ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸಿನಿಮಾ ಮುನ್ನೋಟ » ನೈಜ ಘಟನೆ ಆಧರಿತ 'ಪೊಲೀಸ್ ನಂ.1' ಬೆಳ್ಳಿತೆರೆಗೆ (No 1 Police | N Ravi | Thriller Manju | Krupakar)
ಸಿನಿಮಾ ಮುನ್ನೋಟ
Bookmark and Share Feedback Print
 
ಶ್ರೀ ಶಿವ ಎಂಟರ್‌ಪ್ರೈಸಸ್‌ರವರ ಬಾಲರಾಜ್ ಆನೇಕಲ್ ಹಾಗೂ ಬಿ.ಪಿ. ಬದರಗೆರೆ ರಮೇಶ್ ಆನೇಕಲ್ ಅರ್ಪಿಸುವ ಮಹೇಶ್ ಆರ್. ಕೊಠಾರಿ ಆಶೀರ್ವಾದದಿಂದ ಹೊರಬರುತ್ತಿರುವ 'ಪೊಲೀಸ್ ನಂ.1' ಚಿತ್ರ ನಾಳೆ (ಜನವರಿ 7, ಶುಕ್ರವಾರ) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

'ಮೀಟರ್ ಇದ್ರೆ ಬಾರೋ' ಟ್ಯಾಗ್ ಲೈನ್ ಅನ್ನು ಹೊಂದಿರುವ, ಬೆಂಗಳೂರು ಭೂಗತ ಲೋಕವನ್ನು ತಲ್ಲಣಗೊಳಿಸಿದ ಶ್ರುತಿ ಆಸಿಡ್ ಘಟನೆ, ದಂಡುಪಾಳ್ಯದ ಕಿಡ್ನಿ ಪ್ರಕರಣ ಮುಂತಾದ ನೈಜ ಘಟನೆಗಳನ್ನು ಆಧರಿಸಿ ತಯಾರಿಸಿರುವ ಚಿತ್ರ ಇದು. ಈ ಪ್ರಮುಖ ಪಾತ್ರದಲ್ಲಿ ಥ್ರಿಲ್ಲರ್ ಮಂಜು ನಟಿಸಿದ್ದಾರೆ.

ಕಥೆ, ಚಿತ್ರಕಥೆ, ಸಾಹಸ, ನಿರ್ದೇಶನದ ಜವಾಬ್ದಾರಿಯನ್ನು ಥ್ರಿಲ್ಲರ್ ಮಂಜು ಅವರೇ ನಿಭಾಯಿಸಿದ್ದಾರೆ. ಚಿತ್ರದ ನಿರ್ಮಾಪಕರು ಎನ್. ರವಿ, ಸಂಗೀತ ಕೃಪಾಕರ್, ಮನೋಹರ್ ಛಾಯಾಗ್ರಹಣ ಚಿತ್ರಕ್ಕಿದೆ.

ಪ್ರಚಾರವೇ ಕಾಣದ ಈ ಚಿತ್ರದಲ್ಲಿ ಅಭಿಜಿತ್ ಕೂಡ ನಟಿಸಿದ್ದಾರೆ. ಚಿತ್ರೀಕರಣ ನಡೆದದ್ದು ಗೊತ್ತಾಗಲಿಲ್ಲ, ಮುಗಿದದ್ದು ಗೊತ್ತಾಗಲಿಲ್ಲ. ಬಿಡುಗಡೆ ಹೊತ್ತಿಗೆ ಕೊಂಚ ಸುದ್ದಿಯಾಗಿದೆ. ಚಿತ್ರಮಂದಿರದಲ್ಲಿ ಏನಾದರೂ ಸದ್ದು ಮಾಡುವ ಸಾಧ್ಯತೆಗಳೂ ಕಡಿಮೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನಂ1 ಪೊಲೀಸ್, ಎನ್ ರವಿ, ಥ್ರಿಲ್ಲರ್ ಮಂಜು, ಕೃಪಾಕರ್