ಆದರೆ ಯಾವತ್ತು 'ಚೆಲ್ಲಾಟ' ಚಿತ್ರದಲ್ಲಿ ಗಣೇಶ್ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿ ಆ ಚಿತ್ರ ಶತದಿನ ಆಚರಿಸಿತ್ತೋ, ಆಗ ಗಾಂಧಿನಗರ ಗಣೇಶ್ ಪ್ರತಿಭೆಯನ್ನು ಗುರುತಿಸಿತ್ತು. ಫಲವಾಗಿ ಗಣೇಶ್ ಅವರ ಊರಿನವರೇ ಆದ ಎ.ಕೃಷ್ಣಪ್ಪ ತಮ್ಮ ಮುಂಗಾರು ಮಳೆ ಚಿತ್ರದಲ್ಲಿ ಅವಕಾಶ ನೀಡಿದರು. ಆ ಚಿತ್ರ ಏನಾಯಿತೆಂಬುದರ ಬಗ್ಗೆ ಇಲ್ಲಿ ಹೇಳಬೇಕಾಗಿಲ್ಲ. ನಿಜಕ್ಕೂ ಅದು ಗಣೇಶ್ ಲೈಫ್‌ನ ಟರ್ನಿಂಗ್ ಪಾಯಿಂಟ್. ನಂತರ ಗಣೇಶ್ ನಟಿಸಿದ ಹುಡುಗಾಟ, ಚೆಲುವಿನ ಚಿತ್ತಾರ, ಕೃಷ್ಣ, ಗಾಳಿಪಟಗಳೆಲ್ಲವೂ ಶತದಿನವನ್ನು ಆಚರಿಸಿದ್ದು, ಈಗ ಅರಮನೆ ಚಿತ್ರವೂ ಶತದಿನಗಳತ್ತ ದಾಪುಗಾಲು ಹಾಕುತ್ತಿದೆ. ಒಬ್ಬ ನಟ ಒಂದೂವರೆ ವರ್ಷದಲ್ಲಿ ನಟಿಸಿದ ಚಿತ್ರಗಳೆಲ್ಲ ಶತದಿನ ಆಚರಿಸುವುದೆಂದರೆ ಅದು ಸಾಮಾನ್ಯದ ಮಾತಲ್ಲ. ಇಂದು ಚಿತ್ರರಂಗ ಗಣೇಶ್‌ಗೆ ಗೋಲ್ಡನ್ಸ್ಟಾರ್ ಎಂಬ ಪಟ್ಟ ನೀಡಿದೆ. ಆದರೆ ಹಿಂದೊಮ್ಮೆ ಮೇಕಪ್ ಮಾಡಿ ಶೂಟಿಂಗ್‌ಗೆ ರೆಡಿಯಾಗಿದ್ದ ಗಣೇಶ್‌ನನ್ನು ಸೆಟ್‌ನಿಂದ ಹಿಂದೆ ಕಳುಹಿಸಿದ್ದು, ಇದೇ ಗಾಂಧಿನಗರ.ಈ ಮಟ್ಟಕ್ಕೆ ಬೆಳೆದರೂ ಗಣೇಶ್‌ಗೆ ಯಾವುದೇ ಅಹಂ ಬಂದಿಲ್ಲ. ಇಂದಿಗೂ ಮಗುವಿನಂತಹ ಮುಗ್ಧ ಮನಸ್ಸು. ಹಿರಿಯರಲ್ಲಿ ಗೌರವ, ಕಿರಿಯರಲ್ಲಿ ಸ್ನೇಹದಿಂದ ವರ್ತಿಸುವ ಅವರ ಗುಣ ನಿಜಕ್ಕೂ ಮೆಚ್ಚುವಂತಹುದು.ಸದ್ಯ ಈ ಬೊಂಬಾಟ್ ಹುಡುಗನ 'ಬೊಂಬಾಟ್' ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಟಸಂಗಮಟ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಇವರ ಮತ್ತೊಂದು ಚಿತ್ರ 'ಸರ್ಕಸ್' ಆರಂಭವಾಗಲಿದೆ.ಏನೇ ಆಗಲಿ ಈ ಹುಡುಗ ಚಿತ್ರರಂಗದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಆಶಿಸುವುದರ ಜೊತೆಗೆ, ಹ್ಯಾಪಿ ಬರ್ತ್‌ಡೇ ಹೇಳೋಣ.