ವಿದೇಶಿ ಕರೆಗಳ ದರಗಳನ್ನು ಕಡಿತಗೊಳಿಸಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ತೀರ್ಮಾನಿಸಿದ್ದು, ಇದರಿಂದ ಜನಸಾಮಾನ್ಯರು ಸೇರಿದಂತೆ ವಾಣಿಜ್ಯೋಪಯೋಗಿ ಕ್ಷೇತ್ರಗಳಾದ ಐಟಿಇ, ಬಿಪಿಒ, ಕೆಪಿಒ, ಕಾಲ್ ಸೆಂಟರ್, ಬ್ಯಾಂಕುಗಳು ಮತ್ತು ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೂ ಅಲ್ಲದೆ, ಸಮೂಹ ವಿದೇಶಿ ಕರೆಗಳಲ್ಲಿ ವ್ಯವಹರಿಸುತ್ತಿರುವ ಐಎಸ್‌ಪಿಗಳಿಗೂ ಅನುಕೂಲವಾಗಲಿದೆ.
ಭಾರತದಲ್ಲಿ ಅಂತಾರಾಷ್ಟ್ರೀಯ ಕರೆ ಸಾಮರ್ಥ್ಯಗಳನ್ನು ಉಪಯೋಗಿಸುತ್ತಿರುವ ಕೇಬಲ್ ಲ್ಯಾಂಡಿಂಗ್ ಸ್ಟೇಶನ್‌ಗಳಿಗೆ ಅಂತಾರಾಷ್ಟ್ರೀಯ ಕರೆ ಆಪರೇಟರ್‌ಗಳು ಮತ್ತು ಇಂಟರ್ನೆಟ್ ಸೇವಾ ನೀಡುಗರು (ಐಎಸ್‌ಪಿ) ಪಾವತಿಸುತ್ತಿರುವ ಶುಲ್ಕಗಳನ್ನು ಟ್ರಾಯ್ ಪರಿಶೀಲಿಸುತ್ತಿದೆ.
ಮಾರುಕಟ್ಟೆ ಬೇಡಿಕೆ ಮತ್ತು ಪ್ರಸ್ತುತ ವಿದೇಶಿ ಕರೆ ದರಗಳನ್ನು ಆಧರಿಸಿ ನೂತನ ಬೆಲೆಪಟ್ಟಿಯನ್ನು ಸಿದ್ದಪಡಿಸಲಾಗುತ್ತಿದ್ದು ಮುಂದಿನ ಎರಡು ತಿಂಗಳಲ್ಲೇ ನೂತನ ದರಪಟ್ಟಿ ಹೊರಬರಲಿದೆ. ಈ ನೂತನ ದರಕಡಿತದಿಂದ ಐಟಿಇ, ಬಿಪಿಒ ಕ್ಷೇತ್ರಗಳು ಸೇರಿದಂತೆ ಅಂತಾರಾಷ್ಟ್ರೀಯ ಕರೆಗಳನ್ನು ಹೆಚ್ಚಾಗಿ ಬಳಸುವವರಿಗೆ ಅನುಕೂಲವಾಗಲಿದೆ.
ಇದುವರೆಗೆ ಅಂತಾರಾಷ್ಟ್ರೀಯ ಕರೆ ದರಗಳು ಆಪರೇಟರ್, ಪ್ಯಾಕೇಜ್, ದೇಶ ಮತ್ತು ಕರೆ ಮಾಡುವ ಸಮಯಗಳನ್ನೇ ಆಧರಿಸಿದ್ದು, ಯಾವುದೇ ನಿಗದಿತ ಶುಲ್ಕ ವ್ಯವಸ್ಥೆ ಇರಲಿಲ್ಲ.
ಅಂತಾರಾಷ್ಟ್ರೀಯ ಕರೆ ದರಗಳ ಪಟ್ಟಿ ಟ್ರಾಯ್‌ನ ನಿಯಮಗಳಂತೆ ಅನ್ವಯವಾಗುತ್ತಿದ್ದು, 2007ರಲ್ಲಿ ಖಾಸಗಿ ದೂರಸಂಪರ್ಕ ಸೇವಾ ವಲಯಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಅವಧಿ ಮೂರು ವರ್ಷಗಳ ಅವದಿ ಇದೀಗ ಕೊನೆಗೊಂಡಿದೆ.