ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಭಾರತದ ಮೊಬೈಲ್ ಗ್ರಾಹಕರ ಸಂಖ್ಯೆ 791 ಮಿಲಿಯನ್ (Mobile subscribers | TRAI | Vodafone | Reliance Communications | Bharti Airtel)
ಭಾರತದ ಮೊಬೈಲ್ ಗ್ರಾಹಕರ ಸಂಖ್ಯೆ 791 ಮಿಲಿಯನ್
ನವದೆಹಲಿ, ಶುಕ್ರವಾರ, 8 ಏಪ್ರಿಲ್ 2011( 11:50 IST )
PTI
ಕಳೆದ ಮಾರ್ಚ್ ತಿಂಗಳಾಂದ್ಯಕ್ಕೆ 20.2 ಮಿಲಿಯನ್ ಗ್ರಾಹಕರ್ ಸೇರ್ಪಡೆಯೊಂದಿಗೆ, ದೇಶದಲ್ಲಿ ಮೊಬೈಲ್ ಗ್ರಾಹಕರ ಸಂಖ್ಯೆ 791.38 ಮಿಲಿಯನ್‌ಗಳಿಗೆ ತಲುಪಿದೆ ಎಂದು ಟ್ರಾಯ್ ಮೂಲಗಳು ತಿಳಿಸಿವೆ.
ಟೆಲಿಕಾಂ ರೆಗ್ಯೂಲೇಟರಿ ಅಥಾರಿಟಿ ಆಫ್ ಇಂಡಿಯಾ ವರದಿಗಳ ಪ್ರಕಾರ, ಗ್ರಾಹಕರ ಸಂಖ್ಯೆ ಮಾರ್ಚ್ ತಿಂಗಳಲ್ಲಿ ಶೇ.2.62ರಷ್ಟು ಏರಿಕೆಯಾಗಿ 771.18 ಮಿಲಿಯನ್‌ಗಳಿಗೆ ತಲುಪಿದೆ.
ನಗರ ಪ್ರದೇಶಗಳಲ್ಲಿ ಮೊಬೈಲ್ ಗ್ರಾಹಕರ ಸಂಖ್ಯೆ ಶೇ.66.42ರಿಂದ ಶೇ.66.36ಕ್ಕೆ ಕುಸಿತ ಕಂಡಿದೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್ ಗ್ರಾಹಕರ ಸಂಖ್ಯೆ ಶೇ.33.58ರಿಂದ ಶೇ.33.64ರಷ್ಟು ಏರಿಕೆಯಾಗಿದೆ ಎಂದು ಟ್ರಾಯ್ ವರದಿಯಲ್ಲಿ ಬಹಿರಂಗಪಡಿಸಿದೆ.
ವೋಡಾಫೋನ್ ಟೆಲಿಕಾಂ ಸಂಸ್ಥೆ, ಕಳೆದ ತಿಂಗಳಲ್ಲಿ 3.56 ಮಿಲಿಯನ್ ಗ್ರಾಹಕರ ಸೇರ್ಪಡೆಯೊಂದಿಗೆ ಅಗ್ರಸ್ಥಾನವನ್ನು ಪಡೆದಿದ್ದು, ಒಟ್ಟು 130.92 ಮಿಲಿಯನ್ ಬಳಕೆದಾರರನ್ನು ಹೊಂದಿದಂತಾಗಿದೆ.
ರಿಲಯನ್ಸ್ ಕಮ್ಯೂನಿಕೇಶನ್ಸ್, ಮಾರ್ಚ್ ತಿಂಗಳಲ್ಲಿ 3.3 ಮಿಲಿಯನ್ ಗ್ರಾಹಕರ ಸೇರ್ಪಡೆಯೊಂದಿಗೆ, ಒಟ್ಟು ಗ್ರಾಹಕರ ಸಂಖ್ಯೆ 132.18 ಮಿಲಿಯನ್‌ಗಳಿಗೆ ತಲುಪಿದ್ದು ಎರಡನೇ ಸ್ಥಾನ ಪಡೆದಿದೆ.
ಟೆಲಿಕಾಂ ದೈತ್ಯ ಕಂಪೆನಿಯಾದ ಭಾರ್ತಿ ಏರ್‌ಟೆಲ್, ಕಳೆದ ತಿಂಗಳು 3.2 ಮಿಲಿಯನ್ ಗ್ರಾಹಕರ ಸೇರ್ಪಡೆಯೊಂದಿಗೆ ಗ್ರಾಹಕರ ಸಂಖ್ಯೆ 159 ಮಿಲಿಯನ್‌ಗಳಿಗೆ ಏರಿಕೆಯಾಗಿದೆ ಎಂದು ಟ್ರಾಯ್ ಅದಿಕಾರಿಗಳು ತಿಳಿಸಿದ್ದಾರೆ.