ಬಜೆಟ್ ಮಂಡಿಸುವುದು ಕೆಲ ಸಚಿವರಿಗೆ ತಲೆನೋವಾಗಿ ಪರಿಣಮಿಸುತ್ತದೆ. ಬಜೆಟ್ ಪೇಪರ್‌ಗಳಲ್ಲಿ ದಾಖಲಾಗಿರುವ ಅಂಕಿ ಅಂಶಗಳ ಬಗ್ಗೆ ವರದಿ ನೀಡುವಲ್ಲಿ ಕೆಲ ಬಾರಿ ಎಡುವಿರುವುದನ್ನು ಕಾಣುತ್ತೇವೆ.
ಆದರೆ, ಮಮತಾ ದೀದೀಯ ಖದರ್ ಮುಂದೆ ಇತರರು ಗೌಣವಾಗಿ ಬಿಡುತ್ತಾರೆ. ಬಜೆಟ್ ಮಂಡನೆ ಸಂದರ್ಭದಲ್ಲಿ ಹಿಂದಿ ಮತ್ತು ಉರ್ದು ಭಾಷೆಯ ಶಾಯರಿಗಳನ್ನು ಬಳಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಬಜೆಟ್ ಮಂಡನೆ ಸಂದರ್ಭದಲ್ಲಿ ವಿರೋಧ ಪಕ್ಷಗಳ ಸದಸ್ಯರ ಪ್ರತಿಭಟನೆಗೆ ಹಿಂದಿ ಭಾಷೆಯಲ್ಲಿ ಉತ್ತರಿಸಿದ ಬ್ಯಾನರ್ಜಿ, ಮೂರನೇ ಬಾರಿಗೆ ಬಜೆಟ್ ಮಂಡನೆ ಸಂದರ್ಭದಲ್ಲಿ ಆತ್ಮವಿಶ್ವಾಸದ ಪ್ರತೀಕದಂತೆ ಕಂಡು ಬಂದರು.
ಹಮ್ ಆಹಾ ಭಿ ಬರ್ತೆ ಹೈ ತೋ ಹೋ ಜಾತೇ ಹೈ ಬದ್ನಾಮ್, ಅಗರ್ ವೋ ಕತ್ಲ್ ಭೀ ಕರ್ತೆ ಹೈ ತೋ ಚರ್ಚಾ ನಹೀ ಹೋತಾ ಎನ್ನುವ ಶಾಯರಿಯನ್ನು ಉಚ್ಚರಿಸಿ ಸಂಸತ್ತಿನಲ್ಲಿ ತಮ್ಮ ಭಾಷಾ ಜಾಣ್ಮೆಯನ್ನು ಮೆರೆದರು. ರೈಲ್ವೆ ಇಲಾಖೆಯ ಉದ್ಯೋಗಿಗಳು ಕಷ್ಟಪಟ್ಟು ಉತ್ತಮ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ದೇಶದ ಯಾವುದೇ ಮೂಲೆಯಲ್ಲಿ ಅಪಘಾತವಾದಲ್ಲಿ ಇಡೀ ರೈಲ್ವೆ ಇಲಾಖೆ ಉತ್ತಮ ಕೆಲಸ ಮಾಡುತ್ತಿಲ್ಲ ಎನ್ನುವ ಆಪಾದನೆ ಮಾಡುವುದು ಸೂಕ್ತವಲ್ಲ ಎಂದು ತಿಳಿಸಿದ್ದಾರೆ.
ರೈಲ್ವೆ ಬಜೆಟ್ ಪೇಪರ್‌ಗಳತ್ತ ಒಂದು ಬಾರಿ ಗಮನಹರಿಸುತ್ತಾ ಮತ್ತೊಂದೆಡೆ ವಿರೋಧಿಸುವವರಿಗೆ ತಾಳ್ಮೆಯಿಂದ ಆಲಿಸುವಂತೆ ಸಚಿವೆ ಮಮತಾ, ಕೋಪದಿಂದ ತರಾಟೆಗೆ ತೆಗೆದುಕೊಂಡ ಘಟನೆಗಳು ಮರುಕಳಿಸಿದವು.