ್ಲವೂ ಚಿತ್ರದಲ್ಲಿದೆ.