ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಅಗಸ್ಟ್‌‌ನಲ್ಲಿ 18.18 ಮಿನ್ ಮೊಬೈಲ್ ಗ್ರಾಹಕರ ಸೇರ್ಪಡೆ (TRAI | Mobile users | Vodafone)
Bookmark and Share Feedback Print
 
ಪ್ರಸಕ್ತ ವರ್ಷದ ಅಗಸ್ಟ್ ತಿಂಗಳ ಅವಧಿಯಲ್ಲಿ ಟೆಲಿಕಾಂ ಕಂಪೆನಿಗಳು 18.18 ಮಿಲಿಯನ್ ಮೊಬೈಲ್ ಗ್ರಾಹಕರನ್ನು ಸೇರ್ಪಡೆಗೊಳಿಸಿದ್ದು, ದೇಶದ ಒಟ್ಟು ಮೊಬೈಲ್ ಗ್ರಾಹಕರ ಸಂಖ್ಯೆ 670.60 ಮಿಲಿಯನ್‌ಗಳಿಗೆ ತಲುಪಿದೆ ಎಂದು ಟೆಲಿಕಾಂ ನಿಯಂತ್ರಕ ಸಂಸ್ಥೆ ಟ್ರಾಯ್ ಹೇಳಿಕೆ ನೀಡಿದೆ.

ಕಳೆದ ಜುಲೈ 2010ರಲ್ಲಿ 652.42 ಮಿಲಿಯನ್ ಮೊಬೈಲ್ ಗ್ರಾಹಕರಿಂದ, ಅಗಸ್ಟ್ ತಿಂಗಳ ಅವಧಿಯ ಮುಕ್ತಾಯಕ್ಕೆ 670.60 ಮಿಲಿಯನ್‌ಗಳಿಗೆ ತಲುಪಿದೆ ಎಂದು ಟ್ರಾಯ್ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಿದೆ.

ದೇಶದ ಒಟ್ಟು ಮೊಬೈಲ್ ಗ್ರಾಹಕರ ಸಂಖ್ಯೆ(ಮೊಬೈಲ್ ಮತ್ತು ಸ್ಥಿರ) ಅಗಸ್ಟ್ ತಿಂಗಳಾಂತ್ಯಕ್ಕೆ 706.37 ಮಿಲಿಯನ್‌ಗಳಿಗೆ ತಲುಪಿದೆ.ದೇಶದ ಟೆಲಿಫೋನ್ ಸಾಂದ್ರತೆ ಶೇ.59.63ಕ್ಕೆ ತಲುಪಿದೆ.

ದೇಶದ ಟೆಲಿಕಾಂ ಕಂಪೆನಿಗಳಲ್ಲಿ ಅಗ್ರಸ್ಥಾನದಲ್ಲಿರುವ ವೋಡಾಫೋನ್, ಅಗಸ್ಟ್ ತಿಂಗಳ ಅವಧಿಯಲ್ಲಿ 2.30 ಮಿಲಿಯನ್ ಗ್ರಾಹಕರನ್ನು ಸೇರ್ಪಡೆಗೊಳಿಸಿ, ಒಟ್ಟು 113.77 ಮಿಲಿಯನ್ ಗ್ರಾಹಕರನ್ನು ಹೊಂದಿದಂತಾಗಿದೆ.

ಅಗಸ್ಟ್ ತಿಂಗಳ ಅವಧಿಯಲ್ಲಿ ಬಿಎಸ್‌ಎನ್‌ಎಲ್ (2.25 ಮಿಲಿಯನ್), ಏರ್‌ಟೆಲ್ (2.03 ಮಿಲಿಯನ್), ರಿಲಯನ್ಸ್ ಕಮ್ಯೂನಿಕೇಶನ್ಸ್‌ (2.09 ಮಿಲಿಯನ್), ಎಂಟಿಎನ್‌ಎಲ್ (27,594)ಗ್ರಾಹಕರನ್ನು ಸೇರ್ಪಡೆಗೊಳಿಸಿವೆ ಎಂದು ಟ್ರಾಯ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ