ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 2015ರ ವೇಳೆಗೆ ಜಾಗತಿಕ ಮೊಬೈಲ್ ದರಗಳಲ್ಲಿ ಭಾರಿ ಕುಸಿತ (Global mobile prices | Fall | Mobile phones | Lower-middle income countries)
PTI
ಮೊಬೈಲ್ ತಯಾರಿಕೆ ಕಂಪೆನಿಗಳ ಸ್ಪರ್ಧೆಯಲ್ಲಿ ಭಾರಿ ಪೈಪೋಟಿ ಹಾಗೂ ಕಡಿಮೆ-ಮಧ್ಯಮ ಆದಾಯವಿರುವ ದೇಶಗಳತ್ತ ಮೊಬೈಲ್ ಕಂಪೆನಿಗಳು ಗಮನಹರಿಸಿದ್ದರಿಂದ, ಮುಂಬರುವ 2015ರ ವೇಳೆಗೆ ಮೊಬೈಲ್ ದರಗಳಲ್ಲಿ ಶೇ.70ರಷ್ಟು ಕಡಿತವಾಗಲಿದೆ ಎಂದು ಅಧ್ಯಯನ ಸಂಸ್ಥೆಯೊಂದು ಪ್ರಕಟಿಸಿದೆ.

ಮುಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ, ಜಾಗತಿಕ ಮೊಬೈಲ್ ದರಗಳಲ್ಲಿ 100 ಡಾಲರ್‌ಗಳಷ್ಟು ಇಳಿಕೆಯಾಗುವ ನಿರೀಕ್ಷೆಗಳಿವೆ ಎಂದು ಅಧ್ಯಯನ ವರದಿಯೊಂದು ಸಮೀಕ್ಷೆಯಲ್ಲಿ ಬಹಿರಂಗಪಡಿಸಿದೆ.

ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಕಡಿಮೆ-ಮಧ್ಯಮ ವರ್ಗದ (ಎಲ್‌ಎಂಐ) ಆದಾಯವಿರುವ ಗ್ರಾಹಕರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದರಿಂದ, ಮೊಬೈಲ್ ಕಂಪೆನಿಗಳು ದರ ಇಳಿಕೆ ಘೋಷಿಸುವುದು ಅನಿವಾರ್ಯವಾಗಲಿದೆ ಎಂದು ವರದಿಯಲ್ಲಿ ಪ್ರಕಟಿಸಲಾಗಿದೆ.

ಇಂತಹ ರಾಷ್ಟ್ರಗಳ ಗ್ರಾಹಕರನ್ನು ಸೆಳೆಯಲು, ಮೊಬೈಲ್ ತಯಾರಿಕೆ ಕಂಪೆನಿಗಳು ಭಾರಿ ಪೈಪೋಟಿಯ ಮಧ್ಯೆಯು ದರ ಕಡಿತಗೊಳಿಸುವ ಸಾಧ್ಯತೆಗಳಿವೆ ಎಂದು ನಾಲೇಜ್ ಪ್ರೋಸೆಸ್ ಔಟ್‌ಸೋರ್ಸಿಂಗ್ ಸಂಸ್ಥೆ ಇವ್ಯಾಲುವ್‌ಸರ್ವ್ ವರದಿಯಲ್ಲಿ ಬಹಿರಂಗಪಡಿಸಿದೆ.

ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಾದ ಭಾರತ ಮತ್ತು ಚೀನಾ ಗರಿಷ್ಠ ಜನಸಂಖ್ಯೆಯನ್ನು ಹೊಂದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಡಿಮೆ-ಮಧ್ಯಮ ವರ್ಗದ ಆದಾಯವಿರುವ ಜನಸಂಖ್ಯೆಯನ್ನು ಹೊಂದಿದೆ ಎಂದು ಸಮೀಕ್ಷಾ ವರದಿಯಲ್ಲಿ ತಿಳಿಸಿದೆ.
ಇವನ್ನೂ ಓದಿ