ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಎಂಎನ್‌ಪಿ ಅರ್ಜಿ ಸಲ್ಲಿಸಿದವರಲ್ಲಿ ಗುಜರಾತ್ ನಂ.1: ಟ್ರಾಯ್ (Telecom Regulatory Authority of India | Mobile number portability | MNP)
PTI
ಮೊಬೈಲ್ ನಂಬರ್ ಪೋರ್ಟೇಬಿಲಿಟಿಗೆ ಮನವಿ ಸಲ್ಲಿಸಿದವರ ಸಂಖ್ಯೆಯನ್ನು ಗಮನಿಸಿದಲ್ಲಿ ಗುಜರಾತ್, ರಾಜಸ್ಥಾನ ಮತ್ತು ಕರ್ನಾಟಕದ ಬಹುತೇಕ ಮೊಬೈಲ್ ಬಳಕೆದಾರರು ತಮ್ಮ ಸೇವಾ ಆಪರೇಟರ್‌ಗಳ ಸೇವೆಗಳಿಂದ ಅಸಂತುಷ್ಟರಾಗಿರುವುದು ಕಂಡುಬಂದಿದೆ ಎಂದು ಟೆಲಿಕಾಂ ನಿಯಂತ್ರಕ ಸಂಸ್ಥೆ ಹೇಳಿಕೆ ನೀಡಿದೆ.

ಏಪ್ರಿಲ್ ಮಾಸಾಂತ್ಯಕ್ಕೆ ದೇಶಾದ್ಯಂತ 8.54 ಮಿಲಿಯನ್ ಮೊಬೈಲ್ ಬಳಕೆದಾರರು ಎಂಎನ್‌ಪಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಗುಜರಾತ್, ಕರ್ನಾಟಕ ಮತ್ತು ರಾಜಸ್ಥಾನ ರಾಜ್ಯಗಳಿಂದ 2.2 ಮಿಲಿಯನ್ ಮೊಬೈಲ್ ಗ್ರಾಹಕರು ಎಂಎನ್‌ಪಿಗೆ ಅರ್ಜಿ ಸಲ್ಲಿಸಿದ್ದಾರೆ.

ಮೊಬೈಲ್ ನಂಬರ್ ಪೋರ್ಟೇಬಿಲಿಟಿಯಲ್ಲಿ ಮೊಬೈಲ್ ಬಳಕೆದಾರರು ತಮ್ಮ ನಂಬರ್ ಉಳಿಸಿಕೊಂಡು ಸೇವಾ ಆಪರೇಟರ್‌ಗಳನ್ನು ಬದಲಿಸಬಹುದಾಗಿದೆ.

ಆಪರೇಟರ್‌ಗಳ ಗುಣಮಟ್ಟ ಹೆಚ್ಚಳ ಹಾಗೂ ಗ್ರಾಹಕರಿಗೆ ಹೆಚ್ಚಿನ ಅಧಿಕಾರ ನೀಡಲು ಕೇಂದ್ರದ ಟೆಲಿಕಾಂ ಸಚಿವಾಲಯ ಪ್ರಸಕ್ತ ವರ್ಷದ ಜನೆವರಿ 20 ರಂದು ಎಂಎನ್‌ಪಿ ಸೇವೆಯನ್ನು ಆರಂಭಿಸಿತ್ತು.

ಎಂಎನ್‌ಪಿಗಾಗಿ ಅರ್ಜಿ ಸಲ್ಲಿಸಿದ ರಾಜ್ಯಗಳಲ್ಲಿ ಗುಜರಾತ್ ಅಗ್ರಸ್ಥಾನದಲ್ಲಿದೆ. ಗುಜರಾತ್‌ನ 833,672 ಮೊಬೈಲ್ ಗ್ರಾಹಕರು ಎಂಎನ್‌ಪಿಗಾಗಿ ಅರ್ಜಿ ಸಲ್ಲಿಸಿದ್ದಾರೆ.ರಾಜಸ್ಥಾನದಿಂದ 719,767 ಮತ್ತು ಕರ್ನಾಟಕದಿಂದ 663,151 ಹಾಗೂ ತಮಿಳುನಾಡಿನಿಂದ 641,437 ಮೊಬೈಲ್ ಗ್ರಾಹಕರು ಎಂಎನ್‌ಪಿಗಾಗಿ ಅರ್ಜಿ ಸಲ್ಲಿಸಿದ್ದಾರೆ.
ಇವನ್ನೂ ಓದಿ