ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 2010ರ ವರ್ಷಾಂತ್ಯಕ್ಕೆ 529.22 ಮಿಲಿಯನ್ ಮೊಬೈಲ್ ಗ್ರಾಹಕರು (Mobile subscribers | India | TRAI | Reliance Communications)
PTI
ಕಳೆದ ಡಿಸೆಂಬರ್ ತಿಂಗಳ ಅವಧಿಯಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆ 22.62 ಮಿಲಿಯನ್‌ಗಳಿಗೆ ಏರಿಕೆಯಾಗಿದ್ದು, 752.19 ಮಿಲಿಯನ್‌ ಗ್ರಾಹಕರಿಗೆ ತಲುಪಿದಂತಾಗಿದೆ ಎಂದು ಟ್ರಾಯ್ ಅಧಿಕಾರಿಗಳು ಹೇಳಿದ್ದಾರೆ.

ಕಳೆದ ನವೆಂಬರ್ ತಿಂಗಳ ಅವಧಿಯಲ್ಲಿ, ಮೊಬೈಲ್ ಬಳಕೆದಾರರ ಸಂಖ್ಯೆ 729.57 ಮಿಲಿಯನ್‌ಗಳಿಗೆ ತಲುಪಿತ್ತು.

ದೇಶದಲ್ಲಿ, ಒಟ್ಟಾರೆ ಟೆಲಿಫೋನ್ ಸಾಂದ್ರತೆ(ಪ್ರತಿ 100 ಜನರಿಗೆ ಮೊಬೈಲ್ ಫೋನ್) ಶೇ. 66.16ರಷ್ಟಕ್ಕೆ ತಲುಪಿದಂತಾಗಿದೆ.

ಟೆಲಿಕಾಂ ರೆಗ್ಯೂಲೇಟರಿ ಅಥಾರಿಟಿ ಆಫ್ ಇಂಡಿಯಾ ವರದಿಗಳ ಪ್ರಕಾರ, ವೈರ್‌ಲೆಸ್ ಬಳಕೆದಾರರ ಸಂಖ್ಯೆಯಲ್ಲಿ ಷೇ.2.95ರಷ್ಟು ಚೇತರಿಕೆ ಕಂಡಿದೆ.

ರಿಲಯನ್ಸ್ ಕಮ್ಯೂನಿಕೇಶನ್ಸ್ ಟೆಲಿಕಾಂ ಸಂಸ್ಥೆ, 3,2 ಮಿಲಿಯನ್ ಗ್ರಾಹಕರನ್ನು ಸೆಳೆದುಕೊಳ್ಳುವ ಮೂಲಕ 125.65 ಮೊಬೈಲ್ ಗ್ರಾಹಕರನ್ನು ಸೇರ್ಪಡೆಗೊಳಿಸಿದೆ.

ಭಾರ್ತಿ ಏರ್‌ಟೆಲ್ ಸಂಸ್ಥೆ, ಡಿಸೆಂಬರ್ ತಿಂಗಳ ಅವಧಿಯಲ್ಲಿ 3.1 ಮಿಲಿಯನ್ ಹೆಚ್ಚುವರಿ ಬಳಕೆದಾರರನ್ನು ಸೆಳೆಯುವ ಮೂಲಕ 152.49 ಮಿಲಿಯನ್ ಗ್ರಾಹಕರನ್ನು ಸೇರ್ಪಡೆಗೊಳಿಸಿದೆ.ವೋಡಾಫೋನ್ ಟೆಲಿಕಾಂ ಕಂಪೆನಿ, ಡಿಸೆಂಬರ್ ತಿಂಗಳ ಅವಧಿಯಲ್ಲಿ 3.09 ಮಿಲಿಯನ್ ಗ್ರಾಹಕರನ್ನು ಸೇರ್ಪಡೆಗೊಳಿಸಿದೆ.

ಬಿಎಸ್‌ಎನ್‌ಎಲ್ ಮತ್ತು ಐಡಿಯಾ ಸೆಲ್ಯೂಲರ್ ಟೆಲಿಕಾಂ ಕಂಪೆನಿಗಳು, ಕ್ರಮವಾಗಿ 2.97 ಮತ್ತು 2.95 ಮಿಲಿಯನ್ ಗ್ರಾಹಕರನ್ನು ಸೆಳೆಯವಲ್ಲಿ ಯಶಸ್ವಿಯಾಗಿವೆ. ಬಿಎಸ್‌ಎನ್‌ಎಲ್ ಸಂಸ್ಥೆಯ ಒಟ್ಟು ಮೊಬೈಲ್ ಗ್ರಾಹಕರ ಸಂಖ್ಯೆ, ಇದೀಗ 86.7 ಮಿಲಿಯನ್‌ಗೆ ತಲುಪಿದೆ. ಐಡಿಯಾ ಸೆಲ್ಯೂಲರ್ ಕಂಪೆನಿಯ ಒಟ್ಟು ಮೊಬೈಲ್ ಗ್ರಾಹಕರ ಸಂಖ್ಯೆ 81.7 ಮಿಲಿಯನ್‌ಗೆ ತಲುಪಿದೆ.
ಇವನ್ನೂ ಓದಿ