ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ತಾರಾ ಪರಿಚಯ » ಸ್ಯಾಂಡಲ್‌ವುಡ್‌ನ ಡಾನ್ ಆರ್ಯಭಟನ್
ತಾರಾ ಪರಿಚಯ
Feedback Print Bookmark and Share
 
MOKSHA
ಸಂದರ್ಶನ: ನ್ಯೂಸ್ ರೂಂ
ಕನ್ನಡ ಚಿತ್ರರಂಗದಲ್ಲಿ ಈಗ ಸಮರ್ಥರಾದ ಖಳನಾಯಕರ ಕೊರತೆ ಇದೆ. ಇದ್ದವರನ್ನೂ ನಮ್ಮ ನಿರ್ದೇಶಕರು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಬದಲಾಗಿ ಬೇರೆ ಭಾಷೆಯಿಂದ ಮುಖೇಶ್ ರಿಷಿ, ರಾಹುಲ್ ದೇವ್‌‌ರಂತವರನ್ನು ಲಕ್ಷಗಟ್ಟಲೆ ಕೊಟ್ಟು ಆಹ್ವಾನಿಸುತ್ತಾರೆ. ಇಂತಹ ಸಂದರ್ಭದಲ್ಲಿ ಕನ್ನಡದಲ್ಲಿ ಮತೊಬ್ಬ ಖಡಕ್ ಖಳನಾಯಕ ಮೂಡುತ್ತಿದ್ದಾರೆ.

ಅವರು ಆರ್ಯಭಟನ್. ನೋಡಲು ರಾಕೇಶ್ ರೋಶನ್‌ರಂತೆ ಇರುವ ಇವರು ಈಗಾಗಲೇ ಲೂಸ್ ಮಾದ ಸೇರಿದಂತೆ ಅನೇಕ ಚಿತ್ರದಲ್ಲಿ ನಟಿಸಿದ್ದಾರೆ. ಇವರಿಗೆ ಈಗ 'ಮಾದೇಶ' ಚಿತ್ರದಲ್ಲಿ ಪ್ರಮುಖ ಪಾತ್ರವಿದೆ. ಅವರನ್ನು ಇತ್ತೀಚೆಗೆ ಮಾತಿಗೆಳೆದಾಗ..

ಚಿತ್ರ ರಂಗ ಪ್ರವೇಶಿಸಿದ ಬಗೆ?

ಚಿಕ್ಕಂದಿನಿಂದಲೂ ಸಿನಿಮಾ ಎಂದರೆ ಸ್ವಲ್ಪ ಹುಚ್ಚು. ಕೆಲಸಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದೆ. ಬಳಿಕ ಕೆಲಸಕ್ಕೆ ಹೆಚ್ಚು ಒತ್ತು ನೀಡಿದ್ದರಿಂದ ಸಿನಿಮಾ ಅಲ್ಲಿಗೆ ನಿಂತಿತು. ಈಗ ಉದ್ಯಮವನ್ನು ನನ್ನ ಹೆಂಡತಿ ನೋಡಿ ಕೊಳ್ಳುತ್ತಿದ್ದಾಳೆ. ಮಗ ವಿದೇಶದಲ್ಲಿದ್ದಾನೆ. ಮತ್ತೆ ಯಾಕೆ ಚಿತ್ರರಂಗಕ್ಕೆ ಪ್ರವೇಶಿಸಬಾರದು ಎನ್ನಿಸಿತು. ಇದಕ್ಕೆ ಸ್ನೇಹಿತರೂ ಕೂಡ ಬೆಂಬಲ ಸೂಚಿಸಿದರು. ಇದರಿಂದ ಮತ್ತೆ ಬಣ್ಣ ಹಚ್ಚಿದೆ.

ಖಳನಾಯಕನ ಪಾತ್ರ ಆರಿಸಲು ಕಾರಣ?

ಮುಖ್ಯವಾಗಿ ಕನ್ನಡ ಚಿತ್ರರಂಗದಲ್ಲಿ ಖಳನಾಯಕನ ಕೊರತೆಯಿದೆ. ವಜ್ರಮುನಿ, ಸುಧೀರ್ ಬಳಿಕ ಖಳನಾಯಕನ ಪಾತ್ರಕ್ಕೊಬ್ಬ ಸಮರ್ಥ ನಟರು ಕನ್ನಡದಲ್ಲಿರಲಿಲ್ಲ. ಅದಕ್ಕಾಗಿ ಕನ್ನಡ ಚಿತ್ರರಂಗ ಪರಭಾಷಾ ನಾಯಕರನ್ನು ಕರೆಸಿಕೊಳ್ಳುತ್ತಿದೆ. ಸಮುದ್ರ ಇಲ್ಲೆ ಇರುವಾಗ ಉಪ್ಪಿಗಾಗಿ ಬೇರೆ ಕಡೆ ಹುಡುಕುವ ಅಗತ್ಯವಿಲ್ಲ.

ಅಲ್ಲದೆ, ನನ್ನ ಮುಖ ಖಳನಾಯಕನನ್ನು ಹೋಲುವುದರಿಂದ ಸಹಜವಾಗಿಯೇ ನಾನು ಖಳನಾಯಕನ ಪಾತ್ರವನ್ನು ಮಾಡುತ್ತೇನೆ. ಈ ಫೇಸೆಕಟ್ ಇತರ ಪಾತ್ರಗಳಿಗೆ ಸೂಟ್ ಆಗುವುದಿಲ್ಲ ಎಂದು ಹೇಳಿ ಗಹಗಹಿಸಿ ನಕ್ಕರು.
MOKSHA


ಖಳನಾಯಕನಿಗೆ ತಮ್ಮ ಸಿದ್ಧತೆ?

ನಟನೆ ಅಂದ ಮೇಲೆ ಅದಕ್ಕೆ ತಕ್ಕುದಾದ ನಿರ್ವಹಣೆ ಅಗತ್ಯ. ಇದುವರೆಗೆ ಯಾವುದೇ ಅಭಿನಯ ತರಬೇತಿ ಮಾಡಿದವನಲ್ಲ. ನನ್ನಷ್ಟಕ್ಕೆ ಮನೆಯಲ್ಲಿ ಕೂತು ಹಿರಿಯ ಖಳನಾಯಕರ ಚಿತ್ರಗಳನ್ನು ನೋಡಿ ಅವರ ಅಭಿನಯವನ್ನು ಅಭ್ಯಾಸ ಮಾಡಿಕೊಳ್ಳುತ್ತಿದೆ. ಆದರೆ ಅದೇ ತರಹ ಅನುಕರಣೆ ಮಾಡುತ್ತಿಲ್ಲ. ದಿನಾ ಜಿಮ್ ಹೋಗ್ತೇನೆ. ನನ್ನ ಹೆಂಡತಿ ಬಳಸುವ ಮೇಕಪ್‌ಗಿಂತ ಎರಡು ಪಟ್ಟು ಹೆಚ್ಚು ನಾನು ಬಳಸುತ್ತಿದ್ದೇನೆ.

ಮಾಡಿರುವ ಚಿತ್ರಗಳ ಬಗ್ಗೆ?

ಇದುವರೆಗೆ ಮಿಂಚಿನ ಓಟ, ವಾರಸ್ದಾರ, ನಂದ ಲವ್ಸ್ ನಂದಿತಾ ಸೇರಿದಂತೆ ಸುಮಾರು 12 ಚಿತ್ರಗಳಲ್ಲಿ ಖಳನಾಯಕನ ಪಾತ್ರ ಮಾಡಿದ್ದೇನೆ. ಪೋಷಕ ಪಾತ್ರವನ್ನು ಮಾಡಿದ್ದೇನೆ.

ನಟನೆಗೆ ಅವಕಾಶ ಮಾಡಿಕೊಟ್ಟ ಚಿತ್ರ ಮಾದೇಶ. ಈ ಬಗ್ಗೆ ಸ್ವತಃ ಶಿವಣ್ಣನವರೇ ತುಂಬ ಇಂಪ್ರೆಸ್ ಆಗಿದ್ದಾರೆ. ಮಾದೇಶದಲ್ಲಿ ನನ್ನ ಮೊದಲ ಅಭಿನಯಕ್ಕೆ ಮಾರು ಹೋಗಿರುವ ನಿರ್ದೇಶಕ ರವಿ ಶ್ರೀವಾಸ್ತವ್, ಚಿತ್ರ ರೀಲಿಸ್ ಆದ ಬಳಿಕ ನಾಲ್ಕು ದಿನಗಳ ಕಾಲ ಚಿತ್ರಮಂದಿರದತ್ತ ಸುಳಿಯದಂತೆ ಎಚ್ಚರಿಕೆ ನೀಡಿದ್ದಾರೆ. ಈ ಚಿತ್ರದ ಬಗ್ಗೆ ಅಪಾರ ನೀರೀಕ್ಷೆ ಇದೆ. ಅಲ್ಲದೆ, ರಕ್ತಾಕ್ಷ, ಪರಮೇಶ ಪಾನಾವಾಲಾ, ನನ್ನುಸಿರೇ ಚಿತ್ರಗಳಲ್ಲಿಯೂ ಗುರುತಿಸುವಂತಹ ಪಾತ್ರ ದೊರೆತಿದೆ.

MOKSHA
ಮುಂದಿನ ಗುರಿ?
ಸಿನಿಮಾದಲ್ಲಿಯೇ ಮುಂದುವರೆಯಬೇಕೆನ್ನುವ ಹಂಬಲ ನನಗಿದೆ. ಅದಕ್ಕಾಗಿ ಸಾಕಷ್ಟು ತರಬೇತಿ ಪಡೆಯುತ್ತಿದ್ದೇನೆ. ಅವಕಾಶ ಸಿಕ್ಕರೆ ಪರಭಾಷಾ ಚಿತ್ರಗಳಲ್ಲಿಯೂ ಅಭಿನಯಿಸುತ್ತೇನೆ. ಕನ್ನಡ ಚಿತ್ರರಂಗದಲ್ಲಿ ಮೇರು ಖಳನಾಯಕನಾಗಿ ಗುರುತಿಸಿಕೊಳ್ಳುವ ಹಂಬಲ ನನಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಆರ್ಯಭಟನ್, ಲೂಸ್ ಮಾದ, ಮಿಂಚಿನ ಓಟ, ವಾರಸ್ದಾರ, ನಂದ ಲವ್ಸ್ ನಂದಿತಾ, ಖಳನಾಯಕ