ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ತಾರಾ ಪರಿಚಯ » ಐಟಂ ಡ್ಯಾನ್ಸ್ ಬ್ಯಾಡ ಕಣ್ರೀ ಅಂತಾರೆ ರಮ್ಯಾ
ತಾರಾ ಪರಿಚಯ
Feedback Print Bookmark and Share
 
ನಟಿ ರಮ್ಯಾ ಈಗ ಮತ್ತೊಂದು ಕಂಡೀಷನ್ ಹಾಕಿದ್ದಾರೆ. ಯಾವುದೇ ಚಿತ್ರದಲ್ಲಿ ಐಟಂ ಹಾಡುಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ರಮ್ಯಾ ಹೇಳಿದ್ದಾರೆ. ಈ ಹಿಂದೆ ಇವರು ಮಳೆಯಲ್ಲಿ ಹಾಗೂ ಲೇಟ್ ನೈಟ್ ಶೂಟಿಂಗ್ನಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳುವ ಮೂಲಕ ಸುದ್ದಿಯಾಗಿದ್ದರು.

ಇತ್ತೀಚೆಗೆ ರಮ್ಯಾಗೆ ತಮಿಳಿನ ವಿಲ್ಲು ಚಿತ್ರದಲ್ಲಿ ನಾಯಕ ವಿಜಯ್ ಜೊತೆ ಕುಣಿಯುವ ಅವಕಾಶ ಬಂದಿತ್ತಂತೆ. ಆದರೆ ತಾನು ಐಟಂ ಹಾಡಿನಲ್ಲಿ ಕುಣಿಯುವುದಿಲ್ಲ ಎಂದು ನೇರವಾಗಿ ಹೇಳಿದ್ದಾರಂತೆ.

"ಐಟಂ ಹಾಡಿನಲ್ಲಿ ಕುಣಿದರೆ ಕೈ ತುಂಬಾ ಸಂಭಾವನೆ ಕೊಡುತ್ತೇವೆ ಎಂದು ಹೇಳಿದ್ದರು. ತಮಿಳಿನಲ್ಲಿ ವಿಜಯ್ ಸೂಪರ್ಸ್ಟಾರ್. ಅವರ ಜೊತೆ ನಟಿಸಬೇಕು ಎಂದು ಎಲ್ಲ ನಾಯಕಿಯರು ಆಸೆ ಪಡುತ್ತಾರೆ. ಆದರೆ ನನಗೆ ಬೇರೆ ನಟಿಯರಂತೆ ಐಟಂ ಡ್ಯಾನ್ಸ್‌ನಲ್ಲಿ ಕುಣಿದು ಹೆಸರು ಮಾಡಬೇಕು ಎಂಬ ಆಸೆ ಇಲ್ಲ. ಈ ಕಾರಣಕ್ಕಾಗಿಯೇ ಈ ಅವಕಾಶವನ್ನು ಕೈ ಬಿಟ್ಟೆ" ಎನ್ನುತ್ತಾರೆ ರಮ್ಯಾ.

ಅವರು ನಟಿಸಿದ ತಮಿಳು ಸಿನಿಮಾಗಳ ಹಾಡುಗಳನ್ನು ನೋಡಿದರೆ ಇದು ನಿಜವಾಗಿಯೂ ನಿಜನಾ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಇರಲಿ ಬಿಡಿ.

ಅದಲ್ಲದೆ, ರಮ್ಯಾ ಸಿಕ್ಕ ಸಿಕ್ಕ ಚಿತ್ರಗಳನ್ನು ಒಪ್ಪಿಕೊಳ್ಳುವುದಿಲ್ಲವಂತೆ. ವರ್ಷಕ್ಕೆ ಒಂದೆರಡು ಚಿತ್ರಗಳಲ್ಲಿ ಮಾತ್ರ ನಟಿಸುತ್ತಾರಂತೆ. ಇವರು ಅಷ್ಟು ಸುಲಭದಲ್ಲಿ ಯಾವುದೇ ಕಥೆಯನ್ನು ಓಕೆ ಮಾಡುವುದಿಲ್ಲ. "ಒಬ್ಬ ಸ್ಟಾರ್ ನಟಿಗೆ ಒಪ್ಪುವ ಕಥೆ ನನಗೆ ಬೇಕಾಗಿಲ್ಲ. ಬದಲಾಗಿ ಸಾಮಾನ್ಯ ಪ್ರೇಕ್ಷಕರೂ ಇಷ್ಟಪಡುವ ಕಥೆಯಲ್ಲಿ ನಟಿಸಲು ಒಪ್ಪುತ್ತೇನೆ" ಎಂದು ತಮ್ಮ ಕಥೆ ಆಯ್ಕೆಯ ಬಗೆಯನ್ನು ಹೇಳುತ್ತಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಮ್ಯಾ, ಐಟಂ ಡ್ಯಾನ್ಸ್, ತಮಿಳು, ವಿಜಯ್